ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ, ಸಮಾಜ ವಿಜ್ಞಾನ ವಿಭಾಗ, ಸ್ಪಂದನಾ ವೇದಿಕೆ, ಮಹಿಳಾ ಸಬಲೀಕರಣ ಕೋಶ ಮತ್ತು ಪೋಷ್, ಪಯಣ (ರಿ) ಸಂಸ್ಥೆ ಬೆಂಗಳೂರು ವತಿಯಿಂದ ಕಾಲೇಜಿನ ಜಿ.ಎಸ್. ಶಿವರುದ್ರಪ್ಪ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂಗ ಪಕ್ಷಪಾತತೆ ಮತ್ತು ಲಿಂಗ ಸಂವೇದನಾಶೀಲತೆ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗತ್ವ ಸಮಾನತೆ ಬಗ್ಗೆ ಸಮಾಜದಲ್ಲಿ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಎಲ್ಲರ ರೀತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಸಹಜವಾಗಿ ಬದುಕಲು ಅವಕಾಶ ನೀಡಬೇಕು ಎಂಬುದು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತಿದೆ ಪೋಷಕರು ಅಂಗವೈಕಲ್ಯ, ಬುದ್ಧಿಮಾಂದ್ಯ ಮಕ್ಕಳನ್ನು ಒಪ್ಪಿಕೊಳ್ಳುತ್ತಿದ್ದು, ಲಿಂಗತ್ವ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳದಿರು ವುದು ದುರಾದೃಷ್ಟಕರ ಎಂದು ವಿಷಾದಿಸಿದ ಅವರು, ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗಬೇಕಾಗಿದೆ ಎಂದು ತಿಳಿಸಿದರು.ಸಂಪ್ರದಾಯ ಕಟ್ಟಳೆ ರೂಢಿ ನೆಪದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗೆಗಿನ ಲಿಂಗ ಪಕ್ಷಪಾತತೆ, ಅಸಮಾನತೆ ಹೋಗಲಾಡಿಸಬೇಕಾಗಿದೆ ಲಿಂಗತ್ವ ತಾರತಮ್ಯ ಕೊನೆಗಾಣಿಸಲು ಕುಟುಂಬದಿಂದಲೇ ಸಂವೇದನಾಶೀಲತೆ ಆರಂಭವಾದಾಗ ಮಾತ್ರ ಎಲ್ಲರ ಜತೆ ಸಮಾಜದಲ್ಲಿ ಸಹಜವಾಗಿ ಬದುಕಲು ಸಾದ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಮಂಜುಳಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾನವ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ ಪಯಣ ಸಂಸ್ಥೆಯ ಚಾಂದನಿ ಹಾಗೂ ಮೈಸೂರು ಮಾನಸ ಗಂಗೋತ್ರಿಯ ಸಂಶೋಧನಾ ವಿದ್ಯಾರ್ಥಿನಿ ಎಚ್.ಜಿ. ದೀಪಾ ಬುದ್ದೆ ಮಾತನಾಡಿದರು.
ನಂತರದಲ್ಲಿ ಬೆಂಗಳೂರಿನ ವಿಶಿಷ್ಟ ಕಲಾವಿದರಿಂದ ತಲ್ಕಿ ನಾಟಕ ಪ್ರದರ್ಶನ ನಡೆಯಿತು.