ಅಳ್ನಾವರ:
ಜಾನಪದ ಸಂಶೋಧನಾ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಶರಣ ಸಾಹಿತ್ಯ ಪರಿಷತ್, ಪಟ್ಟಣ ಪಂಚಾಯಿತಿ ವಿವಿಧ ಮಹಿಳಾ ಒಕ್ಕೂಟಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ನಡೆದ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ನಡೆಯುವ ಹಬ್ಬಗಳು ಶ್ರೇಷ್ಠ ಮೌಲ್ಯ, ಪ್ರಭುದ್ಧತೆಯಿಂದ ಕೂಡಿವೆ ಎಂದ ಅವರು, ಹಬ್ಬಗಳ ಆಚರಣೆಯ ವಿಭಿನ್ನತೆಯಲ್ಲಿ ಬದುಕಿನ ಮರ್ಮ ಅಡಗಿದೆ. ವಿಶೇಷವಾಗಿ ಮಹಿಳೆಯರಲ್ಲಿ ಅಡಗಿದ ವಿಶಿಷ್ಟ ಶಕ್ತಿಯನ್ನು ಹೊರಸೂಸುವ ಮೂಲಕ ಸಮಾಜದಲ್ಲಿ ಹೊಸತನದ ಆಶಾಕಿರಣದ ಬೆಳಕು ಮೂಡಿಸಬೇಕು ಮತ್ತು ಮೊಬೈಲ್ ಗೀಳಿನಿಂದ ಹೊರ ಬರುವ ಜತೆಗೆ ಹಳೆಯ ಜಾನಪದ ಹಾಡುಗಳನ್ನು ಆಲಿಸಬೇಕು ಎಂದರು.ಶರಣ ಸಾಹಿತ್ಯ ಪರಷತ್ ಘಟಕದ ಜಿಲ್ಲಾಧ್ಯಕ್ಷ ಡಾ. ಸಂಗಮನಾಥ ಲೋಕಾಪೂರ ಮಾತನಾಡಿ, ಹಳ್ಳಿಗಳಲ್ಲಿ ಜಾನಪದ ಆಚರಣೆಗಳು ಇಂದಿಗೂ ತಮ್ಮ ಮಹತ್ವ ಉಳಿಸಿಕೊಂಡಿವೆ. ಇವು ಇಲ್ಲಿನ ಜನರ ಬದುಕಿನ ಆಧಾರ ಸ್ತಂಭಗಳಾಗಿವೆ. ಸಂಕ್ರಮಣ ಆಚರಣೆಗಳು ಎಲ್ಲರ ಬಾಳಲ್ಲಿ ಹೊಸತನ, ಸಮೃದ್ಧಿ ಮೂಡಿಸುವ ಮೂಲಕ ಆನಂದದ ಜೀವನಕ್ಕೆ ಹೊಸ ಮುನ್ನುಡಿ ಬರೆಯಲಿ ಎಂದು ಆಶಿಸಿದರು.
ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು ಒಗಟು, ಒಡಪು, ಜಾನಪದ ಹಾಡು, ಗಾದೆ ಮಾತು, ಬೀಸು ಕಲ್ಲಿನ ಪದ ಹಾಡಿದರು. ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ಆರಂಭದಲ್ಲಿ ಗಣೇಶ ಮತ್ತು ಗಂಗಾ ಪೂಜೆ ನೇವೇರಿಸಲಾಯಿತು. ವೇದಿಕೆ ಮುಂಭಾಗದಲ್ಲಿ ಭತ್ತದ ಪೈರಿನ ಸುಗ್ಗಿಯನ್ನು ಸಿಂಗರಿಸಲಾಗಿತ್ತು.ಕಾರ್ಯಕ್ರಮದಲ್ಲಿ ಸುಮಾ ಸೊಪ್ಪಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಸಬನೀಸ್, ಡಾ. ಬಸವರಾಜ ಮೂಡಬಾಗಿಲ್, ಅರಣ್ಯಾಧಿಕಾರಿ ಶಕುಂತಲಾ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಪ್ರವೀಣ ಪವಾರ, ಎಸ್.ಡಿ. ದೇಗಾವಿಮಠ, ನಾಗರಾಜ ಗುರ್ಲಹುಸೂರು, ನಾಗಭೂಷಣ, ಮಹಾದೇವ ಸಾಗರೇಕರ, ಅಜಿತ್ ಬೆಟದೂರ, ರಾಜು ಬೆಂಡಿಗೇರಿ, ಸುರೇಂದ್ರ ಕಡಕೋಳ, ಸಿದ್ದು ಪಗಡಿ, ಸೋಮಶೇಖರ ಅಂಬಡಗಟ್ಟಿ, ಹಿರಣಯ್ಯ ಮೇಲಮನಿ, ಯಲ್ಲಪ್ಪ ತೇರಗಾಂವಕರ, ಶ್ವೇತಾ ಕಡಕೋಳ ಇದ್ದರು.