ಸ್ವಭಾವ ಹೇಗಿರಬೇಕೆಂಬುದನ್ನು ತಿಳಿಸುವುದೇ ಪ್ರಶಿಕ್ಷಣ ಅಭಿಯಾನ: ಸಿ.ಟಿ.ರವಿ

KannadaprabhaNewsNetwork |  
Published : Mar 01, 2026, 01:15 AM IST
ಷಷ | Kannada Prabha

ಸಾರಾಂಶ

ಚಿಕ್ಕಮಗಳೂರುರಾಜಕೀಯ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಸ್ವಭಾವ ಹೊಂದಿರುತ್ತಾರೆ. ಸಾಮೂಹಿಕವಾಗಿ ತಮ್ಮ ಸ್ವಭಾವ ಹೇಗಿರಬೇಕೆಂದು ತಿಳಿಸಿಕೊಡುವುದೇ ಪ್ರಶಿಕ್ಷಣ ಅಭಿಯಾನದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಶನಿವಾರ ಪಾಂಚಜನ್ಯದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜಕೀಯ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಸ್ವಭಾವ ಹೊಂದಿರುತ್ತಾರೆ. ಸಾಮೂಹಿಕವಾಗಿ ತಮ್ಮ ಸ್ವಭಾವ ಹೇಗಿರಬೇಕೆಂದು ತಿಳಿಸಿಕೊಡುವುದೇ ಪ್ರಶಿಕ್ಷಣ ಅಭಿಯಾನದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪಾಂಚಜನ್ಯದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ 2026ರನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಪರಿವರ್ತನೆ ತರಬೇಕಾದರೇ ಮೊದಲು ನಮ್ಮಲ್ಲಿನ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ನಮ್ಮಲ್ಲಿರುವ ಕೆಲವೊಂದು ಅಭ್ಯಾಸಗಳು ಮತ್ತು ಹವ್ಯಾಸಗಳು ಸಂಘಟನೆಗೆ ಅಡ್ಡಿಯಾಗಬಾರದು. ಏಕಾಂಗಿಯಾಗಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಕೈ ಜೋಡಿಸಿದಾಗ ನಮ್ಮಉದ್ದೇಶ, ಪಕ್ಷದ ಗುರಿ, ತತ್ವಾದರ್ಶ ಗಳನ್ನು ಸಾಧಿಸುವುದಕ್ಕೆ ಸಾಧ್ಯ ಎಂದು ಹೇಳಿದರು.ಬಿಜೆಪಿ ದೇಶ ಮೊದಲು ಎಂಬ ತತ್ವದಡಿ ಕೆಲಸ ಮಾಡುತ್ತಿದೆ. ಮೊದಲು ನಾವು ಪರಿವರ್ತನೆಯಾಗದೆ ಸಮಾಜ ಪರಿವರ್ತನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ವ್ಯಕ್ತಿ ತನ್ನಲ್ಲಿರುವ ಸ್ವಭಾವ ಮತ್ತು ಹವ್ಯಾಸ ಬದಲಾಯಿಸಿಕೊಂಡು ಸಮಾಜದಲ್ಲಿ ಪರಿವರ್ತನೆ ತರಬೇಕು ಎಂದು ತಿಳಿಸಿದರು.ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ ಅದು ಬಿಜೆಪಿ. ಮಂಡಲ ಮಟ್ಟದಲ್ಲಿ 3ರಿಂದ 4 ಅಭ್ಯಾಸ ವರ್ಗವನ್ನುಆಯೋಜನೆ ಮಾಡಲಾಗುತ್ತದೆ. ಇದರ ಉದ್ದೇಶ ಸದಸ್ಯರಲ್ಲಿ ಪರಸ್ಪರ ಸಂಬಂಧ ಗಟ್ಟಿಯಾಗಬೇಕು. ಸದಸ್ಯತ್ವ ಪಡೆದ ನಂತರ ಭಾವನಾತ್ಮಕವಾಗಿ ಪಕ್ಷದಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮನ್ನು ನಾವು ಸುಧಾರಿಸಿಕೊಂಡು ಬೆಳೆಯುವುದನ್ನು ಪ್ರಶಿಕ್ಷಣ ಅಭಿಯಾನ ಹೇಳಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ವೈಚಾರಿಕತೆ, ನಾಯಕತ್ವ ಮೇಲ್ಪಕ್ತಿಯಾಗಿ ಸ್ಫೂರ್ತಿಯಾಗಬೇಕು. ಸಕರಾತ್ಮಕ ಪರಿವರ್ತನೆಯಾಗಬೇಕು. ಪಕ್ಷ ಅಧಿಕಾರ ಗಳಿಕೆಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಕೆಲಸಕ್ಕೆ ಅಧಿಕಾರ ಕೇವಲ ಸಾಧನಾ ಮಾತ್ರ. ಭಾರತ ಬಲಿಷ್ಟವಾಗಬೇಕು. ಸಮಾಜ ಪರಿವರ್ತನೆಯಾಗಬೇಕು. ಆ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು. ಪ್ರಶಿಕ್ಷಣ ಅಭಿಯಾನದಲ್ಲಿತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದು ಮಾ.7 ರಿಂದ ಏ.14ರ ವರೆಗೆ ಪ್ರಶಿಕ್ಷಣ ಅಭಿಯಾನ ನಡೆಯಲಿದ್ದು, ಬಿಜೆಪಿ ಪಕ್ಷದ ತತ್ವಸಿದ್ದಾಂತಗಳು, ಕಾರ್ಯ ಪದ್ಧತಿ, ಪಕ್ಷದ ಹಿರಿಯರಿಗೆ ಗೌರವ ಮತ್ತು ಪಕ್ಷದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೇಳಿಕೊಡ ಲಾಗುತ್ತದೆ ಎಂದರು.

ರಾಜ್ಯದಲ್ಲಿ ಪ್ರಶಿಕ್ಷಣ ಅಭಿಯಾನವೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ನೇತೃತ್ವದಲ್ಲಿ ನಡೆಯಲಿದೆ. ಪಕ್ಷ ಸಂಘಟನೆ, ಪಕ್ಷದ ಕಾರ್ಯ ಚಟುವಟಿಕೆ, ಸಂಘಟನಾತ್ಮಕ ಮಾರ್ಗದರ್ಶನವನ್ನು ಅಭಿಯಾನದಲ್ಲಿ ನೀಡಲಾಗುವುದು ಎಂದು ತಿಳಿಸಿದರು.ಬೇರೆ ಪಕ್ಷಕ್ಕೂ ಬಿಜೆಪಿ ಪಕ್ಷಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಜಿಲ್ಲೆಯಲ್ಲಿ ಅಭ್ಯಾಸ ವರ್ಗಗಳ ನೇತೃತ್ವವಹಿಸಿಕೊಂಡವರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪಕ್ಷಕ್ಕೆ ತಳಮಟ್ಟದಿಂದ ಶಕ್ತಿ ತುಂಬಬೇಕು. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಉತ್ಸುಕರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಪ್ರಶಿಕ್ಷಣ ಅಭಿಯಾನದ ರಾಜ್ಯ ಸಹ ಸಂಚಾಲಕ ಹಾಗೂ ಶಿವಮೊಗ್ಗ ವಿಭಾಗದ ಸಂಚಾಲಕ ವಿಕಾಸ್ ಪುತ್ತೂರು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮುರಡಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಪುಣ್ಯಪಾಲ್ ಸೀತಾರಾಮ ಭರಣ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡನ ಬಿಟ್ಟು ತೊರೆದು ಬಂದ ಪ್ರೇಯಿಸಿಗೆ ಇರಿದ ಪ್ರಿಯಕರ
ಕಷ್ಟ, ಸುಖ ಸಮಾನವಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ