‘ಗೋಬ್ಯಾಕ್‌’ ಎನಿಸಿಕೊಳ್ಳುವ ಪರಿಸ್ಥಿತಿ ನನಗೆ ಬಂದಿಲ್ಲ: ರಘುಪತಿ ಭಟ್‌

KannadaprabhaNewsNetwork |  
Published : Jun 02, 2024, 01:47 AM ISTUpdated : Jun 02, 2024, 09:02 AM IST
ರಘುಪತಿ ಭಟ್‌ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ವಯಸ್ಸು ನನ್ನದಲ್ಲ. ವಿಧಾನಸಭೆಗೆ ಇನ್ನು ನಾಲ್ಕು ವರ್ಷ ಕಾಯುವುದಾದರೆ ಅಲ್ಲಿ ನಾನೇ ಗೆಲ್ಲಿಸಿದ ಶಾಸಕರಿದ್ದು, ಮತ್ತೆ ಸ್ಪರ್ಧಿಸಲು ಆಗದು ಎಂದು ರಘುಪತಿ ಭಟ್‌ ಹೇಳಿದರು.

 ಮಂಗಳೂರು :  ನನ್ನನ್ನು ಕ್ಷೇತ್ರದಲ್ಲಿ ಮತದಾರರು ನಿರ್ಲಕ್ಷ್ಯ ಮಾಡಿಲ್ಲ. ಒಂದು ಚುನಾವಣೆಯನ್ನೂ ಸೋತಿಲ್ಲ. ಕಾರ್ಯಕರ್ತರು ನನ್ನನ್ನು ವಿರೋಧಿಸಿ ಗೋ ಬ್ಯಾಕ್‌ ಅಂದಿಲ್ಲ. ನಮ್ಮಲ್ಲಿ ಗೋಬ್ಯಾಕ್‌ ಅಂದವರಿಗೇ ಬೇರೆ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ. ನನಗೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್‌ ಹೇಳಿದ್ದಾರೆ.

‘ಕೆಲವರಿಗೆ ಅಧಿಕಾರ ಇಲ್ಲದೆ ಇರಲು ಆಗದು’ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಇತ್ತೀಚೆಗೆ ಉಡುಪಿಯಲ್ಲಿ ನೀಡಿದ ಹೇಳಿಕೆ ಕುರಿತಂತೆ ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ರಘುಪತಿ ಭಟ್‌ ಈ ಪ್ರತಿಕ್ರಿಯೆ ನೀಡಿದರು.

ಅವರು ಈ ಮಾತನ್ನು ಎಲ್ಲರನ್ನೂ ಉದ್ದೇಶಿಸಿ ಹೇಳಿರಬಹುದು. 70 ವರ್ಷ ಮೇಲ್ಪಟ್ಟವರು, ಸೋತವರನ್ನೂ ಲೋಕಸಭೆಗೆ ನಿಲ್ಲಿಸಲಾಗಿದೆ. ನಾನು ಈ ಸ್ಪರ್ಧೆ ಮಾಡಲು ಕಾರಣ ನಾನು ಸಕ್ರಿಯವಾಗಿ ಜನಪ್ರತಿನಿಧಿಯಾಗಿದ್ದವನು. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ವಯಸ್ಸು ನನ್ನದಲ್ಲ. ವಿಧಾನಸಭೆಗೆ ಇನ್ನು ನಾಲ್ಕು ವರ್ಷ ಕಾಯುವುದಾದರೆ ಅಲ್ಲಿ ನಾನೇ ಗೆಲ್ಲಿಸಿದ ಶಾಸಕರಿದ್ದು, ಮತ್ತೆ ಸ್ಪರ್ಧಿಸಲು ಆಗದು ಎಂದರು.

ಪದವೀಧರ ನೋಂದಣಿ ಬದಲಾವಣೆ: ಒಮ್ಮೆ ಪದವಿ ದೊರಕಿದ ಬಳಿಕ ಶಾಶ್ವವಾಗಿರುತ್ತದೆ. ಹಾಗಿರುವಾಗ ಆರು ವರ್ಷಗಳಿಗೊಮ್ಮೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಅನಗತ್ಯ. ಇಂತಹ ವ್ಯವಸ್ಥೆಗಳಿಂದಾಗಿ ಸೀಮಿತ ಮತದಾರರ ನಡುವೆ ಮಾತ್ರವೇ ಸ್ಪರ್ಧೆಗೆ ಸಾಧ್ಯವಾಗುತ್ತಿದ್ದು, ಈ ವ್ಯವಸ್ಥೆಯನ್ನು ಬದಲಿಸಲು ಮುಂದಾಗುತ್ತೇನೆ ಎಂದು ಅವರು ಹೇಳಿದರು.ಸಹವರ್ತಿಗಳಾದ ಅಶ್ವಿನ್‌ ಕುಮಾರ್‌, ನವೀನ್‌ಚಂದ್ರ, ಸೂರಜ್‌, ರಾಘವೇಂದ್ರ, ಕೃಷ್ಣ ಶೆಣೈ, ಸಂತೋಷ್‌ ರಾವ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ, ಎಚ್‌ಡಿಕೆ ಜಾತಿವಾದಿಗಳಲ್ಲ, ಕುಟುಂಬವಾದಿಗಳು : ಸಿದ್ದರಾಮಯ್ಯ ತರಾಟೆ
₹5 ಅಕ್ರಮದಲ್ಲಿ ಪಾರಾಗಿದ್ದ ಲಮಾಣಿ ₹5 ಲಕ್ಷ ಕೇಸ್‌ನಲ್ಲಿ ಲೋಕಾ ಖೆಡ್ಡಾಕ್ಕೆ!