ಎಕ್ಸಾಂ ಚಲೋ ಬರೆದು ದುರ್ಗಕ್ಕೆ ಕೀರ್ತಿ ತನ್ನಿ: ಸಂಸದ ಕಾರಜೋಳ

KannadaprabhaNewsNetwork |  
Published : Mar 01, 2026, 01:15 AM IST
ಚಿತ್ರದುರ್ಗ ಮುೂರನೇ ಪುಟದ ಲೀಡ್  | Kannada Prabha

ಸಾರಾಂಶ

ಎಕ್ಸಾಂ ಚಲೋ ಬರೆದು ಬನ್ನಿ ಮಕ್ಕಳಾ. ತಂದೆ ತಾಯಿಗಳಿಗೂ, ದುರ್ಗಕ್ಕೂ ಕೀರ್ತಿ ತನ್ನಿ. ನಿಮ್ ಕನಸೆಲ್ಲ ನನಸಾಗಲಿ. ದ್ವಿತೀಯ ಪಿಯು ಪರೀಕ್ಷೆ ಬರೆಯಲು ಕೊಠಡಿಗಳಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ಶುಭ ಹಾರೈಸಿದ ಬಗೆಯಿದು. ಶನಿವಾರ ಬೆಳಿಗ್ಗೆಯೇ ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರೇರಣೆ ಮಾತುಗಳನ್ನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಕ್ಸಾಂ ಚಲೋ ಬರೆದು ಬನ್ನಿ ಮಕ್ಕಳಾ. ತಂದೆ ತಾಯಿಗಳಿಗೂ, ದುರ್ಗಕ್ಕೂ ಕೀರ್ತಿ ತನ್ನಿ. ನಿಮ್ ಕನಸೆಲ್ಲ ನನಸಾಗಲಿ. ದ್ವಿತೀಯ ಪಿಯು ಪರೀಕ್ಷೆ ಬರೆಯಲು ಕೊಠಡಿಗಳಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ಶುಭ ಹಾರೈಸಿದ ಬಗೆಯಿದು. ಶನಿವಾರ ಬೆಳಿಗ್ಗೆಯೇ ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರೇರಣೆ ಮಾತುಗಳನ್ನಾಡಿದರು.

ದ್ವಿತೀಯ ಪಿಯು ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ಭವಿಷ್ಯ ರೂಪಿಸಿಕೊಳ್ಳುವ ಪ್ರಮುಖ ಹಂತ. ಈ ಬಾರಿ ಚಿತ್ರದುರ್ಗ ಜಿಲ್ಲೆ ರಾಜ್ಯಮಟ್ಟದ ಫಲಿತಾಂಶದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಅಲಂಕರಿಸುವಂತಾಗಬೇಕು ಎಂದು ಸಂಸದ ಗೋವಿಂದ ಎಂ.ಕಾರಜೋಳ ಆಶಯ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತಲೂ ಹೆಚ್ಚಿನ ಶ್ರಮವಹಿಸಿ ಅದ್ಭುತ ಪೈಪೋಟಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಪದವಿ ಹಾಗೂ ಉನ್ನತ ಶಿಕ್ಷಣದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಲಭ್ಯವಾಗುವ ಅವಕಾಶಗಳ ಸಮರ್ಥವಾಗಿ ಬಳಕೆ ಮಾಡಿಕೊಂಡು ಶೈಕ್ಷಣಿಕ ಉನ್ನತಿ ಸಾಧಿಸುವಂತೆ ಕಾರಜೋಳ ಮನವಿ ಮಾಡಿದರು.

ಕಳೆದ 2023ರಲ್ಲಿ ಜಿಲ್ಲೆಯು ಪಿಯು ಫಲಿತಾಂಶದಲ್ಲಿ ಶೇ.59ರಷ್ಟು ಫಲಿತಾಂಶದೊಂದಿಗೆ 28ನೇ ಸ್ಥಾನದಲ್ಲಿತ್ತು. ಮತ್ತು 2024ರಲ್ಲಿ ಫಲಿತಾಂಶ ಶೇ.72ಕ್ಕೆ ಏರಿಕೆಯಾದರೂ ಸ್ಥಾನ 31ಕ್ಕೆ ಕುಸಿದಿತ್ತು. ಈ ಬಾರಿ ಜಿಲ್ಲೆಯ ಶೈಕ್ಷಣಿಕ ಗೌರವವನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಷ್ಟೇ ಸೀಮಿತವಾಗದೆ ಮುಂದೆ ನೀಟ್ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಎದುರಿಸಬೇಕು ಹಾಗೂ ಮಿಲಿಟರಿ, ಪೈಲಟ್, ವೈದ್ಯಕೀಯ ಮತ್ತು ಕಾನೂನು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಷ್ಟ್ರದ ಕೀರ್ತಿ ಹೆಚ್ಚಿಸಬೇಕು ಎಂದು ಶುಭ ಹಾರೈಸಿದರು.

291 ವಿದ್ಯಾರ್ಥಿಗಳು ಗೈರು

ಫೆ.28ರಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1 ಕನ್ನಡ ವಿಷಯದಲ್ಲಿ 291 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕನ್ನಡ ವಿಷಯದಲ್ಲಿ 11,994 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 11,703 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 291 ವಿದ್ಯಾರ್ಥಿಗಳು ಗೈರಾಗಿದ್ದಾರೆ.ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು ಎಂದು ಡಿಡಿಪಿಯು ಕೆ.ತಿಮ್ಮಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡನ ಬಿಟ್ಟು ತೊರೆದು ಬಂದ ಪ್ರೇಯಿಸಿಗೆ ಇರಿದ ಪ್ರಿಯಕರ
ಕಷ್ಟ, ಸುಖ ಸಮಾನವಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ