ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ಜೆಎಸ್ಸೆಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಗುರುವಾರ ಧಾರವಾಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಕಾರ್ಪೋರೆಟ್ ಕಂಪನಿಗಳು ಉದ್ಯಮಕ್ಕೆ ಅನುಕೂಲಕರ ಶಿಕ್ಷಣ ರೂಪಿಸುತ್ತಿವೆ. ಹೀಗಾಗಿ, ಇದನ್ನು ತಡೆಯುವಲ್ಲಿ ಸಾಹಿತಿಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ದೇಶದ ಸರ್ಕಾರಗಳು ಜನಸ್ನೇಹಿ ಆಗದೇ, ಉದ್ಯಮಕೇಂದ್ರಗಳಾಗಿವೆ. ಆದ್ದರಿಂದ ಪ್ರಭುತ್ವದಲ್ಲಿ ಇದ್ದೇ, ಪ್ರಭುತ್ವ ಪ್ರಶ್ನಿಸಬೇಕು. ಸಾಹಿತ್ಯ ಪ್ರಭುತ್ವ ವಿರೋಧಿಸಬಾರದು ಎಂಬುದು ಎಲ್ಲೂ ಇಲ್ಲ. ಪ್ರಶ್ನಿಸದಿದ್ದರೆ ಅದು ಸಾಹಿತ್ಯ ಅಲ್ಲ ಎಂದು ಪ್ರತಿಪಾದಿಸಿದರು.
ಖಳನಾಯಕನಾದ ಗಾಂಧಿಕ್ರೌರ್ಯ ಇಂದು ಶೌರ್ಯವಾಗಿ ಬಣ್ಣಿಸಲಾಗಿದೆ. ಸಹಿಷ್ಣುತೆಯನ್ನು ಹೇಡಿತನ, ಸಹಬಾಳ್ವೆಯನ್ನು ಷಂಡತನಕ್ಕೆ ಬಳಸಲಾಗುತ್ತಿದೆ. ಇದರಿಂದಾಗಿಯೇ ಇಂದು ಗಾಂಧಿ ಖಳನಾಯಕ, ಗೋಡ್ಸೆ ನಾಯಕನಾಗಿದ್ದು ದೇಶದ ದುರಂತ ಎಂದು ಸಿದ್ಧನಗೌಡ ಪಾಟೀಲರು ಬೇಸರ ವ್ಯಕ್ತಪಡಿಸಿ, ಕನ್ನಡ ನಾಡು, ಶಿಕ್ಷಣ, ಕೈಗಾರಿಕೆ ಅಭಿವೃದ್ಧಿ ಜೊತೆಗೆ ಕನ್ನಡ ಅನ್ನ ಕೊಡುವ ಭಾಷೆಯಾಗಿ ಮಾರ್ಪಡಬೇಕು. ಅಲ್ಲದೇ, ಕನ್ನಡದ ನೆಲ-ಜಲದ ಹೋರಾಟ ಶ್ರೀಮಂತಗೊಳ್ಳಬೇಕು. ಇಲ್ಲವಾದಲ್ಲಿ ಕನ್ನಡ ಭಾಷೆಗೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಕಾನೂನು ವಿವಿ ಕುಲಪತಿ ಪ್ರೊ. ಸಿ. ಬಸವರಾಜ, ಜಿ.ಬಿ. ಪಾಟೀಲ, ವಸಂತ ಲದ್ವಾ, ಮಲ್ಲಿಕಾರ್ಜುನ ಯಂಡಿಗೇರಿ, ಎಸ್.ಕೆ. ಆದಪ್ಪನವರ, ಡಾ. ಎಸ್.ಎಸ್. ದೊಡಮನಿ ಇದ್ದರು.
ಮೂರು ಪ್ರಮುಖ ನಿರ್ಣಯ
2) ವೃತ್ತಿ ಕಾಲೇಜುಗಳಲ್ಲಿ ಕನ್ನಡ ಪಠ್ಯ ಕಡ್ಡಾಯ ಬೋಧಿಸಲ್ಪಡಬೇಕು. ಅಂಕಪಟ್ಟಿಯಲ್ಲಿ ಕನ್ನಡ ವಿಷಯಕ್ಕೆ ಸಂಬಂಧ ಅಂಕಗಳು ನಮೂದಿಸಬೇಕು. ಶ್ರೇಣಿ ಕೊಡುವಾಗ ಕನ್ನಡ ವಿಷಯದ ಅಂಕಗಳನ್ನು ಪರಿಗಣಿಸಬೇಕು.
ಅಪಾಯಕನ್ನಡ ಭಾಷೆ ಮತ್ತು ಸಂಸ್ಕೃತಿ ಅಪಾಯದಲ್ಲಿದೆ. ಭವಿಷ್ಯದಲ್ಲಿ ಎಂಥ ಸಂಸ್ಕೃತಿ ಬರಬಹುದೆಂದು ಊಹಿಸುವುದು ಕಷ್ಟ. ಭಾಷೆ-ಸಂಸ್ಕೃತಿ ಉಳಿವು ಅಗತ್ಯವಿದೆ. ಹೀಗಾಗಿ, ಮೊದಲು ಜ್ಞಾನಕ್ಕೆ ಹಾಗೂ ಅನ್ನಕ್ಕೆ ಕನ್ನಡ ಬರಬೇಕಿದೆ.-ಡಾ.ಸಿದ್ಧನಗೌಡ ಪಾಟೀಲ, ಚಿಂತಕರು