ರಾಮನಗರ: ಬರಡು ಭೂಮಿಯನ್ನು ಜಾನಪದ ಕಾಶಿಯಾಗಿ ಮಾಡಿ ರಾಮನಗರವನ್ನು ಪ್ರಸಿದ್ಧಗೊಳಿಸಿದ ಕೀರ್ತಿ ಎಚ್.ಎಲ್.ನಾಗೇಗೌಡರಿಗೆ ಸಲ್ಲುತ್ತದೆ ಎಂದು ಸ್ನೇಹಕೂಟ ಟ್ರಸ್ಟ್ ಅಧ್ಯಕ್ಷ ಎಚ್.ಪಿ.ನಂಜೇಗೌಡ ತಿಳಿಸಿದರು.
ಸಾಹಿತಿ ವಿಜಯ್ ರಾಂಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಗಲು ವೇಷ ಕಲಾವಿದರು ರಂಗಭೂಮಿ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರು. ಗ್ರಾಮೀಣ ಭಾಗದಲ್ಲಿ ಪೌರಾಣಿಕ ಪಾತ್ರಗಳ ವೇಷಗಳನ್ನು ಧರಿಸಿ ಗ್ರಾಮೀಣರ ಮನಗೆದ್ದ ಕಲಾವಿದರು ಇವರು. ಹಗಲು ವೇಷ ಕಲೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಎಲ್ಲಿ ಹಗಲುವೇಷ ಕಲೆ ಮರೆಯಾಗುವುದೋ ಎಂಬ ಆತಂಕದಲ್ಲಿ ಅವರು ಹಗಲು ವೇಷ ಕಲೆಯನ್ನು ಉಳಿಸಿ ಬೆಳೆಸುತ್ತಾ ಮಹಾಭಾರತ, ರಾಮಾಯಣ ನಾಟಕಗಳ ಪಾತ್ರಗಳನ್ನು ವರ್ಷವಿಡೀ ಪಸರಿಸುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.
ಸಂಕಷ್ಟದಲ್ಲಿರುವ ಇಂತಹ ಕಲಾವಿದರಿಗೆ ಇಡೀ ಸಮಾಜ ಅವರ ಕಲೆಗೆ ಗೌರವ ಕೊಟ್ಟು ಪ್ರೋತ್ಸಾಹ ನೀಡಬೇಕಿದೆ. ಈ ನಿಟ್ಟಿನಲ್ಲಿ ಜಾನಪದ ಲೋಕ ವಿವಿಧ ಜನಪದ ಪ್ರಕಾರಗಳ ಕಲಾವಿದರನ್ನು ಹುಡುಕಿ ತಿಂಗಳ ಅತಿಥಿಯಾಗಿ ಕರೆಸಿ ಅವರ ಕಲೆಗೆ ಪ್ರೋತ್ಸಾಹ ನೀಡುವ ನಾಗೇಗೌಡರ ಕನಸ್ಸು ಸಾರ್ಥಕಗೊಳಿಸುವ ಕೆಲಸ ನಡೆಯುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಲೋಕಸಿರಿ-90ರ ಗೌರವ ಅತಿಥಿ ಹಗಲುವೇಷ ಕಲಾವಿದ ಅಶ್ವರಾಮಣ್ಣ ಅವರಿಗೆ ಜಾನಪದ ಪರಿಷತ್ತು ವತಿಯಿಂದ ೫ ಸಾವಿರ ನಗದು, ಪ್ರಶಸ್ತಿಪತ್ರ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.
ಪೊಟೋ೧೦ಸಿಪಿಟಿ೭:
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕಸಿರಿ-90ರ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಹಗಲುವೇಷ ಕಲಾವಿದ ಅಶ್ವರಾಮಣ್ಣ ಅವರನ್ನು ಗೌರವಿಸಲಾಯಿತು.