ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಭಾನುವಾರ ಸಾ.ರಾ. ಮಹೇಶ್ ನೇತೃತ್ವದಲ್ಲಿ ನಡೆದ ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು, ನೂತನ ಆಡಳಿತ ಮಂಡಳಿಗೆ ಸಮರ್ಥರನ್ನು ನೇಮಿಸುವಂತೆ ಸಭೆಯಲ್ಲಿದ್ದವರು ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಸಮುದಾಯ ಭವನ ಸೂಕ್ತ ನಿರ್ವಹಣೆ ಇಲ್ಲದೆ ಆದಾಯಕ್ಕೆ ಕತ್ತರಿ ಬಿದ್ದಿದ್ದು ಅದನ್ನು ನಿರ್ವಹಿಸುವುದರ ಜೊತೆಗೆ ಸಂಘವನ್ನು ಸದೃಢವಾಗಿ ಕಟ್ಟಬೇಕೆಂದು ಸಲಹೆ ನೀಡಿದರು.ಸಮಾಜದ ಮುಖಂಡರ ಸಲಹೆ ಆಲಿಸಿ ಮಾತನಾಡಿದ ಮಾಜಿ ಸಚಿವ ಸಾ.ರಾ. ಮಹೇಶ್ ಅವರು, ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ನೂತನ ಆಡಳಿತ ಮಂಡಳಿ ನೇಮಕ ಮಾಡುವುದಾಗಿ ಘೋಷಿಸಿದರು.
ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ಒಕ್ಕಲಿಗ ಸಮಾಜದ ಹಿರಿಯ ಮುಖಂಡರಾದ ಎಸ್.ಪಿ. ತಮ್ಮಯ್ಯ, ಡಾ.ಎಸ್.ಪಿ. ಯೋಗಣ್ಣ, ಮೆಡಿಕಲ್ ರಾಜಣ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಹಿರಿಯ ಉಪಾಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ಎಚ್.ಪಿ. ಪರಶುರಾಂ, ಕಾರ್ಯದರ್ಶಿ ಸಿ.ಎಸ್. ರಾಮಲಿಂಗು, ಎಂಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ವಕೀಲ ಎ. ತಿಮ್ಮಪ್ಪ, ಮುಖಂಡರಾದ ಎಸ್.ಎಸ್. ಸಂದೇಶ್, ಎಂ.ಜೆ. ರಮೇಶ್, ಎಂ.ಜೆ. ಕುಮಾರ್, ಕೆ.ಎಲ್. ರಮೇಶ್, ಎಚ್.ಪಿ. ಶಿವಣ್ಣ, ಹಳಿಯೂರು ಮದುಚಂದ್ರ, ಅನೀಪ್ ಗೌಡ, ಬಿ. ರಮೇಶ್, ಬಿ.ಆರ್. ಕುಚೇಲ, ಎಚ್.ಕೆ. ಸುಜಯ್, ಎಸ್.ಟಿ. ಕೀರ್ತಿ, ಸಾ.ರಾ. ತಿಲಕ್, ಮಿರ್ಲೆ ಧನಂಜಯ್, ರಾಧಾಕೃಷ್ಣ, ರಾಮಪ್ರಸಾದ್ ಮೊದಲಾದವರು ಇದ್ದರು.