ದಶಧರ್ಮ ಸೂತ್ರಗಳು ಜೀವನ ವಿಕಾಸಕ್ಕೆ ಅಡಿಪಾಯ: ಶ್ರೀ ರಂಭಾಪುರಿ ಜಗದ್ಗುರು

KannadaprabhaNewsNetwork |  
Published : Mar 19, 2025, 12:33 AM IST
ಅ | Kannada Prabha

ಸಾರಾಂಶ

ಅಜ್ಜಂಪುರಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಸಮಸ್ತ ಜನರ ಭೋಗ ಮೋಕ್ಷ ಗಳಿಗೆ ಧರ್ಮವೇ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತ ದಶ ಧರ್ಮ ಸೂತ್ರಗಳು ಜೀವನದ ವಿಕಾಸಕ್ಕೆ ಭದ್ರಬುನಾದಿಯಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಕನ್ನಡ ಪ್ರಭ ವಾರ್ತೆ, ಅಜ್ಜಂಪುರಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಸಮಸ್ತ ಜನರ ಭೋಗ ಮೋಕ್ಷ ಗಳಿಗೆ ಧರ್ಮವೇ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತ ದಶ ಧರ್ಮ ಸೂತ್ರಗಳು ಜೀವನದ ವಿಕಾಸಕ್ಕೆ ಭದ್ರಬುನಾದಿಯಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಮಂಗಳವಾರ ತಾಲೂಕಿನ ಗಡಿ ಗಿರಿಯಪುರ ಶ್ರೀ ಸಿದ್ದರಾಮಯ್ಯ ಬಯಲು ಸಭಾಂಗಣದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾ ಚಾರ್ಯ ಜಯಂತಿ ಯುಗಮಾನೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುವುದು. ಪರಿಶುದ್ಧವಾದ ಪವಿತ್ರವಾದ ಜೀವನ ರೂಪಿಸಿಕೊಳ್ಳಲು ಧರ್ಮಪ್ರಜ್ಞೆ ಅವಶ್ಯಕ. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇನೆ ನಿಜವಾದ ಧರ್ಮ. ತಾನು ಎಲ್ಲರಿಗಾಗಿ ಅನ್ನುವುದು ಧರ್ಮ ಎಲ್ಲರು ತನಗಾಗಿ ಅನ್ನುವುದು ಅಧರ್ಮ.ತತ್ವವನ್ನು ಅರಿತವನಿಗೆ ಸತ್ಯದ ಬೆಳಕು ಗೋಚರಿಸುತ್ತದೆ ಎಂದರು.

ಕಾಯಕ ಮತ್ತು ದಾಸೋಹದ ಮೂಲಕ ಅತ್ಯದ್ಭುತ ಯಶಸ್ಸು ಸಾಧಿಸಲು ಸಾಧ್ಯವೆಂಬುದನ್ನು ಬೋಧಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಗಂಡು-ಹೆಣ್ಣು, ಉಚ್ಚ-ನೀಚ, ಬಡವ- ಬಲ್ಲಿದ ಎನ್ನದೆ ಸರ್ವರಿಗೂ ಸಮಾನ ಅವಕಾಶ ಕೊಟ್ಟವರು ಯೋಗಪುರುಷ ಶ್ರೀ ಜಗದ್ಗುರು ರೇಣುಕಾಚಾರ್ಯರೆಂಬುದನ್ನು ಮರೆಯಬಾರದು. ಗ್ರಾಮ ಕ್ಕದಾದರೂ ಬಹುದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿರುವುದು ತಮ್ಮೆಲ್ಲರ ಧರ್ಮ ನಿಷ್ಠೆಗೆ ಗುರುಪೀಠ ಬಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಡಿ ಎಸ್ ಸುರೇಶ್ ಧರ್ಮದರ್ಶನಗಳ ಜ್ಞಾನದ ಅರಿವಿಗೆ ಸಂಸ್ಕೃತಿ ಜ್ಞಾನ ಅವಶ್ಯಕ. ಸದೃಢದ ಸಮೃದ್ಧಿ ನಾಡು ಕಟ್ಟುವುದೇ ಧರ್ಮದ ಪರಮ ಗುರಿ. ಆದರ್ಶ ಗುಣ ಮೌಲ್ಯಗಳ ಧರ್ಮ ವೀರಶೈವ ವ್ಯಕ್ತಿತ್ವ ವಿಕಾಸಕ್ಕೆ ಜಗದ್ಗುರು ರೇಣುಕಾ ಚಾರ್ಯರು ಕೊಟ್ಟ ಕೊಡುಗೆ ಅಪಾರ ದೆಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿ ಮಾತನಾಡಿ ಶಿವಾಗಮಗಳು ವೀರಶೈವ ಸಂಸ್ಕೃತಿಯ ಬೇರು. ಶಿವಾಗಮಗಳಲ್ಲಿ ವೀರಶೈವ ಧರ್ಮದ ಹಿರಿತನ ಮತ್ತು ಪ್ರಾಚೀನ ಇತಿಹಾಸ ಕಾಣಬಹುದು. ಗುರು ಜ್ಯೋತಿಯಂತೆ ಬೆಳಕು ನೀಡಿ ಪ್ರಗತಿ ಪತದತ್ತ ಮುನ್ನಡೆಸಲು ಸಮರ್ಥನಾ ಗಿರುವವನು. ನೋಂದವರ ಬಾಳಿಗೆ ಬೆಳಕು ತೋರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ನಮ್ಮೆಲ್ಲರ ಬಾಳ ಬದುಕಿಗೆ ಶ್ರೇಯಸ್ಸನ್ನು ಉಂಟು ಮಾಡುತ್ತವೆ ಎಂದರು.

ನಂದೀಪುರ ಹಿರೇಮಠದ ನಂದೀಶ್ವರ ಶಿವಾಚಾರ್ಯ ಸ್ವಾಮಿ ಸಮಾರಂಭದ ನೇತೃತ್ವ ವಹಿಸಿ ಅಂತರಂಗದ ಅಂಧಕಾರ ನಿವಾರಣೆ ಶ್ರೀ ಗುರುವಿನಿಂದ ಮಾತ್ರ ಸಾಧ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಾನವೀಯ ಆದರ್ಶ ಮೌಲ್ಯಗಳು ಸಕಲರ ಬಾಳಿನಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು. ಅಜ್ಜಂಪುರ ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಎನ್ ವಿ ಗಂಗಾಧರಯ್ಯ ಸಮರ ಜೀವನವನ್ನು ಅಮರ ಜೀವನದೆಡೆಗೆ ಕರೆದೊಯ್ಯುವುದೇ ಗುರು. ಧರ್ಮಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಆದರ್ಶ ಮೌಲ್ಯಗಳ ಪರಿಪಾಲನೆ ಮತ್ತು ಚಿಂತನೆಗಳು ಅವಶ್ಯಕ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗಪುರುಷರಾಗಿ ಸರ್ವರಿಗೂ ಅನ್ವಯಿಸುವ ಧಾರ್ಮಿಕ ಚಿಂತನ ಬೋಧಿಸಿರುವುದು ನಮ್ಮೆಲ್ಲರ ಬಾಳಿಗೆ ಬಲ ಮತ್ತು ಬೆಳಕು ಉಂಟು ಮಾಡುತ್ತದೆ ಎಂದರು. ಶಿವಮೊಗ್ಗದ ನಿವೃತ್ತ ಪ್ರಾಚಾರ್ಯ ಎಚ್ ಬಿ ಪಂಚಾಕ್ಷರಯ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಹಾಗೂ ಸಾಮಾಜಿಕ ಸತ್ಕ್ರಾಂತಿ ಕುರಿತು ಉಪನ್ಯಾಸವನ್ನಿತರು.

ಪವಿತ್ರ ಸಮಾರಂಭದಲ್ಲಿ ಹುಲಿಕೆರೆ ವಿರೂಪಾಕ್ಷ ಲಿಂಗ ಶಿವಾಚಾರ್ಯರು ತರೀಕೆರೆ ಜಗದೀಶ್ವರ ಶಿವಾಚಾರ್ಯ, ಹುಣಸ ಘಟ್ಟದ ಗುರುಮೂರ್ತಿ ಶಿವಾಚಾರ್ಯರು ಬಿಳಕಿ ರಾಚೋಟೇಶ್ವರ ಶಿವಾಚಾರ್ಯ, ಕೆ.ಬಿದರೆ ಪ್ರಭು ಕುಮಾರ ಶಿವಾಚಾರ್ಯ, ತೆಂಡೆಕೆರೆ ಗಂಗಾಧರ ಶಿವಾಚಾರ್ಯ, ಬೀರೂರು ರುದ್ರಮುನಿ ಶಿವಾಚಾರ್ಯ, ತಾವರೆಕೆರೆ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ, ಹಾಗೂ ಹಣ್ಣೆ ಮರಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ವಹಿಸಿದ್ದರು.

ಗಣ್ಯರು ಹಾಗೂ ದಾನಿಗಳಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಜಿಪಂ ಮಾಜಿ ಸದಸ್ಯ ಕೆ.ಆರ್. ಆನಂದಪ್ಪ ಮತ್ತು ಶಂಭೈನೂರು ಆನಂದಪ್ಪ ಕುಮಾರಿ ರಚನಾ ಶ್ರೀನಿವಾಸ್ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಗುರು ರಕ್ಷೆ ಪಡೆದರು. . ಕುಮಾರಿ ಪ್ರೀತಿ ಶಿಕ್ಷಕ ಜಗದೀಶ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ