- ಎಂಬಿಬಿಎಸ್ ಮುಗಿಸಿ ಸೈಕ್ಯಾಟಿಸ್ಟ್ ಆಗಬೇಕು ಎಂಬ ಆಸೆ ಹೊತ್ತಿದ್ದೇನೆ ಎಂದ ಪ್ರತಿಭಾವಂತೆ - - - ದಾವಣಗೆರೆ: ನಗರದ ದಿ ಟೀಮ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಸೃಜನಾ ಎಸ್. ಗೌಡ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 595 ಅಂಕಗಳಿಸಿ ರಾಜ್ಯಕ್ಕೆ 5ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ.
ಕನ್ನಡ 99, ಇಂಗ್ಲಿಷ್ 99, ಭೌತಶಾಸ್ತ್ರ 98, ಜೀವಶಾಸ್ತ್ರ 99, ರಸಾಯನ ಶಾಸ್ತ್ರ100, ಗಣಿತ 100 ಒಟ್ಟು 595 ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರು ಎಂಬಿಬಿಎಸ್ ಮಾಡಿ ಸೈಕ್ಯಾಟಿಸ್ಟ್ ಆಗಬೇಕು ಎಂಬ ಆಸೆ ಹೊಂದಿದ್ದಾರೆ. ತಮಗೆ ಹಾಸ್ಟೆಲ್‌ನಲ್ಲಿ ಇರಲು, ಓದಲು ಸಹಕಾರ ನೀಡಿ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.
ಸೃಜನಾ ಸೇರಿದಂತೆ ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆ ಅಧ್ಯಕ್ಷ ಕೆ.ಎಂ.ನಂಜಪ್ಪ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಅಭಿನಂದಿಸಿದರು.- - -
-8ಕೆಡಿವಿಜಿ78:ದಾವಣಗೆರೆಯ ದಿ ಟೀಮ್ ಅಕಾಡೆಮಿಯ ವಿದ್ಯಾರ್ಥಿನಿ ಸೃಜನಾ ಎಸ್.ಗೌಡರಿಗೆ ಪೋಷಕರು ಸಿಹಿ ತಿನಿಸಿ ಸಂಭ್ರಮಿಸಿದರು.