ದಲಿತರ ಜಮೀನು ಕಬಳಿಸಿ ಮೇಲ್ವರ್ಗಕ್ಕೆ ನೀಡುವ ಹುನ್ನಾರ

KannadaprabhaNewsNetwork |  
Published : Feb 22, 2026, 02:00 AM IST
ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೪ ಎಕರೆ ೦೫ ಗುಂಟೆ ಜಮೀನು ಪರಿಶಿಷ್ಟ ಪಂಗಡ(ಎಸ್.ಟಿ) ದಲಿತ ಸಮುದಾಯಕ್ಕೆ ಸೇರಿದ ನಾಗಪ್ಪ ಬಿನ್ ಮರಿಯಣ್ಣನವರ ಹೆಸರಿಗೆ ಪ್ರಸ್ತುತ ಖಾತೆ ಪಹಣಿ ದಾಖಲಾತಿಗಳಿದ್ದು, ಅವರ ಮರಣ ನಂತರ ಕುಟುಂಬಸ್ಥರಿಗೆ ಪೌತಿ ಖಾತೆ ಮಾಡಲು ಕಾನೂನು ಬದ್ದವಾಗಿ ಅರ್ಜಿ ಸಲ್ಲಿಸಿದ್ದರೂ ಸಹ ತಹಸೀಲ್ದಾರ್‌ರವರು ದಲಿತ ವಿರೋಧಿ ನೀತಿ ಅನುಸರಿಸಿ ನ್ಯಾಯಲಯದ ಮೂಲಕ ಮೇಲ್ವರ್ಗದ ಜಾತಿಯವರಾದ ಪಾಲಾಕ್ಷಪ್ಪ ಗೌಡ ಜಿ.ಎಸ್ ಬಿನ್ ಸಂಗಪ್ಪಗೌಡರಿಗೆ ೨ ಎಕರೆ ೦.೩೯ ಗುಂಟೆ ಜಮೀನನ್ನು ಕಾನೂನು ಬಾಹಿರವಾಗಿ ಖಾತೆ ಪಹಣಿ ಮಾಡಲು ಆದೇಶ ಮಾಡಿರುವುದನ್ನು ರದ್ದು ಪಡಿಸಬೇಕೆಂದು. ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಲಾಯತು. | Kannada Prabha

ಸಾರಾಂಶ

ತಾಲೂಕಿನಲ್ಲಿ ದಲಿತ ಕುಟುಂಬಕ್ಕೆ ಸೇರಿದ ಜಮೀನಿನ ಖಾತೆ ಪಹಣಿಯನ್ನು ಮೇಲ್ವರ್ಗದ ವ್ಯಕ್ತಿ ಹೆಸರಿಗೆ ಮಾಡಲು ತಹಸೀಲ್ದಾರ್‌ ಮಾಡಿರುವ ಆದೇಶ ರದ್ದು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ತಾಲೂಕಿನಲ್ಲಿ ದಲಿತ ಕುಟುಂಬಕ್ಕೆ ಸೇರಿದ ಜಮೀನಿನ ಖಾತೆ ಪಹಣಿಯನ್ನು ಮೇಲ್ವರ್ಗದ ವ್ಯಕ್ತಿ ಹೆಸರಿಗೆ ಮಾಡಲು ತಹಸೀಲ್ದಾರ್‌ ಮಾಡಿರುವ ಆದೇಶ ರದ್ದು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಿತು.

ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ದಲಿತ ಮುಖಂಡರು, ಅರಹತೊಳಲು ಗ್ರಾಮದ ಸರ್ವೆ ನಂ.೦೭ರಲ್ಲಿ ಇರುವ ೪ ಎಕರೆ ೦೫ ಗುಂಟೆ ಜಮೀನಿನ ಮಾಲೀಕರಿಂದ ನಾಗಪ್ಪ ಬಿನ್ ಮರಿಯಣ್ಣನವರ ಮರಣ ಹೊಂದಿರುವ ವಿಚಾರ ತಿಳಿದು ಸಂಬಂಧಪಟ್ಟ ಜಮೀನಿನ ವಾರಸುದಾರರಾದ ಹನುಮಂತಪ್ಪ ಬಿನ್ ಲೇಟ್ ಮರಿಯಣ್ಣನವರಿಗೆ ನೋಟಿಸ್ ನೀಡಿರುತ್ತಾರೆ. ಅದರಂತೆ ಹನುಮಂತಪ್ಪನವರು ಪೌತಿ ಖಾತೆಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ವಂಶವೃಕ್ಷದ ಮೂಲಕ ದಿನಾಂಕ: ೨೭-೧೦-೨೦೨೫ರಂದು ಜಂಟಿ ಖಾತೆ ಮಾಡಲು ಹೊಳೆಹೊನ್ನೂರು ನಾಡ ಕಚೇರಿಯ ಮೂಲಕ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸುತ್ತಾರೆ. ಆದರೆ 2025ರ ನ.6ರಂದು ಅರಹತೋಳಲು ಗ್ರಾಮದ ಸರ್ವೆ ನಂ: ೭ರಲ್ಲಿ ೪ ಎಕರೆ ೫ ಗುಂಟೆ ಜಮೀನಿನ ಪೈಕಿ ೨ ಎಕರೆ ೩೯ ಗುಂಟೆ ಜಮೀನು ಪಾಲಾಕ್ಷಪ್ಪ ಗೌಡ ಜಿ.ಎಸ್ ಬಿನ್ ಸಂಗಪ್ಪಗೌಡನಿಗೆ ಆದ ನನಗೆ ಪಿತ್ರಾರ್ಜಿತವಾಗಿ ಬಂದಿರುತ್ತದೆ ಎಂದು ತಕಾರಾರು ಅರ್ಜಿ ಸಲ್ಲಿಸಿದ್ದಾರೆ. ಪೌತಿಖಾತೆಗೆ ಅರ್ಜಿ ಸಲ್ಲಿಸಿರುವ ಹನುಮಂತಪ್ಪನಿಗೂ ಮತ್ತು ಪಾಲಾಕ್ಷಪ್ಪ ಗೌಡ ಜಿ.ಎಸ್ ರವರಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂಲ ಖಾತೆದಾರರಾದ ನಾಗಪ್ಪನವರು ಪರಶಿಷ್ಟ ಪಂಗಡ ನಾಯಕ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಪಾಲಾಕ್ಷಪ್ಪ ಗೌಡ ಜಿ.ಎಸ್‌ರವರು ಲಿಂಗಾಯತ ಗೌಡ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಜಮೀನು ಕಬಳಿಸುವ ದುರುದ್ದೇಶದಿಂದ ತಕಾರಾರು ಅರ್ಜಿದಾರರಾದ ಪಾಲಾಕ್ಷಪ್ಪ ಗೌಡ ಜಿ.ಎಸ್‌ರವರು ತಮ್ಮ ಕುಟುಂಬದ ಆಸ್ತಿಯನ್ನು ವಿಭಾಗ ಪತ್ರ ಮಾಡಿಕೊಳ್ಳುವ ಸಂದರ್ಭದಲ್ಲಿ ಅರಹತೊಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೨ ಎಕರೆ ೩೯ ಗುಂಟೆ ಜಮೀನು ನಮಗೆ ಪಿತ್ರಾರ್ಜಿತವಾಗಿ ಬಂದಿರುತ್ತದೆ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡು ತಹಸೀಲ್ದಾರ್ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆಂದು ದೂರಿದರು.

ಈ ನಡುವೆ ತಹಸೀಲ್ದಾರ್‌ ಸಂಬಂಧಪಟ್ಟ ಅಧಿಕಾರಿಗಳಿಂದ ನಿಖರವಾದ ಮಾಹಿತಿ ಪಡೆಯದೆ ದಲಿತ ಸಮುದಾಯದ ಕುಟುಂಬಸ್ಥರಿಗೆ ಆಧಾರವಾಗಿದ್ದ ಜಮೀನನ್ನು ಕಿತ್ತುಕೊಂಡು ಪಾಲಾಕ್ಷಪ್ಪ ಗೌಡ ಜಿ.ಎಸ್ ರವರಿಗೆ ೨ ಎಕರೆ ೩೯ ಗುಂಟೆ ಜಮೀನು ಖಾತೆ ಮಾಡಲು ನೀಡಿರುವ ಆದೇಶವನ್ನು ತಕ್ಷಣ ರದ್ದುಪಡಿಸಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಿಲ್ಲಾ ಅಂಗವಿಕಲರ ವಿಭಾಗದ ಕಾಣಿಕ್‌ರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಕೆ. ರಂಗನಾಥ್, ತಾಲೂಕು ಸಂಚಾಲಕ ಸಂದೀಪ್ ಆರ್., ಎನ್.ಪ್ರಸನ್ನ ಕುಮಾರ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಲ್ಯಾಣ ಕರ್ನಾಟಕ ವೃಂದ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ
ಸಂಸ್ಕೃತಿಯ ಪ್ರತೀಕ ಶಾರದ ವಿದ್ಯಾಸಂಸ್ಥೆ