ಕನ್ನಡಪ್ರಭ ವಾರ್ತೆ ಬೆಳಗಾವಿ
ಪತ್ರಿಕೆಗಳು ಪ್ರಸಕ್ತ ವಿದ್ಯಮಾನಗಳನ್ನು ನಿರ್ಭಯ, ನಿಷ್ಠುರ, ನಿಷ್ಪಕ್ಷಪಾತ ಮತ್ತು ಸತ್ಯದಾಯಕ ವರದಿಗಳನ್ನು ಬಿತ್ತರಿಸಿ ನಾಗರಿಕ ಸಮಾಜ ನಿರ್ಮಿಸುವ ಹೊಣೆಗಾರಿಕೆ ಮಾಡುತ್ತವೆ ಎಂದು ಅಥಣಿ ತಾಲೂಕಿನ ತಹಸೀಲ್ದಾರ್ ಶಿ.ಹು.ಭೋಸಗಿ ಹೇಳಿದರು.ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಮಲ್ಲಪ್ಪ ಯೋಗಪ್ಪ ಖ್ಯಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಥಣಿ ತಾಲೂಕು ಉದಯೊನ್ಮುಖ ಪತ್ರರ್ಕತರ ಬಳಗ ಆಯೊಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ನಾಗರಿಕ ಸಮಾಜ ನಿರ್ಮಿಸುವಲ್ಲಿ ಪತ್ರಿಕೆಗಳು ನಿಭಾಯಿಸುವ ಜವಾಬ್ದಾರಿ ಅತ್ಯಂತ ನಿರ್ಣಾಯಕವಾಗಿರುತ್ತದೆ. ಅನೇಕ ತೆರನಾದ ಬರುವ ಬೆದರಿಕೆ ಗಂಭೀರ ಸವಾಲುಗಳ ನಡುವೆ ಸಮಸ್ಯೆ ಮತ್ತು ಭ್ರಷ್ಟಾಚಾರದಂತ ಸುದ್ದಿಗಳನ್ನು ಪತ್ರಿಕೆಗಳು ಬಿತ್ತರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತವೆ. ಆ ವರದಿಯನ್ನು ಸಂಗ್ರಹಿಸುವ ಪತ್ರಕರ್ತರ ಕಾರ್ಯ ಅತ್ಯಂತ ಸವಾಲಿನದಾಗಿದೆ ಎಂದರು.
ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ ಪಕ್ಷದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನಾಯಾಂಗಳ ಕಾರ್ಯ ವೈಖರಿ ಸಂಬಂಧಿಸಿದ ಲೋಪ-ದೋಷಗಳನ್ನು ತಮ್ಮ ವರದಿಗಳಿಂದ ವಿಶ್ಲೇಷಿಸಿ ಅವುಗಳನ್ನು ತಿದ್ದುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತವೆ. ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಸಮುದಾಯಕ್ಕೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಮತ್ತು ಸಮಸ್ಯೆಗಳ ಧ್ವನಿಯಾಗಿ ಪತ್ರಿಕೆ ಕಾರ್ಯ ಮಾಡುತ್ತವೆ. ಪತ್ರಿಕೆಗಳು ಜನ ಸಮುದಾಯವನ್ನು ಜ್ಞಾನವಂತರನ್ನಾಗಿಸಿ ಅವರ ಧ್ವನಿ ಮೂಲಕವೇ ಸರ್ಕಾರ ಮತ್ತು ಅಧಿಕಾರಿಗಳ ಕಿವಿ ಹಿಂಡುವ ಮಹತ್ವವಾದ ಕಾರ್ಯವನ್ನು ಮಾಡುತ್ತವೆ ಎಂದರು.ಉಪನ್ಯಾಸಕ ಸುರೇಶ ಗೆಜ್ಜೆ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಜಹಿದ್ ಮಕ್ಕಂದರ, ಎಎಸೈ ಬಾಡಗಿ ಆತ್ಮಾರಾವ ಸ್ವಾಮೀಜಿ, ಪತ್ರಕರ್ತರಾದ ಸಂಗಮೇಶ ಬ್ಯಾಡರಟ್ಟಿ, ಪುತ್ರೇಶ ನ್ಯಾಮಗೌಡ, ಮಹಾಂತೇಶ ನ್ಯಾಮಗೌಡ, ಸಂಗಮೇಶ ನ್ಯಾಮಗೌಡ, ಸಿದ್ದು ತೆರದಾಳ, ಬಸವರಾಜ ಬಿರಾದಾರ, ತಾಪಂ ಇಒ ಶಿವಾನಂದ ಕಲ್ಲಾಪೂರ ಇತರರು ಇದ್ದರು.ಐಶ್ವರ್ಯ ಬಿರಾದಾರ ಪ್ರಾರ್ಥಿಸಿದರು. ಶಿವಕುಮಾರ.ಕೆ ಸ್ವಾಗತಿಸಿದರು. ವಿಶ್ವನಾಥ ಪಾಟೀಲ ನಿರೂಪಿಸಿದರು. ರೋಹಿಣಿ ಜತ್ತಿ ವಂದಿಸಿದರು.