ಕೇಂದ್ರ ಸರ್ಕಾರ ತಂದ ಯೋಜನೆಗಳು ಎಲ್ಲರಿಗೂ ತಲುಪಬೇಕು: ಬಿವೈಆರ್‌ ಸಲಹೆ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ದೇಶ ಅಭಿವೃದ್ಧಿಯಿಂದ ಹಿಂದೆ ಉಳಿಯದೇ ಪ್ರಗತಿ ಹೊಂದಬೇಕೆಂಬ ಪ್ರಧಾನಿ ಮೋದಿಜಿ ಕನಸು ನನಸಾಗಬೇಕಿದೆ, ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಿ ಅಭಿವೃದ್ಧಿ, ಹೊಂದುವಂತಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಾ ಬಂದಿದ್ದು, ಭಾರತ ದೇಶ ಆಭಿವೃದ್ಧಿಯಿಂದ ಹಿಂದೆ ಉಳಿಯದೇ ಪ್ರಗತಿ ಹೊಂದಬೇಕೆಂಬ ಮೋದಿಜಿ ಅವರ ಕನಸು ನನಸಾಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಿ ಅಭಿವೃದ್ಧಿ, ಹೊಂದುವಂತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ರಿಪ್ಪನ್‍ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಿದ್ದ `ವಿಕಸಿತ ಸಂಕಲ್ಪ ಯಾತ್ರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಅಭಿವೃದ್ಧಿ ಹೊಂದಿದ್ದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಭಿವೃದ್ಧಿ ಹೊಂದದ ಎಂಬ ಮೂರು ವಿಭಾಗಗಲ್ಲಿ ನಮ್ಮ ಭಾರತ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶದ ಪಟ್ಟಿಯಲ್ಲಿದೆ. ಇನ್ನೂ ನಾಲ್ಕು ತಿಂಗಳಲ್ಲಿ ₹2500 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಉದ್ಘಾಟನೆಗಾಗಿ ಕೇಂದ್ರದ ಸಚಿವರನ್ನು ಆಹ್ವಾನಿಸಲಾಗಿದೆ. ಅಲ್ಲದೇ, ಈಗಾಗಲೇ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹13 ಸಾವಿರ ಕೋಟಿ ಕಾಮಗಾರಿ ಪೂರ್ಣವಾಗಿದೆ. ಶಿವಮೊಗ್ಗದ ತುಂಗಾ ಸೇತುವೆ ಬಳಿಯಲ್ಲಿ ₹22 ಕೋಟಿ ವೆಚ್ಚದ ಸೇವೆ ಕಾಮಗಾರಿ ಲೋಕಾರ್ಪಣೆ ಸಹ ನಡೆಸಲಾಗುತ್ತಿದೆ ಎಂದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರ ಶ್ರೀಮಂತರಿಗೆ ದೊರೆಯುತ್ತಿದ್ದ ಸೌಲಭ್ಯಗಳು ಬಡವರಿಗೂ ದೊರಕಿಸುವ ಮಹತ್ಕಾರರ್ಯದಲ್ಲಿ ಜಾರಿಗೊಳಿಸಲಾದ ಆಯುಷ್ಮಾನ್ ಸೌಲಭ್ಯದಿಂದ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ 2.25 ಲಕ್ಷ ಜನರಿಗೆ ₹128 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಅರ್ಥಿಕ ನೆರವು ಪಡೆದಿದ್ದಾರೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಕಿಸಾನ್ ಸನ್ಮಾನ್, ಪಿಎಂ ಕಿಸಾನ್, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ, ಕೃಷಿ ಸಿಂಚಯ ಯೋಜನೆ, ಪಿಎಂ-ಪ್ರಣಾಮ್, ನಾರಿಶಕ್ತಿ ಮಹಿಳಾ ಸಬಲೀಕರಣ, ಜನೌಷಧಿ, ಉಜ್ವಲ ಯೋಜನೆ ಹೀಗೆ ಜನ್‍ಧನ್ ಮುದ್ರಾ ಯೋಜನೆಯಿಂದ ಸಾಕಷ್ಟು ರೈತ ಕುಟುಂಬಗಳು ಸೇರಿದಂತೆ ಕುಲಕಸಬುದಾರರು ಬ್ಯಾಂಕ್ ಸಾಲಸೌಲಭ್ಯದೊಂದಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಗಳನ್ನು ಆನುಷ್ಠಾನಗೊಳಿಸಿದೆ. ಈ ಕುರಿತು ವಿಕಸಿತ ಸಂಕಲ್ಪ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಚರಪಡಿಸಲಾಗುತ್ತಿದೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಮನೆಮನೆಗೆ ಮುಟ್ಟಿಸುವ ಕೆಲಸ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಹರತಾಳು ಹಾಲಪ್ಪ, ಗ್ರಾಪಂ ಆಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪಿ.ರಮೇಶ್, ಮಂಜುಳ ಕೇತಾರ್ಜಿರಾವ್, ಅಶ್ವಿನಿ ರವಿಶಂಕರ್, ವಿನೋದ ಹಿರಿಯಣ್ಣ, ಜಿ.ಡಿ.ಮಲ್ಲಿಕಾರ್ಜುನ, ಡಿ.ಈ. ಮಧುಸೂದನ್, ದೀಪಾ ಸುಧೀರ್, ಟಿ.ಆರ್.ಕೃಷ್ಣಪ್ಪ, ಸುಂದರೇಶ್, ನಬಾರ್ಡ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಶರತ್, ರಿಪ್ಪನ್‍ಪೇಟೆ ಕೆನರಾಬ್ಯಾಂಕ್ ವ್ಯವಸ್ಥಾಪಕ ದೇವರಾಜ್ ಮತ್ತಿತರರು ಇದ್ದರು.

- - - -17ಆರ್‌ಪಿಟಿ01:

ರಿಪ್ಪನ್‍ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ``ವಿಕಸಿತ ಸಂಕಲ್ಪ ಯಾತ್ರೆ’’ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.

Share this article