ಸಂಡೂರು: ಸಮಾಜದಲ್ಲಿ ಕಾಯಕ, ದಾಸೋಹ, ಧಾರ್ಮಿಕ ಸಮಾನತೆಯನ್ನು ಹುಟ್ಟು ಹಾಕಿದವರು ವಚನಕಾರರು ಎಂದು ಬಿಕೆಜಿ ಗ್ಲೋಬಲ್ ಶಾಲೆಯ ಕನ್ನಡ ಉಪನ್ಯಾಸಕ ಚಂದ್ರಪ್ರಭಾ ಕೆ.ವೈ. ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ ಹಾಗೂ ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿದರು.
ಸನ್ಮಾನ:ಕಾರ್ಯಕ್ರಮದಲ್ಲಿ ಕಸಾಪದಿಂದ ೨೦೨೫-೨೬ನೇ ಸಾಲಿನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ತಾಳೂರಿನ ಬಂಡ್ರಿ ಲಿಂಗಪ್ಪ, ಬಳ್ಳಾರಿ ಜಿಲ್ಲಾ ರಾಜ್ಯೋತ್ಸವ ಸಾಧಕರ ಪ್ರಶಸ್ತಿ ಪುರಸ್ಕೃತರಾದ ಸಿ.ಎಂ. ಶಿಗ್ಗಾವಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರಾದ ತೋರಣಗಲ್ಲಿನ ಅಬ್ದುಲ್ ಹೈ, ೨೦೨೫ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಾಂತಿಬಾಯಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ಸಿ.ಎಂ. ಶಿಗ್ಗಾವಿ ಹಾಗೂ ಅಬ್ದುಲ್ ಹೈ ಅವರು ಮಾತನಾಡಿದರು.
ಛತ್ರಪತಿ ಶಿವಾಜಿ ವಿದ್ಯಾಮಂದಿರದ ಮುಖ್ಯಶಿಕ್ಷಕ ಎಸ್. ವಿಶ್ವನಾಥ್, ನಿವೃತ್ತ ಉಪನ್ಯಾಸಕ ಬಿ.ಆರ್. ಮಸೂತಿ, ಸುಮಂಗಳಮ್ಮ ಚಿತ್ರಿಕಿ, ವೆಸ್ಕೊ ಕಂಪನಿಯ ಅಧಿಕಾರಿ ಮಲ್ಲಿಕಾರ್ಜುನ, ಕಸಾಪ ಸದಸ್ಯರಾದ ಎ.ಎಂ. ಶಿವಮೂರ್ತಿಸ್ವಾಮಿ, ವಿದ್ಯಾಮಂದಿರದ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.