ಗದಗ: ತೋಂಟದಾರ್ಯ ಮಠದ ಜಾತ್ರೆ ಏ. 1ರಿಂದ 4ರ ವರೆಗೆ ನಡೆಯಲಿದ್ದು, ಆದರೆ, ನಗರಸಭೆ ಜಾಗದಲ್ಲಿ ಈ ಜಾತ್ರೆ 65 ದಿನಗಳ ಕಾಲ ನಡೆಯುತ್ತದೆ. ಇದು ಒಂದು ವಾರಕ್ಕೆ ಸೀಮಿತವಾಗಿರಲಿ ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2016ರಿಂದ ಅಧಿಕ ದಿನ ನಡೆಯುವ ಜಾತ್ರೆ ವಿರೋಧಿಸುತ್ತಾ ಬಂದಿದ್ದೇವೆ. ಈ ಜಾತ್ರೆಗೆ ಹೊರರಾಜ್ಯದಿಂದ ವ್ಯಾಪಾರಕ್ಕೆ ಆಗಮಿಸುತ್ತಾರೆ. ಇವರು ಜಿಲ್ಲೆಯ ಉದ್ಯೋಗ ಕಸಿದುಕೊಂಡು ಹೋಗುತ್ತಾರೆ. ಬಟ್ಟೆ, ಶೂ, ಪಾತ್ರೆ ಸೇರಿದಂತೆ ಎಲ್ಲವನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರು ಬಾಡಿಗೆ ಅಂಗಡಿಗಳನ್ನು ಇಟ್ಟುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಈ ವೇಳೆ ಮಹೇಶ್ ರೋಖಡೆ, ಶಿವಯೋಗಿ ಹಿರೇಮಠ, ಪಿ.ಎಸ್. ಕಾಳೆ, ಭರತ್ ಲದ್ದಿ, ವೆಂಕಟೇಶ್ ದೊಡ್ಡಮನಿ, ಸತೀಶ್ ಕುಂಬಾರ, ಶಿವು ಲದ್ದಿ, ವಿಶ್ವನಾಥ ಸಿರಿ ಉಪಸ್ಥಿತರಿದ್ದರು.ಇಂದಿನಿಂದ ಸಚ್ಚಿದಾನಂದ ಸ್ವಾಮಿಗಳ ಮಠದ ಜಾತ್ರೆ
ಗದಗ: ನಗರದ ಸಚ್ಚಿದಾನಂದ ಮಠದಲ್ಲಿ ಮಾ. 27 ಮತ್ತು 28ರಂದು ವಿಶೇಷ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪ್ರಧಾನ ಕಾರ್ಯದರ್ಶಿ ರವಿಕುಮಾರ ರೆಡ್ಡಿ ತಿಳಿಸಿದರು.ನಗರದ ಶ್ರೀಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸದ್ಗುರು ಸಚ್ಚಿದಾನಂದ ಸ್ವಾಮಿಗಳ ಅವರ ಕೃಪಾಶೀರ್ವಾದದೊಂದಿಗೆ ಈ ಬಾರಿಯ ಜಾತ್ರಾ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಲಿದ್ದು, ಮಾ. 27ರಂದು ಬೆಳಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ.ಬೆಳಗ್ಗೆ ಸಕಲ ವಾದ್ಯಗಳೊಂದಿಗೆ ಸದ್ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಸಚ್ಚಿದಾನಂದ ಮಠದ ಯೋಗ ಕೇಂದ್ರದ ಮಕ್ಕಳು ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಮಾ. 27ರಂದು ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಘನ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ಮಹಾರಥೋತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಹಾಗೂ ಮಠದ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಸಾರ್ವಜನಿಕರಿಗೆ ಮಧ್ಯಾಹ್ನ 1ರಿಂದ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಮಾ. 28ರಂದು ಬೆಳಗ್ಗೆ ಪವಿತ್ರವಾದ ಕೌದಿ ಪೂಜೆಯೊಂದಿಗೆ ಈ ವರ್ಷದ ಜಾತ್ರಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಭಕ್ತಿ ಮತ್ತು ಸಂಸ್ಕೃತಿಯ ಸಂಗಮವಾದ ಈ ಪವಿತ್ರ ಕಾರ್ಯಕ್ರಮಕ್ಕೆ ಜಿಲ್ಲೆಯ ಜನತೆ ಹಾಗೂ ಸದ್ಗುರುಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.