ಕನ್ನಡಪ್ರಭ ವಾರ್ತೆ ಉಡುಪಿ
ದೇವರು ತಾನು ಸೃಷ್ಟಿದ ಪರಿಸರವನ್ನು ಕಾಯುವ ಕೆಲಸವನ್ನು ಮಾನವನಿಗೆ ವಹಿಸಿದ್ದು, ಮನುಷ್ಯರು ಪರಿಸರದೊಂದಿಗೆ ಬದುಕುವುದು ಅನಿವಾರ್ಯ ಎಂದು ಸಿ.ಎಸ್.ಐ ಕರ್ನಾಟಕ ದಕ್ಷಿಣ ಪ್ರಾಂತ್ಯದ ಬಿಷಪ್ ರೈಟ್ ರೆವೆರೆಂಡ್ ಹೇಮಚಂದ್ರ ಕುಮಾರ್ ಹೇಳಿದರುಅವರು ಇಲ್ಲಿನ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ 101ನೇ ವರ್ಷದಂಗವಾಗಿ ಗ್ರೀನ್ ಹಾಸ್ಪಿಟಲ್ ಯೋಜನೆ ‘ಇನ್‌ಸ್ಪಯರ್’ಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಗಿಡ, ಮರ ಇಲ್ಲದ ಪರಿಸರದಲ್ಲಿ ಮಾನವ ಬದುಕು ಅಸಾಧ್ಯ. ಹಸಿರು ಪರಿಸರ ಹೆಚ್ಚಲಿ. ಸೌರ ವಿದ್ಯುತ್ ಉತ್ಪಾದನೆ, ವಿದ್ಯುತ್ ಕಾರು ಬಳಕೆಯಂತಹ ಸಣ್ಣಸಣ್ಣ ಕೊಡುಗೆಗಳನ್ನು ರಾಜ್ಯ, ದೇಶಕ್ಕೆ ಜನರು ನೀಡುವಂತಾಗಲಿ ಎಂದರು.ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ಈಶ್ವರ ಪಿ.ಗಡಾದ್ ಮಾತನಾಡಿ, ಜಿಲ್ಲೆ. 20ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಾನಿಗಳ ನೆರವಿನಿಂದ ಸೌರ ಫಲಕ ಅಳವಡಿಸಲಾಗುತ್ತಿದೆ. ಕಾಗದ ರಹಿತ ಕಚೇರಿಗೂ ಉದ್ದೇಶಿಸಲಾಗಿದೆ ಎಂದು ಹೇಳಿದರು.
ಲೊಂಬಾರ್ಡ್ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಕಾರಿ ಸಿಸ್ಟರ್ ದೀನಾ ಪ್ರಭಾವತಿ, ಸಿಎಸ್‌ಐ ಕರ್ನಾಟಕ ದಕ್ಷಿಣ ಪ್ರಾಂತ್ಯದ ಪ್ರಾದೇಶಿಕ ಚೇರ್ಮನ್ ರೆ. ಐವಾನ್ ಡಿ. ಸೋಜ ಉಪಸ್ಥಿತರಿದ್ದರು. ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಉದ್ಯೋಗಿಗಳನ್ನು ಪುರಸ್ಕರಿಸಲಾಯಿತು. ನಾಗಾಲ್ಯಾಂಡಿನ ಗಾಯಕ ನಿಸೆ ಮೆರುನೊ ಪ್ರಾರ್ಥಿಸಿದರು. ಡಾ.ಬಿ.ಎನ್.ಪೆರಲಾಯ ಸ್ವಾಗತಿಸಿದರು. ಲಿಯೊನಾ ಸ್ಟೆಲಿಟಾ ನಿರೂಪಿಸಿದರು. ರೋಹಿ ರತ್ನಾಕರ್ ವಂದಿಸಿದರು............................
2050ರೊಳಗೆ ಜೀರೋ ಕಾರ್ಬನ್ ಗುರಿ: ಡಾ. ಜತ್ತನ್ನಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, 2050ರೊಳಗೆ ಪರಿಸರಕ್ಕೆ ಕಾರ್ಬನ್ ಅನಿಲ ಉಗುಳುವಿಕೆಯನ್ನು ಶೂನ್ಯಕ್ಕೆ ತರಲು ಲೊಂಬಾರ್ಡ್ ಮಿಷನ್ ಹಾಸ್ಪಿಟಲ್ ಕಂಕಣಬದ್ಧವಾಗಿದೆ ಎಂದರು
ನವೀಕೃತ ಇಂಧನ ಬಳಕೆ, ತ್ಯಾಜ್ಯ ವಿಲೇವಾರಿ, ನೀರ ಕೊರತೆ ನಿವಾರಣೆ, ವಾಯುಮಾಲಿನ್ಯ ತಡೆ, ಜೀವ ವೈವಿಧ್ಯತೆ ನಿರ್ವಹಣೆ ಸಹಿತ, ಹರ್ಬಲ್ ಗಾರ್ಡನ್, ತರಕಾರಿ, ಹಣ್ಣಿನ ಗಿಡಗಳನ್ನು ಸಂಸ್ಥೆ ಆವರಣದಲ್ಲಿ ಬೆಳೆಯಲಾಗುತ್ತಿದೆ. ವಿದ್ಯುತ್ ವಾಹನ ಬಳಕೆಗೆ ಉದ್ದೇಶಿಸಿದ್ದು ಕ್ಯಾಂಟೀನ್, ಮೆಸ್ ನಲ್ಲಿ ಸೌರ ಇಂಧನ ಬಳಸಲಾಗುತ್ತಿದೆ. ಮಳೆ ಕೊಯ್ಲು ಅಳವಡಿಸಿದ್ದು ಈ ಬಾರಿ ಟ್ಯಾಂಕರ್ ನೀರು ಬೇಕಾಗಿಲ್ಲ ಎಂದರು.