ಸಿಂಧನೂರು: 22 ವರ್ಷಗಳ ಕಾಲ ಸುದೀರ್ಘ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಹುಟ್ಟೂರಾದ ಸಿಂಧನೂರಿಗೆ ಆಗಮಿಸಿದ ಎಂ.ಡಿ.ತಾಹೀರ್ ನಕಾಶ್ ಅ.ಹಣಗಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನಂತರ ನಡೆದ ವೇದಿಕೆ ಸಮಾರಂಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ದೇಶ ಮತ್ತು ಜನರ ರಕ್ಷಣೆಗಾಗಿ ಸೈನಿಕರು ತಮ್ಮ ಜೀವವನ್ನು ಮುಡುಪಿಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು ಸ್ಪೂರ್ತಿದಾಯಕ. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಎಂ.ಡಿ.ತಾಹೀರ್ ನಕಾಶ್ ಅ.ಹಣಗಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಯೋಧರಾದ ವೀರೇಶ ಯಾದವ್, ಸುರೇಶ, ರುದ್ರೇಶ ತುಪ್ಪದ, ನಾಗರಾಜ ತುರ್ವಿಹಾಳ, ನರಸಿಂಹ ಕಲ್ಲೂರು, ಪರಶುರಾಮ ತುರಕಟ್ಟಿ ಕ್ಯಾಂಪ್, ನಾಗರಾಜ ಉಪ್ಪಾರ, ಹಾಲೇಶ ಬಾದರ್ಲಿ, ಕಳಕಪ್ಪ ತುರ್ವಿಹಾಳ, ವೀರಭದ್ರಯ್ಯಸ್ವಾಮಿ, ರಾಜಾಸಾಬ್, ವಿರೂಪಾಕ್ಷಪ್ಪ ಹಿರೇಮಠ, ನೀಲಪ್ಪ ನಂದವಾಡಗಿ, ಮಲ್ಲಪ್ಪ ಕುಂಬಾರ ಗೆಜ್ಜಲಗಟ್ಟ, ಸಂಗಯ್ಯ ಹಿರೇಮಠ, ಅಮರೇಗೌಡ ಪಾಟೀಲ್, ಮುಸ್ಲಿಂ ಸಂಘದ ಅಧ್ಯಕ್ಷ ಫಯಾಜ್ ಫೀರಾ, ಮುಖಂಡರಾದ ಶಫ್ಫುವುಲ್ಲಾ ಖಾನ್, ಅನಗವಾಡಿ ನಬಿ, ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷ ಚನ್ನಬಸಯ್ಯ ಸ್ವಾಮಿ ಹಿರೇಮಠ, ವೆಂಕಟೇಶ ಬಾದರ್ಲಿ, ಸೋಮನಾಥ ಪತ್ತಾರ, ಮಲ್ಲಿಕಾರ್ಜುನ ರೆಡ್ಡಿ ಇದ್ದರು.----------
ಸಿಂಧನೂರಿಗೆ ಆಗಮಿಸಿದ ನಿವೃತ್ತ ಯೋಧ ಎಂ.ಡಿ.ತಾಹೀರ್ ನಕಾಶ್ ಅ.ಹಣಗಿ ಅವರನ್ನು ಸನ್ಮಾನಿಸಲಾಯಿತು.