ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ಆರಂಭಗೊಂಡ ತಾಲೂಕಿನ ಐದನೇ ಡಿಸಿಸಿ ಬ್ಯಾಂಕಿನ ಶಾಖೆಯನ್ನು ದೀಪ ಬೆಳಗಿಸುವ ಮೂಲಕ ಉಧ್ಘಾಟನೆ ನೆರವೇರಿಸಿ, ಸದ್ಯದಲ್ಲೇ ಭಾರತ ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಮೈಕ್ರೋ ಫೈನಾನ್ಸ್ ಮೂಲಕ ಜನರಲ್ಲಿ ಆರ್ಥಿಕ ಶಕ್ತಿಯನ್ನು ತುಂಬಿದ ಪರಿಣಾಮವಾಗಿ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಸಧೃಡವಾಗಿ ನಡೆಯುತ್ತಿರುವುದಕ್ಕೆ ಜಿಲ್ಲಾ ಕೇಂದ್ರ ಬ್ಯಾಂಕಿನ ಆರ್ಥಿಕ ನೆರವು ಪ್ರಮುಖ ಕಾರಣವಾಗಿರುವುದು ಗಮನಾರ್ಹವಾಗಿದೆ. ತಾಲೂಕಿನಲ್ಲಿ ಇನ್ನೂ ನಾಲ್ಕು ಶಾಖೆಗಳ ಆರಂಭಕ್ಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯವಾಗಿದೆ. ಪಟ್ಟಣದಲ್ಲಿ ಬ್ಯಾಂಕಿನ ಬಳಕೆದಾರರ ಅನುಕೂಲದ ದೃಷ್ಟಿಯಿಂದ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿರುವ ಎರಡನೇ ಶಾಖೆಯನ್ನು ಸ್ಥಾಪಿಸಿರುವುದು ಬ್ಯಾಂಕಿನ ಗ್ರಾಹಕರ ಆರ್ಥಿಕ ವ್ಯವಹಾರಕ್ಕೆ ಪೂರಕವಾಗಿದೆ ಎಂದರು.ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ತೀರ್ಥಹಳ್ಳಿ ಪಟ್ಟಣದಲ್ಲಿ ಲಾಗಾಯ್ತಿನಿಂದ ಇರುವ ಶಾಖೆಯಲ್ಲಿ ವ್ಯವಹಾರದ ಒತ್ತಡ ಇರುವ ಕಾರಣ ಗ್ರಾಹಕರ ಅನುಕೂಲತೆಯ ದೃಷ್ಟಿಯಿಂದ ಎರಡನೇ ಶಾಖೆಯನ್ನು ಆರಂಭಿಸುವುದು ಅನಿವಾರ್ಯವಾಗಿತ್ತು. ತಾಲೂಕಿನ ಹೋಬಳಿ ಕೇಂದ್ರಗಳಾದ ಮೇಗರವಳ್ಳಿ, ಕಟ್ಟೆಹಕ್ಕಲು, ದೇವಂಗಿಯಲ್ಲಿ ಹೊಸದಾಗಿ ಶಾಖೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯರಾದ ಜ್ಯೋತಿ ಮೋಹನ್, ಸುಶೀಲಾ ಶೆಟ್ಟಿ, ಡಿಸಿಸಿ ಬ್ಯಾಂಕಿನ ನಿರ್ದೆಶಕ ಎಚ್.ಎನ್. ವಿಜಯದೇವ್, ಉದ್ಯಮಿ ಬಿ.ಎಲ್.ಪ್ರಭಾಕರ ಹೆಗ್ಡೆ, ಸಹಕಾರಿ ಮುಖಂಡರಾದ ಕೆ. ನಾಗರಾಜ ಶೆಟ್ಟಿ, ಮಹಾಬಲೇಶ್ವರ ಹೆಗ್ಡೆ, ರೇವತಿ ಅನಂತಮೂರ್ತಿ, ಸುಷ್ಮಾ ಸಂಜಯ್, ಜೀನಾ ವಿಕ್ಟರ್ ಇತರರು ಇದ್ದರು.