ವಿಜಯಪುರ ಪುರಸಭೆಯ ೧೧ ಪೌರಕಾರ್ಮಿಕರ ಕೆಲಸ ಕಾಯಂ

KannadaprabhaNewsNetwork |  
Published : Feb 15, 2024, 01:16 AM IST
ವಿಜೆಪಿ ೧೪ವಿಜಯಪುರ ಪಟ್ಟಣದ ಪುರಸಭೆಯಲ್ಲಿ ಪೌರಕಾರ್ಮಿಕರ ಹುದ್ದೆಯಲ್ಲಿ ೧೧ ಮಂದಿ ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಿದ್ದು,  ಪುರಸಭೆ ಅಧ್ಯಕ್ಷೆ ವಿಮಲಾಬಸವರಾಜ್, ಉಪಾಧ್ಯಕ್ಷ ಎಂ.ಕೇಶವಪ್ಪ, ಮುಖ್ಯಾಧಿಕಾರಿ ಜಿ.ಆರ್.ಸಂತೋಷ್,ಅವರು ನೇಮಕಾತಿ ಪತ್ರ ವಿತರಿಸಿದರು. | Kannada Prabha

ಸಾರಾಂಶ

ವಿಜಯಪುರ: ಪಟ್ಟಣದ ಪುರಸಭೆಯಲ್ಲಿ ಖಾಲಿಯಿದ್ದ ೧೫ ಪೌರಕಾರ್ಮಿಕರ ಹುದ್ದೆಯಲ್ಲಿ ೧೧ ಮಂದಿ ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಿದ್ದು, ಪುರಸಭಾ ಅಧ್ಯಕ್ಷೆ ವಿಮಲಾ ನೇಮಕಾತಿ ಪತ್ರ ವಿತರಿಸಿದರು.

ವಿಜಯಪುರ: ಪಟ್ಟಣದ ಪುರಸಭೆಯಲ್ಲಿ ಖಾಲಿಯಿದ್ದ ೧೫ ಪೌರಕಾರ್ಮಿಕರ ಹುದ್ದೆಯಲ್ಲಿ ೧೧ ಮಂದಿ ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಿದ್ದು, ಪುರಸಭಾ ಅಧ್ಯಕ್ಷೆ ವಿಮಲಾ ನೇಮಕಾತಿ ಪತ್ರ ವಿತರಿಸಿದರು. ಬಳಿಕ ಮಾತನಾಡಿದ ಮಾತನಾಡಿ, ಪಟ್ಟಣವನ್ನು ನಿತ್ಯ ಸ್ವಚ್ಛಗೊಳಿಸುವ ಪೌರಕಾರ್ಮಿಕರು ನೈಜ ಕಾಯಕ ಯೋಗಿಗಳಾಗಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಇವರ ಪಾತ್ರ ಅನನ್ಯ. ಪೌರಕಾರ್ಮಿಕರ ಹಿತಕಾಪಾಡುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ ಎಂದರು.

ಮಹಿಳಾ ಕಾರ್ಮಿಕರು ನಿತ್ಯ ಕಾಯಕದ ಜತೆಗೆ ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಿ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಪಾಸಣೆ ಮಾಡಿಕೊಳ್ಳಬೇಕು. ನೀವು ಆರೋಗ್ಯವಾಗಿದ್ದರೆ ಪಟ್ಟಣದ ಸ್ವಚ್ಛವಾಗಿರಲು ಸಾಧ್ಯ ಎಂದರು.

ಕೃಷ್ಣಪ್ಪ, ಡಿ.ಅಣ್ಣಪ್ಪ, ಶಾರದಮ್ಮ, ಕೋಕಿಲ, ಆರ್.ಲಕ್ಷ್ಮಣ, ನಾರಾಯಣಸ್ವಾಮಿ, ಎಂ. ಶಿವ, ಎಂ.ಮಂಜುನಾಥ, ಕೆ.ಮಾರಪ್ಪ, ಪ್ರಸಾದ, ಶಿವ. ಇವರು ನೇರಪಾವತಿ, ಕ್ಷೇಮಾಭಿವೃದ್ಧಿ, ದಿನಗೂಲಿ ಗುತ್ತಿಗೆ ಸಮಾನ ಕೆಲಸಕ್ಕೆ ಸಮಾನ ವೇತನದ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್, ಉಪಾಧ್ಯಕ್ಷ ಎಂ.ಕೇಶವಪ್ಪ, ಸದಸ್ಯರಾದ ಭೈರೇಗೌಡ, ಎಂ.ರಾಜಣ್ಣ, ಸಿ.ಎಂ.ರಾಮು, ಶ್ರೀರಾಮಪ್ಪ, ಕಂದಾಯ ಅಧಿಕಾರಿ ಚಂದ್ರು, ಕಂದಾಯ ನಿರೀಕ್ಷಕ ತ್ಯಾಗರಾಜ್, ಎಂಜಿನಿಯರ್ ಶೇಖರ್, ಅನಿಲ್, ಲಿಂಗಣ್ಣ, ಶಿವನಾಗೇಗೌಡ, ಪವನ್ ಜೋಷಿ, ಮೇಸ್ತ್ರೀ ನಾಗರಾಜ್, ಜಿ.ಜನಾರ್ಧನ, ಪೌರಕಾರ್ಮಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ