ಒಕ್ಕಲಿಗರ ಏಳಿಗೆಯೇ ನನ್ನ ಗುರಿ: ಪ್ರಶಾಂತ್ ಕೆಂಪೇಗೌಡ

KannadaprabhaNewsNetwork |  
Published : Sep 29, 2026, 01:30 AM IST
೨೮ಕೆಎಂಎನ್‌ಡಿ-೪ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಚುನಾವಣಾ ಆಕಾಂಕ್ಷಿ ಪ್ರಶಾಂತ್ ಕೆಂಪೇಗೌಡ ಮಾತನಾಡಿದರು. | Kannada Prabha

ಸಾರಾಂಶ

ನಾನು ನಿರ್ದೇಶಕನಾಗಿ ಒಮ್ಮೆ ಆಯ್ಕೆಯಾದರೆ ಸರ್ಕಾರ ಅನುದಾನ ನೀಡದಿದ್ದರೂ ಒಕ್ಕಲಿಗರ ಭವನ ನಿರ್ಮಾಣಕ್ಕೆ ಜಾಗ ಹುಡುಕಿ ಶಂಕುಸ್ಥಾಪನೆ ನೆರವೇರಿಸುತ್ತೇನೆ. ನನ್ನೆಲ್ಲಾ ಪ್ರಮುಖ ಉದ್ದೇಶಗಳನ್ನು ಜಾರಿಗೊಳಿಸಿ ಸಮುದಾಯದ ಜನರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಭರವಸೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಒಕ್ಕಲಿಗ ಸಮುದಾಯದ ಏಳಿಗೆಯನ್ನೇ ಪ್ರಮುಖ ಗುರಿಯಾಗಿಸಿಕೊಂಡು ಡಿಸೆಂಬರ್ ತಿಂಗಳಲ್ಲಿ ನಡೆಯಲಿರು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ವಕೀಲ ಪ್ರಶಾಂತ್ ಕೆಂಪೇಗೌಡ ತಿಳಿಸಿದರು.

ಒಕ್ಕಲಿಗರ ಸಂಘದ ನಿರ್ದೇಶಕನಾಗುವುದಕ್ಕೆ ನಾನು ಪ್ರಮುಖ ಐದು ಉದ್ದೇಶಗಳನ್ನು ಹೊಂದಿದ್ದೇನೆ. ನಿರಾಶ್ರಿತ ಹಾಗೂ ನಿರ್ಗತಿಕ ೨೦ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ೧೦ ಸಾವಿರ ರು. ಪ್ರೋತ್ಸಾಹ ಧನ ನೀಡುವುದು. ನಿರಾಶ್ರಿತ, ನಿರ್ಗತಿಕ ಒಕ್ಕಲಿಗ ಸಮುದಾಯದ ಜನರಿಗಾಗಿ ೧೦ ಲಕ್ಷ ರು. ಠೇವಣಿ ಇಟ್ಟು ಅಂತ್ಯ ಸಂಸ್ಕಾರಕ್ಕೆ ನೆರವಾಗುವುದು. ವರ್ಷಕ್ಕೆ ಎರಡು ಬಾರಿ ಒಕ್ಕಲಿಗ ಜನಾಂಗದ ವಧು-ವರರ ವಿವಾಹಕ್ಕೆ ಸಹಕಾರಿಯಾಗಿ ನಿಲ್ಲುವುದು. ಒಕ್ಕಲಿಗರ ಭವನ ನಿರ್ಮಾಣ, ಒಕ್ಕಲಿಗರ ಸಂಘದ ಆಸ್ತಿ ರಕ್ಷಣೆಗೆ ಆದ್ಯತೆ ನೀಡುವುದು ನನ್ನ ಪ್ರಮುಖ ಧ್ಯೇಯವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ನಿರ್ದೇಶಕನಾಗಿ ಒಮ್ಮೆ ಆಯ್ಕೆಯಾದರೆ ಸರ್ಕಾರ ಅನುದಾನ ನೀಡದಿದ್ದರೂ ಒಕ್ಕಲಿಗರ ಭವನ ನಿರ್ಮಾಣಕ್ಕೆ ಜಾಗ ಹುಡುಕಿ ಶಂಕುಸ್ಥಾಪನೆ ನೆರವೇರಿಸುತ್ತೇನೆ. ನನ್ನೆಲ್ಲಾ ಪ್ರಮುಖ ಉದ್ದೇಶಗಳನ್ನು ಜಾರಿಗೊಳಿಸಿ ಸಮುದಾಯದ ಜನರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ನಾನು ವಿದ್ಯಾರ್ಥಿ ದೆಸೆಯಿಂದಲೇ ರಕ್ತದಾನಿಯಾಗಿದ್ದು, ಇದುವರೆಗೂ ಸುಮಾರು ೭೦ ಬಾರಿ ರಕ್ತದಾನ ಮಾಡಿದ್ದೇನೆ. ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ತುರ್ತು ಸಮಯದಲ್ಲಿ ರಕ್ತಕ್ಕೆ ವ್ಯವಸ್ಥೆ ಮಾಡಿದ್ದೇನೆ. ನೇತ್ರ ತಪಾಸಣಾ ಶಿಬಿರಗಳ ಮೂಲಕ ಸುಮಾರು ೧೨೦ಕ್ಕೂ ಹೆಚ್ಚು ಮಂದಿಗೆ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದೇನೆ. ಕೋವಿಡ್ ಸಮಯದಲ್ಲಿ ೧೩ ಲಕ್ಷ ರು.ಗೂ ಹೆಚ್ಚಿನ ಔಷಧಗಳನ್ನು ರೋಗಿಗಳ ಮನೆ ಬಾಗಿಲಿಗೆ ತಲುಪಿಸಿದ್ದು, ಒಂದು ಉಚಿತ ಆಂಬ್ಯುಲೆನ್ಸ್, ಜಿಲ್ಲೆಯಾದ್ಯಂತ ಅವಶ್ಯವಿರುವವರಿಗೆ ಊಟದ ನೆರವು ಹಾಗೂ ೧೦೦ ಟನ್‌ಗೂ ಹೆಚ್ಚಿನ ತರಕಾರಿ ವಿತರಣೆಯನ್ನು ಸ್ನೇಹಿತರ ಸಹಕಾರದಿಂದ ಮಾಡಿರುವುದಾಗಿ ಹೇಳಿದರು.

ಅನ್ಯ ಧರ್ಮಗಳಿಗೆ ಮತಾಂತರವಾಗಿದ್ದ ಸುಮಾರು ೨೦ಕ್ಕೂ ಹೆಚ್ಚು ಕುಟುಂಬಗಳ ಮನವೊಲಿಸಿ ಮಾತೃಧರ್ಮಕ್ಕೆ ಕರೆತಂದಿದ್ದೇನೆ. ಹಲವಾರು ಮಂದಿಗೆ ಉಚಿತಾಗಿ ಕಾನೂನು ನೆರವು ನೀಡಿರುವುದಾಗಿ ಹೇಳಿದ ಅವರು, ಈ ಹಿಂದೆ ರಾಷ್ಟ್ರೀಯ ಪಕ್ಷವೊಂದರ ಯುವ ಘಟಕದ ಜಿಲ್ಲಾಧ್ಯಕ್ಷನಾಗಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುವ ಅನುಭವ ಹೊಂದಿರುವುದಾಗಿ ತಿಳಿಸಿದರು.

ಜಿಲ್ಲೆಯ ಶ್ರೀನಿಮಿಷಾಂಬೀವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯನಾಗಿದ್ದು, ನಮ್ಮ ಅವಧಿಯಲ್ಲಿ ದೇವಾಲಯದ ಆಡಳಿತಾತ್ಮಕ ವಿಷಯಗಳಲ್ಲಿ ಲೋಪವಿಲ್ಲದೆ ಕಾರ್ಯನಿರ್ವಹಿಸಿದ ತೃಪ್ತಿರುವುದಾಗಿ ಹೇಳಿದರು.

ಒಕ್ಕಲಿಗರ ಸಂಘದ ಜಾಗೃತಿಗಾಗಿ ಮತ್ತು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದು, ಒಕ್ಕಲಿಗರ ಸಂಘದ ಮತದಾರರು ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಪರ ಸಂಘಟನೆಗಳ ಬೆಂಬಲದೊಂದಿಗೆ ಗಣೇಶ ಮೂರ್ತಿಗಳ ವಿಸರ್ಜನೆ
ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ