ಮುಂಡಗೋಡ: ಚುನಾವಣೆಯಲ್ಲಿ ಗೆಲ್ಲಲಾಗದೆ ಸೋತು ಸೋತು ಹತಾಶರಾಗಿರುವ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನತೆ ಬೇಸತ್ತಿದ್ದಾರೆ. ವಾಲ್ಮೀಕಿ ಸಮುದಾಯಕ್ಕಾಗಿ ಮೀಸಲಿಟ್ಟ ₹೧೮೪ ಕೋಟಿ ಸೇರಿದಂತೆ ವಿವಿಧ ಹಿಂದುಳಿದ ನಿಗಮಗಳ ಹಣವನ್ನು ನುಂಗಿದ್ದಾರೆ. ಪ್ರತಿ ಇಲಾಖೆಯನ್ನು ಭ್ರಷ್ಟಾಚಾರದ ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ಕಳೆದ ೧೨ ವರ್ಷಗಳಿಂದ ಯಾವುದೇ ಜಾತಿ ಧರ್ಮಕ್ಕೆ ಸೀಮಿತಗೊಳಿಸದಂತೆ ನೀಡಿದಂತಹ ಯೋಜನೆ ಹಾಗೂ ಕಳೆದ ಮೂರುವರೆ ವರ್ಷದಿಂದ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಶಾಂತಾರಾಮ ಸಿದ್ದಿ, ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಅಶೋಕ ಚಲವಾದಿ, ರಾಜ್ಯ ಎಸ್ಟಿ ಮೋರ್ಚಾ ಕಾರ್ಯದರ್ಶಿ ಸಂತೋಷ ತಳವಾರ, ಬಿಜೆಪಿ ಧುರೀಣ ಬಾಲಕೃಷ್ಣ ನಾಯಕ, ಪ್ರಸಾದ ಪ್ರಮೋದ ಹೆಗಡೆ, ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ರಾವಳ, ಮಹೇಶ ಹೊಸಕೊಪ್ಪ, ನಾಗರಾಜ ಬೆಣ್ಣಿ, ಚಂದ್ರಕಾಂತ ಪಾಟೀಲ, ರಾಘು ಭಟ್, ಸುನೀಲ ಸೆಳಕೆ, ಲೇಸಮ್ಮ ಥೋಮಸ್, ಗಣೇಶ ಪಾಟಣಕರ, ಅನಿಲ ರಾವಳ ಮುಂತಾದವರು ಉಪಸ್ಥಿತರಿದ್ದರು. ಗುಡ್ಡಪ್ಪ ತಳವಾರ ಸ್ವಾಗತಿಸಿದರು. ಪ್ರಮೋದ ಕೆಳಗಿನಮನಿ ನಿರೂಪಿಸಿದರು.ಬಿಜೆಪಿ ಸೇರ್ಪಡೆ: ಕಾತೂರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕಾಂತ ಪಾಟೀಲ ಹಾಗೂ ಗ್ರಾಪಂ ಮಾಜಿ ಸದಸ್ಯ ನಾಗೇಂದ್ರ ವರ್ದಿ ನೇತೃತ್ವದಲ್ಲಿ ತಾಪಂ ಮಾಜಿ ಅಧ್ಯಕ್ಷ ಮೋಹನ ಕೇದಾರ, ಯಲ್ಲಪ್ಪಗೌಡ ಪಾಟೀಲ, ಶಾಂತೇಶ ಕಡಬಗೇರಿ, ಶಿವಾನಂದ ಮೇಲಿನಮನಿ, ಮರ್ಧಾನಸಾಬ ಬಳಿಗಾರ, ಬಸವರಾಜ ಮಡಿವಾಳ ಸೇರಿದಂತೆ ಸುಮಾರು ೧೦೦ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.