ಗಣಪನ ಪೂಜಿಸಿ ಭಕ್ತಿಯಲ್ಲಿ ಮಿಂದೆದ್ದ ಜನತೆ

KannadaprabhaNewsNetwork |  
Published : Sep 09, 2024, 01:38 AM IST
ಶರ‍್ಷಿಕೆ-೯ಕೆ.ಎಂ.ಎಲ್ಆರ್.೩- ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ದೇವಾಲಯ ಸಮಿತಿ ವತಿಯಿಂದ ೧೨ಜ್ಯೋತಿರ್ಲಿಂಗ ಪರಿವಾರ  ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. | Kannada Prabha

ಸಾರಾಂಶ

ಜನತೆ ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಿ ಹಬ್ಬ ಆಚರಿಸಿದರು. ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ವಿವಿಧ ರೀತಿಯ ದೃಶ್ಯಗಳನ್ನು ನಿರ್ಮಿಸಿ ಬಗೆ ಬಗೆಯ ಬೃಹದಾಕಾರ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದರು.

ಕನ್ನಡಪ್ರಭ ವಾರ್ತೆ ಮಾಲೂರು

ವಿಘ್ನ ನಿವಾರಕ ಗಣಪನನ್ನು ಮಾಲೂರು ಜನತೆ ಅದ್ಧೂರಿಯಾಗಿ ಬರಮಾಡಿಕೊಂಡು, ಎಲ್ಲ ಕಡೆ ಪ್ರತಿಷ್ಠಾಪಿಸಿ ಜನತೆ ಭಕ್ತಿಯಲ್ಲಿ ಮಿಂದೆದ್ದರು.

ಗಣೇಶೋತ್ಸವ ಪ್ರಯುಕ್ತ ಪಟ್ಟಣದಲ್ಲಿ ಧರ್ಮರಾಯಸ್ವಾಮಿ ದೇವಾಲಯ ಸಮಿತಿ ವರಸಿದ್ಧಿ ವಿನಾಯಕ ಕನ್ನಡ ಅಭಿಮಾನಿ ಬಳಗ ಹಿಂದೂಸ್ತಾನ್ ಯುವ ವೃಂದ ಸೇರಿದಂತೆ ವಿವಿಧ ಕಡೆ ಪರಿಸರ ಸ್ನೇಹಿ ಗಣಪತಿ ಮೂರ್ತಿ ಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ಪ್ರತಿಷ್ಠಾಪನೆಗೆ ನಿಯಮ ಪಾಲನೆ

ತಾಲೂಕಿನಲ್ಲಿ ಗಣೇಶೋತ್ಸವ ಹಬ್ಬವನ್ನು ನಾಗರಿಕರು ಮನೆಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಿ ಹಬ್ಬ ಆಚರಣೆಯನ್ನು ಮಾಡಿದರೆ ಸಂಘ ಸಂಸ್ಥೆಗಳು ಪುರಸಭೆ ಪೊಲೀಸ್ ಇಲಾಖೆ ಅನುಮತಿ ಪಡೆದು ಸಾರ್ವಜನಿಕವಾಗಿ ವಿವಿಧ ರೀತಿಯ ದೃಶ್ಯಗಳನ್ನು ನಿರ್ಮಿಸಿ ಬಗೆ ಬಗೆಯ ಬೃಹದಾಕಾರ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.

ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ದೇವಾಲಯ ಸಮಿತಿ ವತಿಯಿಂದ ದ್ವಾರದಲ್ಲಿ ಶಿವಲಿಂಗ ಗೋಪುರ ನಿರ್ಮಿಸಿ ೧೨ ಜ್ಯೋತಿರ್ಲಿಂಗಗಳ ಸಮೇತ ಪರಿವಾರ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಕುಪ್ಪ ಶೆಟ್ಟಿ ಬಾವಿ ಬಳಿ ಇರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಆವರಣದಲ್ಲಿ ಕನ್ನಡ ಅಭಿಮಾನಿ ಬಳಗದ ವತಿಯಿಂದ ಗಜ ಸುರನ ಸಂಹಾರ ಶ್ರೀ ಮಹಾ ಗಣಪತಿಯ ಸೃಷ್ಟಿ ಸಮೇತ ಸುಂದರವಾದ ದೃಶ್ಯವಳಿ ಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಲಾಯಿತು.

ರಂಗಮಂದಿರದಲ್ಲಿ ಗಣಪ

ಪುರಸಭೆಯ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಟ್ಯಾಂಕ್ ರಸ್ತೆಯಲ್ಲಿ ಹಿಂದೂಸ್ತಾನ್ ವೃಂದದವರು ವಿಶೇಷ ಸೆಟ್ ನಿರ್ಮಿಸಿ ವಿದ್ಯುತ್ ವಿಘ್ನೇಶ್ವರ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಾಂಧಿ ವೃತ್ತದಲ್ಲಿ ಜೈ ಹಿಂದ್ ವಿನಾಯಕ ಯುವಕರ ಬಳಗದ ವತಿಯಿಂದ ಬೃಹದಾಕಾರದ ಪುರಿ ಜಗನ್ನಾಥೇಶ್ವರ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

15 ಅಡಿ ಎತ್ತರದ ಬೃಹತ್‌ ಗಣಪ

ಕುಂಬೇಶ್ವರ ಬಡಾವಣೆಯಲ್ಲಿ ಜೈ ಆಂಜನೇಯ ಗೆಳೆಯರ ಬಳಗದ ವತಿಯಿಂದ ೯ ವರ್ಷದ ಗಣೇಶೋತ್ಸವ ನಡೆಯಿತು. ಸುಮಾರು ೧೫ ಅಡಿ ಎತ್ತರದ ಗಣಪತಿಯನ್ನು ತಂದು ಕುಳ್ಳಿರಿಸಿ ವಿಶೇಷವಾಗಿ ಪೂಜೆ ಸಲ್ಲಿಸಿದರು. ಕುಂಭೇಶ್ವರ ಕಲ್ಯಾಣ ಮಂಟಪ ಗಾಂವೃತ ಬಾಬುರಾವ್ ರಸ್ತೆ ಮಾರುತಿ ಬಡಾವಣೆ ಗಾಂವೃತ್ತ ಮಾರುತಿ ಬಡಾವಣೆ ಸಿಪಿ ಬಡಾವಣೆ ಪಟೇಲರ ರಸ್ತೆ ಸೇರಿದಂತೆ ವಿವಿಧ ಕಡೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ