₹6.11 ಲಕ್ಷಕ್ಕೆ ಮಾರಾಟವಾದ ಜೋಡೆತ್ತು !

KannadaprabhaNewsNetwork |  
Published : Nov 11, 2024, 12:48 AM IST
ಮಾರಾಟದ ಇತಿಹಾಸ ನಿರ್ಮಿಸಿದ ಜೋಡೆತ್ತು ಸಹದೇವ ಚಿಮ್ಮಟ ಪರಿವಾರ ಭಾನುವಾರ  ಪಟ್ಟಣದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಟ್ಟರು. | Kannada Prabha

ಸಾರಾಂಶ

ಕಬ್ಬೂರ ಪಟ್ಟಣದಲ್ಲಿ ಭಾನುವಾರ ಸಂಜೆ ಎತ್ತುಗಳ ಮೆರವಣಿಗೆ ಎಲ್ಲರ ಮನ ಸೆಳೆಯಿತು. ಮೆರವಣಿಗೆಯ ವಿಶೇಷತೆಯೆಂದರೆ ಈ ಜೋಡೆತ್ತುಗಳು ಬರೋಬ್ಬರಿ ₹6 ಲಕ್ಷ 11 ಸಾವಿರಕ್ಕೆ ಮಾರಾಟವಾಗಿವೆ. ದಾಖಲೆ ಬೆಲೆಗೆ ಮಾರಾಟವಾಗಿದ್ದರಿಂದ ರೈತರು ಎತ್ತುಗಳನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಕಬ್ಬೂರ

ಪಟ್ಟಣದಲ್ಲಿ ಭಾನುವಾರ ಸಂಜೆ ಎತ್ತುಗಳ ಮೆರವಣಿಗೆ ಎಲ್ಲರ ಮನ ಸೆಳೆಯಿತು. ಮೆರವಣಿಗೆಯ ವಿಶೇಷತೆಯೆಂದರೆ ಈ ಜೋಡೆತ್ತುಗಳು ಬರೋಬ್ಬರಿ ₹6 ಲಕ್ಷ 11 ಸಾವಿರಕ್ಕೆ ಮಾರಾಟವಾಗಿವೆ. ದಾಖಲೆ ಬೆಲೆಗೆ ಮಾರಾಟವಾಗಿದ್ದರಿಂದ ರೈತರು ಎತ್ತುಗಳನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಪಟ್ಟಣದ ಸಹದೇವ ಗುರಪ್ಪ ಚಿಮ್ಮಟ ಹಾಗೂ ಸಹೋದರರು ಸಾಕಿದ ಕಿಲಾರಿ ಎತ್ತುಗಳೇ ದಾಖಲೆ ಬೆಲೆಗೆ ಮಾರಟವಾದವು. ಈ ಎತ್ತುಗಳಲ್ಲಿ ಒಂದನ್ನು 1 ವರ್ಷ 6 ತಿಂಗಳು ಹಿಂದೆ ಬಬಲಾದಿಯ ಜಾತ್ರೆಯಲ್ಲಿ ₹80 ಸಾವಿರಕ್ಕೆ ತಂದಿದ್ದರೆ, ಇನ್ನೊಂದನ್ನು 3 ತಿಂಗಳು ಹಿಂದೆ ವಂಟಗೂಡಿಯ ರೈತರೊಬ್ಬರ ಬಳಿ ₹ 1 ಲಕ್ಷ 51 ಸಾವಿರಕ್ಕೆ ಅಂದರೆ ಜೊಡೆತ್ತುಗಳಿಗೆ ₹2. 31 ಸಾವಿರಕ್ಕೆ ಕೊಂಡಿದ್ದರು. ಮಹಾರಾಷ್ಟ್ರ ಪುಣೆಯ ರವೀಂದ್ರ ತಾತ್ಯಾ ಖಂಡ್ರೆ ಎಂಬುವವರು ಮನೆಗೆ ಬಂದು ಈ ಕಿಲಾರಿ ಎತ್ತುಗಳನ್ನು ₹6 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾಗಿವೆ. ಎತ್ತುಗಳು ಧಾರವಾಡ ಕೃಷಿ ಮೇಳ ಹಾಗೂ ನಾನಾ ಭಾಗಗಳಲ್ಲಿ ಜರುಗಿದ ಎತ್ತುಗಳ ಪ್ರದರ್ಶನಗಳಲ್ಲಿ ಪ್ರಶಸ್ತಿ ಪಡೆದಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು