ಕುಷ್ಟಗಿ: ಯುವಕರು ಟಿವಿ, ಮೊಬೈಲ್, ಸಿನಿಮಾಗಳಿಗೆ ಹೆಚ್ಚಿನ ಒಲವು ತೋರಿಸುತ್ತಿರುವುದರಿಂದ ನಾಟಕ ಹಾಗೂ ರಂಗಭೂಮಿ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಾಂದಪಾಷ ಕಿಲ್ಲೇದಾರ ಹೇಳಿದರು.
ಯುವಕರು ನಾಟಕ ಮತ್ತು ರಂಗ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆಯಲು ಮುಂದಾಗಬೇಕು, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ, ಆದ್ದರಿಂದ ಯುವಕರು ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ಸುಭಾಸ ಪೋರೆ ಮಾತನಾಡಿ, ಪಿಯುಸಿ ಪಠ್ಯ ಪುಸ್ತಕಗಳಲ್ಲಿರುವ ವಿಷಯಾಧರಿತ ಹಾಗೂ ಇಂದಿನ ಸಮಾಜಕ್ಕೆ ಬೇಕಾಗಿರುವ ಸಂಪನ್ಮೂಲ ವಿಷಯಗಳಿಗೆ ಅನುಗುಣವಾಗಿ ಈ ರಂಗ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ವಿವಿಧ ಜಿಲ್ಲೆಗಳಿಂದ ಬಂದಿರುವ ಶಿಬಿರಾರ್ಥಿಗಳು ತರಬೇತಿ ಪಡೆಯುವದು ನಿಮ್ಮ ಜೀವನದ ಅತ್ಯಮೂಲ್ಯ ಘಟ್ಟವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಎಂ.ಡಿ.ರಫಿ. ರಾಮಣ್ಣ, ಬೆಟ್ಟಪ್ಪ ಯತ್ನಟ್ಟಿ. ಇದ್ದರು. ಪ್ರಾಸ್ತಾವಿಕವಾಗಿ ರಂಗಧಾರ ರೆಪರ್ಟರಿಯ ಅಧ್ಯಕ್ಷ ಶರಣು ಶೆಟ್ಟರ ಮಾತನಾಡಿದರು. ತರಬೇತಿಗಾರ ಲಕ್ಷ್ಮಣ ಪೀರಗಾರ ನಿರೂಪಿಸಿ ವಂದಿಸಿದರು.