ಸೇವಾದಳದ ಚಟುವಟಿಕೆಗಳಿಂದ ಸೇವಾ ಮನೋಭಾವ ಬೆಳೆಯುತ್ತದೆ-ಎನ್‌. ಶ್ರೀಧರ

KannadaprabhaNewsNetwork |  
Published : Jun 28, 2024, 12:56 AM IST
೨೭ಎಚ್‌ಕೆಆರ್೧ | Kannada Prabha

ಸಾರಾಂಶ

ಸೇವಾದಳದ ಚಟುವಟಿಕೆಗಳಿಂದ ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಶಿಸ್ತು, ಸಂಯಮ, ಸೇವಾ ಮನೋಭಾವ ಹಾಗೂ ದೇಶಭಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್. ಶ್ರೀಧರ ಹೇಳಿದರು.

ಹಿರೇಕೆರೂರು: ಸೇವಾದಳದ ಚಟುವಟಿಕೆಗಳಿಂದ ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಶಿಸ್ತು, ಸಂಯಮ, ಸೇವಾ ಮನೋಭಾವ ಹಾಗೂ ದೇಶಭಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್. ಶ್ರೀಧರ ಹೇಳಿದರು. ಪಟ್ಟಣದ ಗುರುಭವನದಲ್ಲಿ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಭಾರತ ಸೇವಾದಳ ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಿರೇಕೆರೂರು ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತ ಸೇವಾದಳ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.೧೯೨೩ರಲ್ಲಿ ನಾ.ಸು. ಹರ್ಡಿಕರ್ ಅವರು ರಾಷ್ಟ್ರೀಯ ಭಾವೈಕ್ಯತೆ, ಶಿಸ್ತು, ಸಂಸ್ಕಾರ, ಸೇವೆಗಾಗಿ ಬಾಳು ಎಂಬಂತೆ ಶಾಲೆಗಳಲ್ಲಿ ಆರಂಭದಿಂದಲೆ ಮಕ್ಕಳಿಗೆ ಹೇಳಿದರೆ ಮುಂದೆ ಸಮಾಜವನ್ನು ಸುಧಾರಿಸುವುದರ ಜತೆಗೆ ದೇಶವನ್ನು ಪ್ರಗತಿಯತ್ತ ಕೊಂಡ್ಯೊಯಲು ಸಾಧ್ಯವಾಗುತ್ತದೆ. ಕಡ್ಡಾಯವಾಗಿ ಪ್ರತಿ ಶಾಲೆಯಲ್ಲಿ ಸೇವಾದಳ ಘಟಕ ಸ್ಥಾಪಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಘಟಕದ ಬೆಳಗಾವಿ ವಿಭಾಗದ ರಾಜ್ಯ ಉಪಾಧ್ಯಕ್ಷ ಕೆ.ಡಿ. ದೀವಿಗಿಹಳ್ಳಿ, ಜಿಲ್ಲಾ ಭಾರತ ಸೇವಾದಳ ಘಟಕದ ಜಿಲ್ಲಾ ಉಪಾಧ್ಯಕ್ಷ ಎನ್. ಸುರೇಶಕುಮಾರ ತಾಲೂಕು ಘಟಕದ ಅಧ್ಯಕ್ಷ ಬಿ.ವಿ. ಸೊರಟೂರ, ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಕೆ.ಎಚ್. ಮಾರುತೆಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರೇವಣಸಿದ್ದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಪ್ಪಗೌಡ್ರ, ಕಾರ್ಯದರ್ಶಿ ಆರ್.ಎಂ. ಪೂಜಾರ, ಪ್ರೌಢಶಾಲಾ ಶಿಕ್ಷಕರ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಪಾಟೀಲ, ಅಶೋಕ ಬಣಕಾರ, ಸಿ.ಎಸ್. ಚಳಗೇರಿ, ಜೆ.ಬಿ. ಮರಿಗೌಡ್ರ, ನಾಗರಾಜ ಹೊಸಮನಿ, ಎಸ್.ಹೆಚ್. ಕಟ್ಟಿಮನಿ, ಎಸ್.ವಿ. ಅತ್ತಿಕಟ್ಟಿ, ಬಸವರಾಜ ಗುರಿಕಾರ, ಮರಿಗೌಡರ್, ಬಿ.ಬಿ.ಕಣಸೋಗಿ ಸೇರಿದಂತೆ ತರಬೇತಿ ಹೊಂದಿದ ೧೦೦ ಶಿಕ್ಷಕರು ಸೇವಾದಳದ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು 11 ಸಾವಿರ ನೀಡಿ
ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ