ಉತ್ತಮ ಅಂಕ ಗಳಿಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ: ಅಝೀಝುರ್ರೆಹಮಾನ್

KannadaprabhaNewsNetwork |  
Published : Jul 03, 2026, 02:30 AM IST
ಭಟ್ಕಳದ ನ್ಯೂ ಶಮ್ಸ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಪುಟ ರಚನೆ ಮಾಡಿ ಅಧಿಕಾರ ನೀಡಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ನಾಯಕತ್ವ, ಶಿಸ್ತು, ಸೇವಾ ಮನೋಭಾವ ಮತ್ತು ಸಮಾಜದ ಬಗ್ಗೆ ಹೊಣೆಗಾರಿಕೆ ಬೆಳೆಸಿಕೊಳ್ಳುವುದು ನಿಜವಾದ ಶಿಕ್ಷಣದ ಗುರಿಯಾಗಬೇಕು.

ಕನ್ನಡಪ್ರಭ ವಾರ್ತೆ ಭಟ್ಕಳ

ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ನಾಯಕತ್ವ, ಶಿಸ್ತು, ಸೇವಾ ಮನೋಭಾವ ಮತ್ತು ಸಮಾಜದ ಬಗ್ಗೆ ಹೊಣೆಗಾರಿಕೆ ಬೆಳೆಸಿಕೊಳ್ಳುವುದು ನಿಜವಾದ ಶಿಕ್ಷಣದ ಗುರಿಯಾಗಬೇಕು ಎಂದು ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್‌ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಝೀಝುರ್ರೆಹಮಾನ್ ರುಕ್ನುದ್ದೀನ್ ನದ್ವಿ ಹೇಳಿದರು.

ಭಟ್ಕಳದ ತರಬಿಯತ್ ಎಜುಕೇಶನ್ ಸೊಸೈಟಿಯ ಶಮ್ಸ್ ಪದವಿಪೂರ್ವ ಕಾಲೇಜಿನ 2026–27ನೇ ಸಾಲಿನ ಪ್ರಥಮ ವಿದ್ಯಾರ್ಥಿ ಸಚಿವ ಸಂಪುಟದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿದ್ಯಾರ್ಥಿ ನಾಯಕತ್ವವು ಅಧಿಕಾರದ ಸಂಕೇತವಲ್ಲ. ಅದು ಸೇವೆ ಮತ್ತು ಜವಾಬ್ದಾರಿಯ ಪ್ರತೀಕ. ವಿದ್ಯಾರ್ಥಿ ಜೀವನದಲ್ಲಿಯೇ ಪ್ರಾಮಾಣಿಕತೆ, ಸಮಯಪಾಲನೆ ಹಾಗೂ ತಂಡದ ಮನೋಭಾವವನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಸಾಧ್ಯ ಎಂದು ಹೇಳಿದರು. ತರಬಿಯತ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹ್ತೆಶಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು

ಸ್ಕೂಲ್ ಬೋರ್ಡ್ ಚೇರ್‍ಮನ್ ನಝೀರ್‍ ಆಹ್ಮದ್ ಖಾಝಿ, ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಮುಹಮ್ಮದ್ ಯೂಸುಫ್ ಕೋಲಾ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಮೌಲಾನಾ ಝೀಯಾವುರ್‍ರಹ್ಮಾನ್ ನದ್ವಿ ರುಕ್ನುದ್ದೀನ್, ಸ್ಕೂಲ್ ಬೋರ್ಡ್ ಉಪಾಧ್ಯಕ್ಷ ಮೌಲಾನ ಸೈಯ್ಯದ್ ಖುತುಬ್ ಬರ್ಮಾವರ್‍, ಅಲ್ ಕೌಸರ್‍ ಗರ್ಲ್ ಕಾಲೇಜ್ ಅಧ್ಯಕ್ಷ ಸೈಯ್ಯದ್ ಶಕೀಲ್ ಎಸ್.ಎಂ., ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್‌ ಎಸ್.ಎಂ., ಅಲ್ ಕೌಸರ್‌ ಗರ್ಲ್ಸ ಕಾಲೇಜ್ ಕಾರ್ಯದರ್ಶಿ ಮೌಲಾನ ಸೈಯ್ಯದ್ ಯಾಸಿರ್‌ ಬರ್ಮಾವರ್‌ ನದ್ವಿ ಮತ್ತಿತರರಿದ್ದರು.

ಶಮ್ಸ್ ಪದವಿ ಪೂರ್ವ ಕಾಲೇಜು ಆಡಳಿತ ಪ್ರಾಂಶುಪಾಲ ಮುಹಮ್ಮದ್ ರಝಾ ಮಾನ್ವಿ ಸ್ವಾಗತಿಸಿದರು. ಉಪನ್ಯಾಸಕ ಫಹದ್ ಅಜಾಯಿಬ್ ನಿರೂಪಿಸಿ, ಉಪನ್ಯಾಸಕಿ ಡಾ. ಮಮತಾ ವಂದಿಸಿದರು.

ಈ ಸಂದರ್ಭ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಫಹಮಿದಾ ಡಾಟ 2026–27ನೇ ಸಾಲಿನ ವಿದ್ಯಾರ್ಥಿ ಸಚಿವ ಸಂಪುಟದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಮುಹಮ್ಮದ್ ಅಝ್ಹಾನ್ ಅಧ್ಯಕ್ಷರಾಗಿ, ಮುಹಮ್ಮದ್ ಬಾಸಿಮ್ ಉಪಾಧ್ಯಕ್ಷರಾಗಿ, ಉಸ್ಮಾನ್ ಗನಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಸುಮಾಮಾ ಖಾನ್ ಮಾಧ್ಯಮ ಕಾರ್ಯದರ್ಶಿಯಾಗಿ, ಅರ್ಹಾನ್ ಅಹ್ಮದ್ ಕ್ರೀಡಾ ಕಾರ್ಯದರ್ಶಿಯಾಗಿ, ಮುಹಮ್ಮದ್ ನಯೀಫ್ ಶಾಬಂದ್ರಿ ಸಂಘಟನಾ ಕಾರ್ಯದರ್ಶಿಯಾಗಿ, ರಿಜ್ವಾನ್ ಇಕ್ಕೇರಿ ಸಹಾಯಕ ಸಂಘಟನಾ ಕಾರ್ಯದರ್ಶಿಯಾಗಿ, ಸಯ್ಯದ್ ವಸಾಫ್ ಎಸ್.ಎಂ. ಮ್ಯಾಗಜಿನ್ ಕಾರ್ಯದರ್ಶಿಯಾಗಿ ಹಾಗೂ ರಾಯೀಫ್ ಖೂಮಿ ಸಹಾಯಕ ಮ್ಯಾಗಜಿನ್ ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು. ಪ್ರಥಮ ಪಿಯು ವಿಜ್ಞಾನ ವಿಭಾಗದಿಂದ ಸಯ್ಯದ್ ಸಾರಿಮ್ ಬರ್ಮಾವರ, ಈಸಾ ಖಾಝೀ, ಪ್ರಥಮ ಪಿಯು ವಾಣಿಜ್ಯ ವಿಭಾಗದಿಂದ ಅಬ್ದುಲ್ಲಾ ಶಿಂಗೇಟಿ, ಮುಹಮ್ಮದ್ ಅಯಾನ್, ದ್ವಿತೀಯ ಪಿಯು ವಿಜ್ಞಾನ ವಿಭಾಗದಿಂದ ಅಹ್ಮದ್ ಕಂದ್ಲೂರು, ಜಯ್ಯಾನ್, ಹಾಗೂ ದ್ವಿತೀಯ ಪಿಯು ವಾಣಿಜ್ಯ ವಿಭಾಗದಿಂದ ಉಮರ್ ಜಮಾಲ್ ಮತ್ತು ಸಾಜಿದ್ ಅಲಿ ತರಗತಿ ಪ್ರತಿನಿಧಿಗಳಾಗಿ ಅಧಿಕಾರ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನ ಸಂಸ್ಕೃತಿ ಉಳಿಸಿದ ಫ.ಗು.ಹಳಕಟ್ಟಿ
ಹಿರೇಮಾದಿನಾಳ ಮೊರೇರ ಗುಡ್ಡ ಸಂಶೋಧನೆಗೆ ಹೊಸ ತಿರುವು!