ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಕುಂಚಗಿರಿಯಲ್ಲಿರುವ ಕುಂಚಿಟಿಗ ಸಂಸ್ಥಾನ ಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ 36ನೇ ಸಂಗಮೇಶ್ವರ ಜಯಂತಿ ಹಾಗೂ ಶಾಂತವೀರ ಸ್ವಾಮೀಜಿ 46ನೇ ಜನ್ಮ ದಿನೋತ್ಸವ, 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು.
ಮಠದ ಸಂಪೂರ್ಣ ಆಸ್ತಿ ಭಕ್ತರದ್ದೆ ಇಲ್ಲಿ ಯಾವುದೇ ಸ್ವಾರ್ಥವಿಲ್ಲ. ಸಮಾಜ ಭಾಂದವರು ಶಿಕ್ಷಣವಂತರಾಗಿ ಸಾಮಾಜಿಕ ರಾಜಕೀಯ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವುದು ನಮ್ಮ ಬಯಕೆಯಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ದಲಿತ ಹಿಂದುಳಿದ ವರ್ಗಗಳ ಒಕ್ಕೂಟದ ಸ್ವಾಮೀಜಿಗಳು ಸಂಕಷ್ಟದಲ್ಲಿರುವ ಜನತೆಗೆ ಸ್ವಂದಿಸುವ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು .ಕಳೆದ 75 ವರ್ಷಗಳಿಂದ ಯಾವುದೇ ಸರ್ಕಾರಗಳು ಶೋಷಿತ ಸಮುದಾಯಗಳಿಗೆ ಬೆಂಗಳೂರಿನಲ್ಲಿ ಭೂಮಿಯನ್ನು ನೀಡಿರಲಿಲ್ಲ ಆದರೆ ಎಲ್ಲ ವರ್ಗದ ಬಡವರಿಗೆ ಹಸಿವು ನೀಗಿಸುವ ಮಹಾ ನಾಯಕ ಸಿದ್ದರಾಮಯ್ಯ ಶೋಷಿತ ಸಮಾಜ ಹಾಗೂ ಮೇಲ್ವರ್ಗದ ಸಮಾಜದ ಮಠಗಳಿಗೆ 900 ಕೋಟಿ ರು. ಮೌಲ್ಯದ ಆಸ್ತಿಯನ್ನು ರಾಜ್ಯ ಸರ್ಕಾರದಿಂದ ನೀಡಿದ್ದಾರೆ ಅವರಿಗೆ ಈ ಕಾರ್ಯಕ್ರಮದ ಮೂಲಕ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಮಠಾದೀಶರಗಳನ್ನು ಜೊತೆಯಾಗಿರಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಹಣ ಮಂಜೂರು ಮಾಡಿಸಿಕೊಂಡು ಸಮಾಜದ ಜನತೆಗೆ ಶಾಶ್ವತ ಅಸ್ತಿಗಳನ್ನು ಶ್ರೀಗಳು ಮಾಡುತಿದ್ದಾರೆ ಎಂದರು.
ವಿಧಾನ ಪರತ್ತ್ ಸದಸ್ಯ ಕೆ ಎಸ್.ನವೀನ್, ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು, ಲಗ್ಗೆರೆ ನಾರಯಣಸ್ವಾಮಿ, ಮರಳಿಧರ ಹಾಲಪ್ಪ, ನಿವೃತ್ತ ಎಡಿಜಿಪಿ ಸಿದ್ರಾಮಪ್ಪ, ಜಿ.ಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜಿಪಿ ಮುಖಂಡ ಎಸ್. ಲಿಂಗಮೂರ್ತಿ, ಮುಖಂಡರು ಹಾಜರಿದ್ದರು.