ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಸಲ್ಲಿಸುವುದು ರೋಟರಿ ಕ್ಲಬ್ ಧ್ಯೇಯ-ಕೋಳಿವಾಡ

KannadaprabhaNewsNetwork |  
Published : Jul 14, 2024, 01:32 AM IST
ಫೋಟೊ ಶೀರ್ಷಿಕೆ: 13ಆರ್‌ಎನ್‌ಆರ್2ರಾಣಿಬೆನ್ನೂರು ನಗರದ ಸ್ಟೇಷನ್ ರಸ್ತೆ ವರ್ತಕರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸ್ಥಳೀಯ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಉದ್ಘಾಟಿಸಿದರು. | Kannada Prabha

ಸಾರಾಂಶ

ರೋಟರಿ, ಲಯನ್ಸ್, ಜೇಸಿಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಹುಟ್ಟಿರುವುದು ಸೇವೆಗಾಗಿಯೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.

ರಾಣಿಬೆನ್ನೂರು: ರೋಟರಿ, ಲಯನ್ಸ್, ಜೇಸಿಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಹುಟ್ಟಿರುವುದು ಸೇವೆಗಾಗಿಯೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು. ನಗರದ ಸ್ಟೇಷನ್ ರಸ್ತೆ ವರ್ತಕರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸ್ಥಳೀಯ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಗರದಲ್ಲಿ 1971ರಲ್ಲಿ ಪ್ರಾರಂಭವಾದ ರೋಟರಿ ಸಂಸ್ಥೆಯು ಜನಸೇವೆಯ ಉದ್ದೇಶದಿಂದ ಹುಟ್ಟಿಕೊಂಡಿವೆ. ಸ್ಥಳೀಯ ರೋಟರಿ ಹಾಗೂ ಇನ್ನರ್‌ವ್ಹಿಲ್ ಕ್ಲಬ್‌ಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿ ಇನ್ನಷ್ಟು ಸೇವೆ ಮಾಡಲು ಗಮನಹರಿಸಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ರೋಟರಿ ಕ್ಲಬ್ ಅಧ್ಯಕ್ಷ ವೀರೇಶ (ರಾಜಣ್ಣ) ಮೋಟಗಿ, ಕಾರ್ಯದರ್ಶಿ ಪ್ರಕಾಶ ಮಾಳಗಿ ಹಾಗೂ ಸಂಗಡಿಗರಿಗೆ ಪ್ರಮಾಣ ವಚನ ಬೋಧಿಸಿದ ವಿಜಯಪುರ ರೋಟರಿ ಜಿಲ್ಲೆ ಮಾಜಿ ರಾಜ್ಯಪಾಲ ಪ್ರಾಣೇಶ ಜಹಗೀರದಾರ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಸಲ್ಲಿಸುವುದು ರೋಟರಿ ಕ್ಲಬ್ ಧ್ಯೇಯವಾಗಿದೆ. ರೋಟರಿ ಕ್ಲಬ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಹಂತದಿಂದ ತಾಲೂಕು ಮಟ್ಟದವರೆಗೂ ಪದಾಧಿಕಾರಿಗಳನ್ನು ಬದಲಾಯಿಸಲಾಗುತ್ತದೆ ಎಂದರು. ರೋಟರಿ ಕ್ಲಬ್ ಸಹಾಯಕ ರಾಜ್ಯಪಾಲ ಮಂಜುನಾಥ ಉಪ್ಪಾರ ಅತಿಥಿಯಾಗಿ ಆಗಮಿಸಿದ್ದರು. ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸಂಜನಾ ಕುರವತ್ತಿ, ಕಾರ್ಯದರ್ಶಿ ಪ್ರಮೀಳಾ ಜಂಬಗಿ ಹಾಗೂ ಸಂಗಡಿಗರಿಗೆ ಹಾವೇರಿ ಇನ್ನರ್‌ವ್ಹೀಲ್ ಜಿಲ್ಲಾ ಕಾರ್ಯದರ್ಶಿ ವಿರಾಜ ಕೋಟಕ್ ಪ್ರಮಾಣ ವಚನ ಬೋಧಿಸಿದರು. ಡಾ. ಬಸವರಾಜ ಕೇಲಗಾರ, ಜಯಣ್ಣ ಜಂಬಗಿ, ಶೋಭಾ ಜಂಬಗಿ, ಕವಿತಾ ಬದಾಮಿ, ಭಾರತಿ ಜಂಬಗಿ, ಸವಿತಾ ಮೋಟಗಿ, ಜಿ.ಎಸ್. ರಾಮಚಂದ್ರ, ಸುಧೀರ ಕುರವತ್ತಿ, ವೀರೇಶ ಹನಗೋಡಿಮಠ, ರಾಜೇಶ್ವರಿ ಹನಗೋಡಿಮಠ, ಸುಮಾ ಹೊಟ್ಟಿಗೌಡ್ರ, ಕವಿತಾ ಕಡಕೋಳ, ಡಾ. ನೀಲಕಂಠ ಅಂಗಡಿ, ಪುಷ್ಪಾ ಮಾಳಗಿ, ಪ್ರಿಯಾ ಸಾವಕಾರ, ಜಯಾ ಶ್ರೀನಿವಾಸ, ಪಾರ್ವತಿ ಹೂಲಿಹಳ್ಳಿ ಮತ್ತಿತರರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...