ಜಗನ್ಮೋಹನ್‌ ರೆಡ್ಡಿ ಹೆಸರಿಟ್ಟುಕೊಂಡ ಮೋಸ: ಪ್ರತಾಪಸಿಂಹ

KannadaprabhaNewsNetwork |  
Published : Sep 22, 2024, 01:45 AM IST

ಸಾರಾಂಶ

The scam named after Jaganmohan Reddy: Pratapasimha

- ಶ್ಚಿಯನ್‌, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪೆಟ್ಟು ನೀಡಿದ್ದಾರೆ । ಆಂಧ್ರ ಮಾಜಿ ಸಿಎಂ ವಿರುದ್ಧ ವಾಗ್ದಾಳಿ

-----

ಕನ್ನಡಪ್ರಭ ವಾರ್ತೆ ಯಾದಗಿರಿ/ಶಹಾಪುರ

ಜಗನ್ಮೋಹನ ರೆಡ್ಡಿ ಎಂಬ ಹೆಸರನ್ನಿಟ್ಟುಕೊಂಡು ಕ್ರಿಶ್ಚಿಯನ್‌, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪೆಟ್ಟು ಕೊಡುವ ಕೆಲಸ ಮಾಡಿದ್ದಾರೆ. ಅವರ ತಂದೆ (ವೈಎಸ್‌ಆರ್‌) ಸಿಎಂ ಆಗಿದ್ದ ವೇಳೆ ತಿರುಪತಿಯಲ್ಲಿ ಮತಾಂತರ ಆರಂಭಿಸಿದ್ದರು. ಈಗ ಲಡ್ಡುವಿನಲ್ಲಿ ಹಂದಿ-ದನದ ಕೊಬ್ಬು, ಮೀನೆಣ್ಣೆ ಬಳಸಿದ್ದು ನೋಡಿದರೆ, ಮತೀಯ ಭಾವನೆ ಹೊಂದಿರುವ ಈತನಿಗೆ ಆಂಧ್ರದಲ್ಲಿ ಇನ್ನು ಮುಂದೆ ತಲೆ ಎತ್ತಲು ಬಿಡಬಾರದು ಎಂದು ಮಾಜಿ ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಶಹಾಪುರ ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಶನಿವಾರ ನಗರಕ್ಕಾಗಮಿಸಿದ್ದ ಅವರು, ಇಲ್ಲಿನ ಡಾ. ಸುಬೇದಾರ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಹಿಂದೂಗಳ ಪವಿತ್ರ ಕ್ಷೇತ್ರ ತಿರುಪತಿಯ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿದ್ದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ವೈಎಸ್ಆರ್‌ (ಏಸುಪದ ಸ್ಯಾಮುವೆಲ್‌ ರಾಜಶೇಖರೆಡ್ಡಿ) ಮುಖ್ಯಮಂತ್ರಿ ಆಗಿದ್ದ ವೇಳೆ ತಿರುಪತಿ ಬೆಟ್ಟದಲ್ಲಿ ಮತಾಂತರ ಆರಂಭಿಸಿದ್ದರು, ದುರ್ಘಟನೆಯಲ್ಲಿ ಅವರು ತೀರಿಕೊಂಡರು.

ಅದಾದ ನಂತರ, ಚಂದ್ರಬಾಬು ನಾಯ್ಡು ಸರ್ಕಾರ ಬಂತು. ನಂತರದಲ್ಲಿ ಮತ್ತೇ ವೈಎಸ್‌ಆರ್‌ ಅವರ ಮಗ ಜಗನ್ಮೋಹನ ರೆಡ್ಡಿ ಬಂದರು. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ನಲ್ಲಿ (ಟಿಟಿಡಿ) ಕ್ರಿಶ್ಚಿಯನ್ನರನ್ನು ತಂದು ಹಾಕುವಂತ ಕೆಲಸ ಆರಂಭಿಸಿದರು. ಭಕ್ತರು ಅಲ್ಲಿನ ಹುಂಡಿಯಲ್ಲಿ ಹಣ ಹಾಕಲು ಹೋದರೆ, ಚೆಕ್ ಮುಖಾಂತರ ಹುಂಡಿಗೆ ಹಣ ಕೊಡಲು ಬಂದರೆ ಕ್ರಿಶ್ಚಿಯನ್ನರ ಬರ್ಡ್‌ ಪ್ರಾಜೆಕ್ಟ್‌; ಕ್ರಿಶ್ಚಿಯನ್ ಹಾಸ್ಪಿಟಲ್‌ ಕಟ್ಟಲು ದುಡ್ಡು ಪಡೆದು ಇಲ್ಲಿನ ದುಡ್ಡನ್ನು ಡೈವರ್ಟ್ ಮಾಡುವ ಕೆಲಸ ಮಾಡಿದರು.

ಜಗನ್ಮೋಹನ ರೆಡ್ಡಿ ಹೆಸರಿನ ಮುಂದೆ ‘ರೆಡ್ಡಿ’ ಇದೆ ನಿಜ. ಆದರೆ ಅವರಪ್ಪ ಒಬ್ಬ ಕ್ರಿಶ್ಚಿಯನ್‌. ‘ರೆಡ್ಡಿ’ ಹೆಸರನ್ನಿಟ್ಟಿಕೊಂಡು, ಹಿಂದೂಗಳಿಗೆ ಆತ ಮೋಸ ಮಾಡಿದ್ದಾನೆ. ಕ್ರಿಶ್ಚಿಯನ್‌ ನಂಬಿಕೆ ಉಳಿಸಿಕೊಳ್ಳಲು ಮತಾಂತರ ಮುಖಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪೆಟ್ಟು ಕೊಡುವ ಕೆಲಸ ಮಾಡಿದ್ದಾನೆ ಎಂದು ಜಗನ್ ವಿರುದ್ಧ ಕಿಡಿ ಕಾರಿದರು.

ಆಂಧ್ರದಲ್ಲಿ ಹೋದರೆ ಊರಿಗೂರು- ಹಳ್ಳಿಹಳ್ಳಿಗಳಿಗೆ, ಕಾಲೋನಿಗಳಲ್ಲಿ ಚರ್ಚ್‌ಗಳು ನಿರ್ಮಾಣವಾಗಿವೆ. ಎಲ್ಲಿಂದ ಬಂದವು ಇವೆಲ್ಲ ಎಂದು ಪ್ರಶ್ನಿಸಿದ ಪ್ರತಾಪಸಿಂಹ, ಏಸು ಸ್ವಾಮಿ ಉದ್ಧಾರಕ್ಕಾಗಿ ಹುಟ್ಟಿದ್ದಾನೆ ಅಂತ ಊರಿಗೂರಿಗೇ ಚರ್ಚ್‌ಗಳ ನಿರ್ಮಿಸಿದ್ದಾರೆ. ಮತೀಯ ಭಾವನೆ ಹೊಂದಿರುವಂತಹ ಜಗನ್ಮೋಹನ ರೆಡ್ಡಿಯು ತಿರುಪತಿಯ ಪ್ರಸಾದ ಲಡ್ಡುವನ್ನು ಅಪವಿತ್ರ ಮಾಡಿದ್ದಾನೆ. ದನದ ಕೊಬ್ಬು, ಹಂದಿ ಕೊಬ್ಬು, ಮೀನೆಣ್ಣೆ ಹಾಕಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕೆಲಸ ಮಾಡಿದ್ದಾನೆ. ಚಂದ್ರಬಾಬು ನಾಯ್ಡು ಅವರೇ ಸ್ವತ: ಇದನ್ನು ಹೇಳಿದ್ದಾರೆ. ಟಿಟಿಡಿಯಲ್ಲಿ ನಿಯಮಗಳ ತಿದ್ದುಪಡಿಗಳ ಮೂಲಕ ಕ್ರಿಶ್ಚಿಯನ್ನರನ್ನು ಕುಳ್ಳಿರಿಸಲಾಗಿದೆ, ಕಾಂಟ್ರಾಕ್ಟ್ ಕೊಟ್ಟಿದ್ದಾನೆ. ಇದರ ಹಿಂದಿನ ಕೈವಾಡ ಪತ್ತೆ ಹಚ್ಚಿ ಅವನಿಗೆ (ಜಗನ್ಮೋಹನರೆಡ್ಡಿ) ಶಿಕ್ಷೆಗೆ ಗುರಿಪಡಿಸಬೇಕು, ಮತೀಯ ಭಾವನೆ ಹೊಂದಿರುವ ಈತನಿಗೆ ತಲೆ ಎತ್ತಲು ಬಿಡಬಾರದು, ಹಿಂದೂ ಸೊಸೈಟಿಗಳು ಮತೀಯ ಭಾವನೆ ಹೊಂದಿರುವ ಕ್ರಿಶ್ಚಿಯನ್‌ ಮತ್ತು ಮುಸ್ಲಿಂರ ಬಗ್ಗೆ ಅರಿವು ಇಟ್ಟುಕೊಂಡು, ಜಾಗೃತಿ ಮೂಡಿಸಬೇಕು, ಹಿಂದೂಗಳು ಒಗ್ಗಟ್ಟಾಗಬೇಕೆಂದು ಪ್ರತಾಪಸಿಂಹ ಕರೆ ನೀಡಿದರು.

ಮಾಜಿ ಸಂಸದ ಪ್ರತಾಪಸಿಂಹ ಅವರ ಫೋಟೋ ಬಳಸಿ.

---000---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್