ಕನ್ನಡಪ್ರಭ ವಾರ್ತೆ ಪರಶುರಾಂಪುರ
ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ಭಾನುವಾರ ಗ್ರಾಮದ ನಾಯಕ ಸಮುದಾಯ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಉಧ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಲ್ಮೀಕಿ ಅವರು ಇಡೀ ಜಗತ್ತಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಹತ್ತು ಹಲವು ಸೌಕರ್ಯಗಳನ್ನು ಒದಗಿಸಿದ್ದಾರೆ ಅವುಗಳ ಸದುಪಯೋಗಪಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದರು.ಮೊಳಕಾಲ್ಮೂರು ಕನ್ನಡ ಉಪನ್ಯಾಸಕ ಬಿ.ಗೋವಿಂದಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಕೃತಿಯ ಮೂಲಕ ಕೌಟುಂಬಿಕ ಮತ್ತು ನೈತಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಇವರ ಆದರ್ಶಗಳಂತೆ ನಾವು ನಮ್ಮ ಬದುಕನ್ನು ರೂಪಿಸಿಕೊಂಡು ಇತರೆ ಸಮುದಾಯದವರ ಜತೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಂಡು ಗ್ರಾಮದ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ನಾವು ಒತ್ತು ನೀಡಬೇಕು ಎಂದರು.
ನಿವೃತ್ತ ಬ್ಯಾಂಕ್ ನೌಕರರಾದ ಶಾರದಾ ಮೂಡಲಗಿರಿಯಪ್ಪ ಮಾತನಾಡಿ, ಹಳ್ಳಿಗಾಡಿನ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಗ್ರಾಮದ ಸರ್ವರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಗ್ರಾಮದಲ್ಲಿ ವಾಲ್ಮೀಕಿ ಭಾವಚಿತ್ರವನ್ನು ಸಾರೋಟಿನಲ್ಲಿ ಪ್ರತಿಷ್ಟಾಪಿಸಿ ಕುಂಭ ಮೇಳದೊಂದಿಗೆ ವಿವಿಧ ಜನಪದ ವಾದ್ಯಗಳ ಮೂಲಕ ಮೆರವಣಿಗೆ ಮಾಡಿದರು. ಗ್ರಾಮದಲ್ಲಿ ಸಂಜೆ ಜಯಂತಿಯ ಅಂಗವಾಗಿ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮದಲ್ಲಿ ರಾತ್ರಿ ಮೆರವಣಿಗೆ ಮತ್ತು ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಂಡರು ಗ್ರಾಮದ ಹಿರಿಯ ಮುಖಂಡ ಗುರುಸ್ವಾಮಿ ಪ್ರಾರ್ಥಿಸಿ ಕೆಒಎಫ್ ಕರಿಯಪ್ಪ ಸ್ವಾಗತಿಸಿ ಶಿಕ್ಷಕ ಗಿರೀಶ ನಿರೂಪಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಒ.ಬೈಲಪ್ಪ, ವಾಲ್ಮೀಕಿ ಸಂಘದ ಅಧ್ಯಕ್ಷ ಟಿ.ಎಂ.ಕುಮಾರ, ಕರಿಯಪ್ಪ, ಮೂಡಲಗಿರಿಯಪ್ಪ ಶಾರದಮ್ಮ, ಡಿಬಿಹಳ್ಳಿ ಬೆಸ್ಕಾಂ ಎಸ್‌ಒ ಕುಮಾರ್, ನಿವೃತ್ತ ನೌಕರರಾದ ಟಿ ಚಂದ್ರಣ್ಣ, ಎಂ.ಬಸವರಾಜು, ಲಕ್ಷ್ಮಣ, ಬಸಮ್ಮ, ರಾಜಣ್ಣ, ಅಂಜನಮೂರ್ತಿ, ಚಿತ್ರಲಿಂಗಪ್ಪ, ಎಂ ಬಸವರಾಜು, ತಿಪ್ಪೇಸ್ವಾಮಿ, ಮಂಜುನಾಥ ನಾಯಕ, ರವಿಚಂದ್ರ, ಹನುಮಂತರಾಯ ಮಂಜುನಾಥ, ಗ್ರಾಮದ ನಾಯಕ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.