ನರಗುಂದ: ಸಂವಿಧಾನ ಅಡಿಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಯಡೆಯೂರು ಸಿದ್ದಲಿಂಗೇಶ್ವರ ಕಾಲೇಜಿನ ಕಾರ್ಯದರ್ಶಿ ಮಹೇಶಗೌಡ ಪಾಟೀಲ ತಿಳಿಸಿದರು.
ಡಿ.ಆರ್. ಕಲಬುರ್ಗಿ ಮಾತನಾಡಿ, ವಿಶ್ವದ ಬಲಿಷ್ಠ ಮತ್ತು ಶ್ರೇಷ್ಠ ಸಂವಿಧಾನ ಭಾರತ ಸಂವಿಧಾನವಾಗಿದೆ. ಭಾರತದ ಸಂವಿಧಾನವು ದೇಶದ ಸಮಗ್ರ ಮಾಹಿತಿ ನೀಡುವ ಪವಿತ್ರ ಗ್ರಂಥವಾಗಿದೆ. ಎಲ್ಲ ಕ್ಷೇತ್ರಗಳ ಮಾರ್ಗಸೂಚಿ ಮತ್ತು ಉತ್ತಮ ಆಡಳಿತ ಹಾಗೂ ನಾಗರಿಕರಿಗೆ ಹಕ್ಕು ಮತ್ತು ಕರ್ತವ್ಯಗಳು ತಿಳಿಸುವಲ್ಲಿ ಸಂವಿಧಾನವು ಪ್ರಮುಖವಾಗಿದೆ ಎಂದರು.ವಿದ್ಯಾಲಯದ ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೆ ಮಹತ್ವವಾಗಿದೆ. ಉತ್ತಮ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ಪಡೆದುಕೊಂಡು ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸಂವಿಧಾನವು ಪ್ರಮುಖ ಎನಿಸಿದೆ. ಸಂವಿಧಾನದ ಮೌಲ್ಯಗಳನ್ನು ಎಲ್ಲರೂ ತಿಳಿಯಬೇಕು ಮತ್ತು ದೇಶದ ಕಾನೂನುಗಳನ್ನು ಕಾಪಾಡಬೇಕು ಎಂದರು.
ಸಂವಿಧಾನದ ಪ್ರತಿಜ್ಞಾವಿಧಿಯನ್ನು ಎಸ್.ಸಿ. ಪಾಟೀಲ ಬೋಧಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸುದೀಪ ಪಾಟೀಲ, ಮಹಾವಿದ್ಯಾಲಯದ ಆಡಳಿತ ಮಂಡಳಿಯರು ಮತ್ತು ಎಲ್ಲ ಸಿಬ್ಬಂದಿ ಇದ್ದರು. ಕು. ಜಂಗ್ಲಿಸಾಬ ಅಗಸರ ಸ್ವಾಗತಿಸಿದರು. ಕು. ಪುಷ್ಪ ಗಾಯಕವಾಡ ನಿರೂಪಿಸಿದರು. ಕು. ಸಾಕ್ಷಿ ವಿಟ್ಲಾಪುರ ವಂದಿಸಿದರು.