ಹಿರಿಯರ ಪರಿಶ್ರಮದ ಫಲವೇ ಕಸಾಪ ಸ್ಥಾಪನೆಗೆ ಕಾರಣ

KannadaprabhaNewsNetwork |  
Published : May 06, 2026, 02:30 AM IST
ಕೊಟ್ಟೂರಿನ ತುಂಗಭದ್ರ ಬಿಇಡಿ ಕಾಲೇಜಿನಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಪರಿಷತ್ ಸಂಸ್ಥಾಪನಾ ದಿನಾಚರಣೆಯನ್ನು ಎ.ನಸರುಲ್ಲಾ ಉದ್ಘಾಟಿಸಿದರು. | Kannada Prabha

ಸಾರಾಂಶ

1009ರಲ್ಲಿಯೇ ಪರಿಷತ್ ಹುಟ್ಟಿನ ಕುರಿತು ನಡೆದ ಚರ್ಚೆಗೆ ನಾಲ್ವಡಿ ಕೃಷ್ಣರಾಯರು ಸಮ್ಮತಿಸಿದ್ದರು.

ಕೊಟ್ಟೂರು: ಸರ್ ಎಂ.ವಿಶ್ವೇಶ್ವರಯ್ಯ, ಸಾಹಿತಿಗಳು ನಿರಂತರವಾಗಿ ನಡೆಸಿದ ಶ್ರಮದ ಫಲವಾಗಿ 1938ರಲ್ಲಿ ಕಸಾಪ ಸ್ಥಾಪನೆಯಾಗಲು ಕಾರಣವಾಯಿತು ಎಂದು ಕೂಡ್ಲಿಗಿ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಇಮಾಮಸಾಹೇಬ್ ಹಡಗಲಿ ಹೇಳಿದರು.

ಪಟ್ಟಣದ ತುಂಗಭದ್ರಾ ಬಿಇಡಿ ಕಾಲೇಜಿನಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸಕರಾಗಿ ಮಂಗಳವಾರ ಮಾತನಾಡಿದರು.

1009ರಲ್ಲಿಯೇ ಪರಿಷತ್ ಹುಟ್ಟಿನ ಕುರಿತು ನಡೆದ ಚರ್ಚೆಗೆ ನಾಲ್ವಡಿ ಕೃಷ್ಣರಾಯರು ಸಮ್ಮತಿಸಿದ್ದರು. 1913ರಲ್ಲಿ ನಡೆದ ಪ್ರಜಾಪ್ರತಿನಿಧಿ ಸಭೆಯಲ್ಲಿ ಬಿಎಂಶ್ರೀಯವರ ಭಾಷಣ ಪ್ರಭಾವದಿಂದ ಪರಿಷತ್ ಹುಟ್ಟಿಗೆ ಚಿಗುಯೊಡೆಯಿತು. 1915ರ ಮೇ 5ರಂದು ಕರ್ನಾಟಕ ಸಾಹಿತ್ಯ ಪರಿಷತ್ ಹೆಸರಿನೊಂದಿಗೆ ಸ್ಥಾಪನೆಯಾಯಿತು. 1938ರಲ್ಲಿ ರಂ.ರಾ. ದಿವಾಕರ ಅಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ ನಡೆದ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರುನಾಮಕರಣಗೊಂಡಿತು. ಬಿಎಂಟಿಸಿ ಪ್ರತಿವರ್ಷ ನೃಪತುಂಗ ಹೆಸರಲ್ಲಿ ಪ್ರಶಸ್ತಿ ನೀಡುತ್ತಿದೆ. 1760 ಪುಸ್ತಕಗಳನ್ನು ಪ್ರಕಟಿಸಿರುವ ಪರಿಷತ್‌ನ ಭಂಡಾರದಲ್ಲಿ 70 ಸಾವಿರ ಪುಸ್ಕಕಗಳಿವೆ ಎಂದರು.

ಕಸಾಪಕ್ಕೆ ಸಾಹಿತಿಗಳೇ ಅಧ್ಯಕ್ಷರಾಗಬೇಕು ಎಂಬುದಕ್ಕೆ ನನ್ನ ಆಕ್ಷೇಪವಿದೆ. ಪರಿಷತ್‌ನ್ನು ಸಂಘಟಿಸಿ, ಕನ್ನಡ ಕಾರ್ಯಕ್ರಮಗಳನ್ನು ಭಾಷಾ ವಿಚಾರವನ್ನು ವಿಸ್ತರಿಸಲು ಸಮರ್ಥವಾದ ಸಂಘಟನಕಾರನೂ ಅಧ್ಯಕ್ಷನಾಗಬಹುದು. ಕೇವಲ ₹400 ನೀಡಿ ಪರಿಷತ್‌ ಸದಸ್ಯರಾಗಬೇಕು. ಕೊಟ್ಟೂರು ತಾಲೂಕು ಸಾಹಿತ್ಯ ಭವನಕ್ಕೆ ಜಾಗ ನಿಗದಿ ಮಾಡಿಕೊಂಡರೆ ಕನ್ನಡ- ಸಂಸ್ಕೃತಿ ಸಚಿವರಿಂದ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಕಲ್ಪಿಸಿಕೊಡುವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ ಮಾತನಾಡಿ, ನಮ್ಮ ಕಚೇರಿಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದ್ದೇವೆ. ಪರಿಷತ್‌ನ ಎಲ್ಲ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತೇವೆ. ಕನ್ನಡ ಭವನ ನಿರ್ಮಾಣಕ್ಕೆ ಪಪಂ ಜಾಗ ಗುರುತಿಸಲು ಕ್ರಮ ವಹಿಸುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿ, ಪಟ್ಟಣದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಎಲ್ಲ ತಯಾರಿ ನಡೆಸಿತ್ತು. ಆದರೆ ಕಸಾಪ ರಾಜ್ಯಾಧ್ಯಕ್ಷರ ಹುದ್ದೆ ಗೊಂದಲದಿಂದ ಸ್ಥಗಿತವಾಗಿದೆ. ಈ ಭಾಗದ ಸಾಹಿತ್ಯಾಸಕ್ತರು ಹಾಗೂ ದಾನಿಗಳ ಸಹಕಾರದಿಂದ ಕಸಾಪ ಹೋಬಳಿ ಘಟಕವಿದ್ದಾಗಲೇ ಜಿಲ್ಲಾ ಸಮ್ಮೇಳನ ಮಾಡಲಾಗಿತು ಎಂದರು.

ತುಂಗಭದ್ರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಕನ್ನಡ ಭಾಷೆ ಉಳಿವಿಗೆ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಲೇಜು ಪ್ರಾಚಾರ್ಯ ಎಂ.ಶ್ಯಾಮರಾಜ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಕಾರ್ಯದರ್ಶಿ ಎಸ್.ರಾಜಣ್ಣ ಇದ್ದರು. ಕಾರ್ಯಕ್ರಮದಲ್ಲಿ ಹಳ್ಳಿ ಕೊಟ್ರೇಶ್, ಜಿ.ಆರ್. ಬಸವರಾಜೇಶ್ವರಿ, ಡಾ.ಸತೀಶ್ ಬಾಲನಗೌಡ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಗೌರವ ಕಾರ್ಯದರ್ಶಿ ಅರವಿಂದ ಬಸಾಪುರ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ಈಶ್ವರಪ್ಪ ತುರಕಾಣಿ, ಸದಸ್ಯ ಶೆಟ್ಟಿ ಶಶಿಕಲಾ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಆರಂಭಕ್ಕೂ ಮೊದಲು ತ್ವರಿತ ಕಾಮಗಾರಿಗೆ ಸಚಿವ ಸೂಚನೆ
ಫೈರಿಂಗ್ ರೇಂಜ್ ಎನ್‌ಸಿಸಿಗೆ ಅತ್ಯುಪಯುಕ್ತ: ಪ್ರೊ.ಅಶೋಕ್ ಸಂಗಪ್ಪ