ಕನ್ನಡದ ಬೆಳವಣಿಗೆಗೆ ಸರ್ಕಾರಿ ಶಾಲೆಗಳ ಉಳಿವು ಅಗತ್ಯ: ಬಿ.ಎಲ್.ಶಂಕರ್

KannadaprabhaNewsNetwork |  
Published : Nov 07, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸಾಹಿತ್ಯಿಕ ಶಕ್ತಿಯನ್ನು ಸಾಬೀತು ಪಡಿಸಿರುವ ಕನ್ನಡ ಭಾಷೆ ಬೆಳವಣಿಗೆ ಶೈಕ್ಷಣಿಕ ಮಟ್ಟದಲ್ಲಿ ಕುಂಠಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಆಂಗ್ಲ ಭಾಷೆ ವ್ಯಾಮೋಹದಿಂದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದ್ದು, ಮಾತೃಭಾಷೆ ಉಳಿವಿಗೆ ಕನ್ನಡಿಗರೇ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಕರೆ ನೀಡಿದರು.

ಮೂಡಿಗೆರೆ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸಾಹಿತ್ಯಿಕ ಶಕ್ತಿಯನ್ನು ಸಾಬೀತು ಪಡಿಸಿರುವ ಕನ್ನಡ ಭಾಷೆ ಬೆಳವಣಿಗೆ ಶೈಕ್ಷಣಿಕ ಮಟ್ಟದಲ್ಲಿ ಕುಂಠಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಆಂಗ್ಲ ಭಾಷೆ ವ್ಯಾಮೋಹದಿಂದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದ್ದು, ಮಾತೃಭಾಷೆ ಉಳಿವಿಗೆ ಕನ್ನಡಿಗರೇ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಕರೆ ನೀಡಿದರು.ಮೂಡಿಗೆರೆ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಗಿರೀಶ್ ಕಾರ್ನಾಡ್, ಚಂದ್ರ ಶೇಖರ ಕಂಬಾರ ಹಾಗೂ ಯು.ಆರ್.ಅನಂತಮೂರ್ತಿ ಅವರಂತಹ ಎಂಟು ಮಹಾನ್ ಸಾಹಿತಿಗಳು ಕನ್ನಡವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಸಾಹಿತಿಗಳ ಕೊಡುಗೆಯಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿ ಬೆಳೆದಿದೆ. ಕುವೆಂಪು ಇಂಗ್ಲಿಷ್‌ನಲ್ಲಿ ಕವಿಯಾಗಿದ್ದರೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರಸಿದ್ಧಿ ಗಳಿಸಬಹುದಿತ್ತು. ಆದರೆ ಕನ್ನಡ ಭಾಷೆಯ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿದರು ಎಂದು ಸ್ಮರಿಸಿದರು.ಕನ್ನಡವನ್ನು ಬೆಳೆಸುವುದು ಕಷ್ಟದ ಕೆಲಸವಲ್ಲ. ಕನ್ನಡದಲ್ಲಿ ಮಾತನಾಡುವುದು, ಬರೆಯುವುದು ಮತ್ತು ದೈನಂದಿನ ವ್ಯವಹಾರದಲ್ಲಿ ಮಾತೃಭಾಷೆಗೆ ಆದ್ಯತೆ ನೀಡುವುದು ಮುಖ್ಯ. ಇತರ ಭಾಷೆಗಳನ್ನು ಕಲಿಯುವುದಕ್ಕೆ ವಿರೋಧವಿಲ್ಲ. ಆದರೆ ಪರಭಾಷೆಗಳ ವ್ಯಾಮೋಹದಲ್ಲಿ ಕನ್ನಡವನ್ನು ಮರೆಯಬಾರದು. ಕನ್ನಡದಲ್ಲಿ ಓದಿದರೆ ಉದ್ಯೋಗ ಸಿಗುವುದಿಲ್ಲ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸುವ ಬದಲು, ಉತ್ತಮ ತರಬೇತಿ ಪಡೆದ ಶಿಕ್ಷಕರಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿದಾಗ ಮಾತ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿಯೂ ಉಳಿಯಲು ಸಾಧ್ಯ ಎಂದರು.ಹೊರರಾಜ್ಯಗಳಿಂದ ಬಂದ ಕಾರ್ಮಿಕರು ತಮ್ಮ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಸ್ಥಳೀಯರಿಗೆ ಹಿಂದಿ ಕಲಿಸಿ ದ್ದಾರೆ. ಆದರೆ ಕನ್ನಡಿಗರು ಹೊರರಾಜ್ಯದವರೊಂದಿಗೂ ಕನ್ನಡದಲ್ಲಿಯೇ ಮಾತನಾಡುವ ಮನೋಭಾವ ಬೆಳೆಸಿ ಕೊಳ್ಳಬೇಕು. ಈ ಮೂಲಕ ಭಾಷೆಯ ಮೇಲಿನ ಒತ್ತಡ ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.ಸಮ್ಮೇಳನಾಧ್ಯಕ್ಷ ಮೇಕನಗದ್ದೆ ಲಕ್ಷ್ಮಣಗೌಡ ಮಾತನಾಡಿ ಸರ್ಕಾರಿ ಶಾಲೆಗಳು ಹಳ್ಳಿ ಆತ್ಮವಿದ್ದಂತೆ. ಸ್ಥಳೀಯ ಶಾಲೆಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಮಾದರಿ ಯಾಗಬೇಕು ಎಂದರು.ಗ್ರಾಮೀಣ ಬದುಕು ಕನ್ನಡ ಸಾಹಿತ್ಯದ ಜೀವಾಳ. ಗುಡಿ, ಗೋಪುರ, ನದಿ, ಹಳ್ಳ, ಕೆರೆ, ಕೃಷಿ ಚಟುವಟಿಕೆಗಳು, ಜಾನಪದ ಹಾಡು, ಕಥೆ, ಸುಗ್ಗಿ, ಲಾವಣಿ, ಕೋಲಾಟ ಸೇರಿದಂತೆ ಗ್ರಾಮೀಣ ಜೀವನದ ಪ್ರತಿಯೊಂದು ಚಟುವಟಿಕೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪ್ರೇರಣೆ. ಆದರೆ ಆಧುನಿಕ ಜೀವನಶೈಲಿಯಿಂದ ಗ್ರಾಮೀಣ ಸಂಸ್ಕೃತಿ ಮತ್ತು ಭಾಷಾ ಬಳಕೆ ನಿಧಾನವಾಗಿ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಹಿಂದೆ ಬಳಕೆಯಲ್ಲಿದ್ದ ಎತ್ತಿನಗಾಡಿ ಕಣ್ಮರೆಯಾಗುವ ಜತೆ ಅದಕ್ಕೆ ಸಂಬಂಧಿಸಿದ ಕನಿಷ್ಠ 150 ಕನ್ನಡ ಪದಗಳು ಬಳಕೆಯಿಂದ ದೂರವಾಗಿವೆ. ಭತ್ತದ ಕೃಷಿ ಪದ್ಧತಿ ಬದಲಾಗಿ ಕೃಷಿಗೆ ಸಂಬಂಧಿಸಿದ ಸಾವಿರಾರು ಪದಗಳೂ ಮರೆಯಾಗುತ್ತಿವೆ. ಹಿಂದಿನ ತಲೆಮಾರಿನವರು ಕಾಡಿನ ಪ್ರತಿಯೊಂದು ಮರಕ್ಕೂ ಪ್ರತ್ಯೇಕ ಹೆಸರು ಗುರುತಿಸುತ್ತಿದ್ದರು. ಆದರೆ ಇಂದಿನ ಯುವಜನರಿಗೆ ತಮ್ಮ ಮನೆ ಹಿತ್ತಲಿನಲ್ಲಿರುವ ಹತ್ತು ಸಸ್ಯಗಳ ಹೆಸರೂ ತಿಳಿದಿಲ್ಲ. ಹಳ್ಳಿಗಾಡಿನ ಅನಕ್ಷರಸ್ಥ ಹಿರಿಯರಲ್ಲಿದ್ದ ಪರಿಸರ ಜ್ಞಾನ ಮತ್ತು ಭಾಷಾ ಸಂಪತ್ತು ವಿಶ್ವವಿದ್ಯಾಲಯದ ಜ್ಞಾನಕ್ಕೆ ಸಮಾನವಾಗಿತ್ತು. ಗ್ರಾಮೀಣ ಬದುಕಿ ನೊಂದಿಗೆ ಭಾಷೆ ಬೆಸೆದುಕೊಂಡಿರುವುದರಿಂದ ಸ್ಥಳೀಯ ಸಂಸ್ಕೃತಿ ಮತ್ತು ಆಚರಣೆ ಉಳಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.ಮೂಡಿಗೆರೆ ತಾಲೂಕು ಐತಿಹಾಸಿಕ, ಪಾರಂಪರಿಕ ಹಾಗೂ ನೈಸರ್ಗಿಕ ಸಂಪತ್ತಿನಿಂದ ಕೂಡಿದೆ. ಎತ್ತಿನಭುಜ, ದೇವರಮನೆ, ದುರ್ಗದಹಳ್ಳಿ, ಜೇನುಕಲ್ ಬೆಟ್ಟ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಹೊಯ್ಸಳರ ಮೂಲಸ್ಥಾನವೆಂದು ಗುರುತಿಸಲ್ಪಟ್ಟಿರುವ ಅಂಗಡಿ ಗ್ರಾಮದ ಐತಿಹಾಸಿಕ ಮಹತ್ವ ಹಾಗೂ ಕೋಟೆ, ಕೊತ್ತಲು, ಶಿಲಾಮಯ ದೇವಾಲಯಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ದೇವರುಂದ, ಅಗ್ರಹಾರ, ಪಲ್ಗುಣಿ ಸೇರಿದಂತೆ ವಿವಿಧ ಗ್ರಾಮಗಳ ಜಾತ್ರೆ, ಸುಗ್ಗಿ ಆಚರಣೆಗಳ ಮೂಲ ಸಾಂಸ್ಕೃತಿಕ ಪರಂಪರೆ ಮತ್ತು ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕು ಎಂದರು.ಸಮ್ಮೇಳನದ ಆರಂಭದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಸಾಹಿತಿ ದೊಡ್ಮನೆ ಆನಂದ್ ರಚಿಸಿದ ಡಾ.ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತಾದ ''''''''ಒಂದು ಪಕ್ಷಿನೋಟ'''''''' ಪುಸ್ತಕ ಬಿಡುಗಡೆಗೊಳಿಸಲಾಯಿತು. ಬಳಿಕ ವಿಚಾರ ಗೋಷ್ಠಿ, ಬಹಿರಂಗ ಅಧಿವೇಶನ, ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಸಂಜೆ ಜರುಗಿದವು.ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಲಕ್ಷ್ಮಣಗೌಡ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್, ಸಾಹಿತಿಗಳಾದ ಹಳೆಕೋಟೆ ರಮೇಶ್, ದೊಡ್ಮನೆ ಆನಂದ್, ಎಂ.ಎಸ್.ನಾಗರಾಜ್, ಭಾಗ್ಯ ಲಕ್ಷ್ಮಣಗೌಡ, ಅ.ರಾ. ರಾಧಾಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುನ್ನಳ್ಳಿ ರವಿ, ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಬಿ.ಶಂಕರ್, ಜೆ.ಎಸ್.ರಘು, ಸುಚಿತ್ರಾ ಪ್ರಸನ್ನ, ಎಚ್.ಎಂ.ಶಾಂತಕುಮಾರ್, ವಿ.ಪಿ.ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

-- ಬಾಕ್ಸ್--

ರಾಜಕೀಯ ಹಿನ್ನೆಲೆಯವರದ್ದೇ ಕಾರುಬಾರು: ಯುವ ಕವಿಗಳಿಗೆ ವೇದಿಕೆ ಇಲ್ಲ!ಮೂಡಿಗೆರೆ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೈಜ ಸಾಹಿತಿಗಳಿಗಿಂತ ರಾಜಕೀಯ ಹಿನ್ನೆಲೆ ಯುಳ್ಳವರೇ ವೇದಿಕೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಯುವ ಕವಿಗಳ ಕವಿಗೋಷ್ಠಿ ಸೇರಿ ದಂತೆ ಸಾಹಿತ್ಯಿಕ ಗೋಷ್ಠಿಗಳಿಗೆ ಅವಕಾಶ ನೀಡದಿರುವುದು ಯುವ ಸಾಹಿತಿಗಳ ಆಕ್ರೋಶಕ್ಕೆ ಕಾರಣ. ಗೋಷ್ಠಿಗಳೇ ಇಲ್ಲದ ಸಮ್ಮೇಳನದ ಅಗತ್ಯವೇನೆಂದು ಪ್ರಶ್ನಿಸಿದ್ದಾರೆ.ಹೆಸರಾಂತ ಸಾಹಿತಿಗಳನ್ನು ಆಹ್ವಾನಿಸಿ ಯುವಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸವಾಗಬೇಕು ಎಂದು ಪತ್ರಕರ್ತ ಹಾಗೂ ಸಾಹಿತ್ಯಪ್ರೇಮಿ ರಾಘವೇಂದ್ರ ಕೆಸವಳಲು ಒತ್ತಾಯಿಸಿದ್ದಾರೆ. ಜಿಲ್ಲಾ ಕಸಾಪವನ್ನು ಮೂರು ಘಟಕಗಳಾಗಿ ವಿಭಜಿಸಿ ರುವುದು, ಮಹಿಳಾ ಮತ್ತು ಯುವ ಘಟಕಗಳ ರಚನೆ ಹಾಗೂ ಜಿಲ್ಲಾಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್ ಅವರ ನಿರ್ಧಾರಗಳನ್ನು ಟೀಕಿಸಿದ್ದಾರೆ.ಪರಿಷತ್ತು ರಾಜಕೀಯ ಓಟ್ ಬ್ಯಾಂಕ್ ಅಥವಾ ಉದ್ಯಮವಾಗದೆ ನೈಜ ಸಾಹಿತಿಗಳಿಗೆ ಆದ್ಯತೆ ನೀಡಬೇಕು. ಸದಸ್ಯತ್ವ, ಕಾರ್ಯಕಾರಿ ಸಮಿತಿ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಸಾಹಿತ್ಯಿಕ ಕೊಡುಗೆಯೇ ಮಾನದಂಡವಾಗಬೇಕೆಂಬ ಆಗ್ರಹ ಕೇಳಿ ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕೆ ಸಂಘಟನೆ ಅಗತ್ಯ
ಕಾಂಗ್ರೆಸ್ ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹೋರಾಟ