ಮೈಸೂರು ದಸರಾದಲ್ಲಿ ಕಂಬಳ ಬೇಡ- ಪ್ರತಾಪ್ ಸಿಂಹ

KannadaprabhaNewsNetwork |  
Published : Jul 11, 2026, 01:45 AM IST
49 | Kannada Prabha

ಸಾರಾಂಶ

ದಸರಾದಲ್ಲಿ ಎಲ್ಲಾ ಪರಂಪರೆಗಳನ್ನು ತುರುಕುತ್ತಾ ಹೋದರೆ ಮೂಲ ದಸರಾದ ಅರ್ಥಕ್ಕೆ ಧಕ್ಕೆ ಬರುವುದಿಲ್ವಾ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾದಲ್ಲಿ ಕಂಬಳ ಬೇಡ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದಸರಾ ಆಚರಣೆ ನಡುವೆ ಬೇರೆಯದನ್ನು ಯಾಕೆ ಇಲ್ಲಿಗೆ ತರುತ್ತೀರಾ? ಆಯಾಯ ನೆಲದ ಕ್ರೀಡೆಗಳು ಆಯಾಯ ನೆಲದ ಸಂಸ್ಕೃತಿಗಳು ಅದೇ ಸ್ಥಳದಲ್ಲಿ ವೈಭವವಾಗಿ ನಡೆಯಲಿ ಎಂದರು.ದಸರಾದಲ್ಲಿ ಎಲ್ಲಾ ಪರಂಪರೆಗಳನ್ನು ತುರುಕುತ್ತಾ ಹೋದರೆ ಮೂಲ ದಸರಾದ ಅರ್ಥಕ್ಕೆ ಧಕ್ಕೆ ಬರುವುದಿಲ್ವಾ?ಸಾಂಕೇತಿಕವಾಗಿ ದಸರಾದಲ್ಲಿ ನಾಡಿನ ಎಲ್ಲಾ ಸಂಸ್ಕೃತಿಯನ್ನು ಸ್ತಬ್ಧಚಿತ್ರಗಳಲ್ಲಿ ಮೂಡಿಸುತ್ತೇವೆ, ಅಷ್ಟು ಸಾಕು. ಅದನ್ನೇ ಒಂದು ಪ್ರತ್ಯೇಕ ಇವೆಂಟ್ ಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಕೂಡ ಧ್ವನಿ ಎತ್ತಿದ್ದು, ಅವರ ಮಾತಿಗೆ ನನ್ನ ಸಹಮತ ಇದೆ ಎಂದರು. ಗೃಹ ಸಚಿವರ ವಿರುದ್ಧ ವಾಗ್ದಾಳಿಪ್ರಿಯಾಂಕ್ ಖರ್ಗೆ ಗೃಹ ಸಚಿವರಾದ ಮೇಲೆ ಪೊಲೀಸ್ ಇಲಾಖೆಯ ಕಾರ್ಯ ಸುಧಾರಣೆ ಬಗ್ಗೆ ಮಾತಾಡಿದ್ದಾರಾ? ಗೃಹ ಸಚಿವರು ಬರೀ ಏನೇನೋ ಮಾತಾಡಿಕೊಂಡು ಕೂತಿದ್ದಾರೆ. ಅವರಿವರ ಬಗ್ಗೆ ಕೊಂಕು ಮಾತಾಡೋದು, ಟ್ವೀಟ್ ಮಾಡೋದು ಗೃಹ ಸಚಿವರ ಕೆಲಸ. ಪೆದ್ದು ಪೆದ್ದು ಮಾತಾಡಿಕೊಂಡು ಕೂಗು ಮಾರಿಯ ತರಹ ಪ್ರಿಯಾಂಕ್ ಖರ್ಗೆ ಈ ಸರ್ಕಾರದಲ್ಲಿ ಇದ್ದಾರೆ. ಹಿಂದೆ ಮೂವರು ಕೂಗು ಮಾರಿಗಳು ಇದ್ದರು. ಒಬ್ಬರಿಗೆ ಈಗ ಸಚಿವ ಸ್ಥಾನ ಸಿಕ್ಕಿಲ್ಲ. ಇನ್ನೊಬ್ಬ ಶಾಸಕ ಅದೇ ಕೆಲಸ ಮಾಡುತ್ತಿದ್ದಾನೆ ಎಂದು ಅವರು ವಾಗ್ದಾಳಿ ನಡೆಸಿದರು.ಬೆಂಗಳೂರು- ಮೈಸೂರು ಹೈವೇಯಲ್ಲಿ ಕುಟುಂಬದ ಮೇಲೆ ಹಲ್ಲೆ ಪ್ರಕರಣ ಕುರಿತು ಪ್ರತ್ರಿಕ್ರಿಯಿಸಿದ ಅವರು, ಮಂಡ್ಯ ಪೊಲೀಸರಿಗೆ ಕಾಮನ್ ಸೆನ್ಸ್ ಇದ್ದಿದ್ದರೆ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಸರಳವಾದ ಸೆಕ್ಷನ್ ಹಾಕುತ್ತಿರಲಿಲ್ಲ. ಎಲ್ಲಾ ಆರೋಪಿಗಳ ಮೇಲೆ ಮಾರಣಾಂತಿಕ ಹಲ್ಲೆಯ ಕೇಸ್ ಹಾಕಿ ಬಂಧಿಸಬೇಕು. ಬೆಂಗಳೂರು- ಮೈಸೂರು ಹೈವೇಯಲ್ಲಿ ತಡೆ ಬೇಲಿ ಕಿತ್ತು ಜನ ಬಿಡಾಡಿ ದನಗಳ ರೀತಿ ಓಡಾಡುತ್ತಿದ್ದಾರೆ. ಆದರೂ ಮಂಡ್ಯ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಪ್ರಕರಣದಲ್ಲಿ ಆರೋಪಿಗಳ ಬಂಧಿಸದಿದ್ದರೆ ಪೊಲೀಸರ ವಿರುದ್ಧ ರಸ್ತೆಗೆ ಇಳಿಯುತ್ತೇವೆ ಎಂದು ಎಚ್ಚರಿಸಿದರು.ಎಸ್ಐಆರ್ ಪ್ರಕ್ರಿಯೆ ಆರಂಭವಾಗಿದ್ದು, ಬಿಎಲ್ಒಗಳು ಕೆಲಸ ಮಾಡುತ್ತಿದ್ದಾರೆ. ಆದರೂ ಎಲ್ಲಾ ಕಡೆಗಳಿಂದ ಕಂಪ್ಲೇಟ್ ಬರುತ್ತಿದೆ. ತುಂಬಾ ಕಡೆ ಗೊಂದಲವಾಗುತ್ತಿದೆ. ಪ್ರತಿ ಭಾನುವಾರ ಸಂಬಂಧಪಟ್ಟ ಬೂತ್ ನಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಫಾರಂ ವಿತರಿಸಿ ಸಮಸ್ಯೆಗೆ ಪರಿಹಾರ ಕೊಡಬೇಕು. ಆಯಾಯ ಬೂತ್ ಮಟ್ಟದಲ್ಲೇ ಈ ಕೆಲಸವಾದರೆ ಗೊಂದಲ ಬಗೆಹರಿಯತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಿ
ಹತ್ತಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು