ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸಂಸದ ಡಿ.ಕೆ.ಸುರೇಶ್ ಹಾಗೂ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಸ್ಪರ್ಧಿಯಿಂದಾಗಿ ಚನ್ನಪಟ್ಟಣ ಕೇಂದ್ರ ಬಿಂದುವಾಗಿದ್ದು, ಯಾವುದೇ ಗೊಂದಲಗಳಿಲ್ಲದೇ ಚುನಾವಣೆ ಸುಸೂತ್ರವಾಗಿ ನೆರವೇರಿದೆ.
ಬೆಳಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ಬಳಿಕ ವೇಗ ಪಡೆದುಕೊಂಡಿತ್ತು. ಮತದಾನ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಶೇ. ...... ಮತದಾನ ನಡೆಯಿತು.ಇನ್ನು ಹೆಚ್ಚು ಮತದಾನರನ್ನು ಹೊಂದಿದ್ದ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮಂದವಾಗಿ ಸಾಗಿತ್ತು. ಕೊಡಂಬಳ್ಳಿ, ಹೊಂಗನೂರು, ನಗರದ ಹಲಸಿನಮರದ ದೊಡ್ಡಿ, ಸೈಯ್ಯದ್ ವಾಡಿ, ಸೇರಿದಂತೆ ಸಾವಿರದ ಇನ್ನೂರು, ಮುನ್ನೂರಕ್ಕಿಂತ ಹೆಚ್ಚು ಮತದಾನರರನ್ನು ಹೊಂದಿದ್ದ ಮತಗಟ್ಟೆಗಳ ಮುಂದೆ ಮತದಾರರು ಸಾಲು ಗಟ್ಟಿ ನಿಂತಿದ್ದರು.
ಬಿರುಬಿಸಿಲಿನಲ್ಲೂ ಮತದಾರರು ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ಮೊದಲ ಬಾರಿ ಮತದಾನ ಮಾಡುವ ಯುವಕರಿಂದ ವೃದ್ಧರವರೆಗೂ ತಮ್ಮ ಹಕ್ಕು ಚಲಾಯಿಸಿದರು. ಇವರ ಜತೆಗೆ ವಿಶೇಷ ಚೇತನರು ಮತಗಟ್ಟೆಗೆ ಬಂದು ಮತಚಲಾಯಿಸಿದ್ದು ವಿಶೇಷವೆನಿಸಿತು.
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕರಾದ ಎಂ.ಸಿ. ಅಶ್ವತ್ಥ್, ಸಾಧತ್ ಅಲಿಖಾನ್, ಬಿಎಂಎಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಸೇರಿದಂತೆ ವಿವಿಧ ಗಣ್ಯರು ಮತ ಚಲಾಯಿಸಿದರು.
ಲೋಕಸಭಾ ಚುನಾವಣೆಯ ದಿನದಂದೇ ಹಸಮಣೆ ಏರಿದ ನವಜೋಡಿಯೊಂದು ಮದುವೆ ಮಂಟಪದಿಂದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ ವಿಶೇಷ ಘಟನೆ ತಾಲೂಕಿನಲ್ಲಿ ನಡೆಯಿತು.