ಕಳ್ಳತನ: ಆರೋಪಿಗಳ ಬಂಧನ, ವಸ್ತು ವಶ

KannadaprabhaNewsNetwork |  
Published : Jun 05, 2025, 12:49 AM IST
ಹರಪನಹಳ್ಳಿ ತಾಲೂಕಿನ ಹಿರೇಮೇಗಳಗೇರಿ ಗ್ರಾಮದ ಭದ್ರಾ ಚಾನಲ್‌ ಬಳಿ ಈಚೆಗೆ ಕಳ್ಳತನವಾಗಿದ್ದ ಪಂಪು, ಮೋಟಾರುಗಳನ್ನು ಅರಸೀಕೆರೆ ಪೋಲೀಸರು ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿದ್ದಾರೆ. ಪಿಎಸ್ ಐ ರಂಗಯ್ಯ ಹಾಗೂ ಸಿಬ್ಬಂದಿ ಇದ್ದರು. | Kannada Prabha

ಸಾರಾಂಶ

ತಾಲೂಕಿನ ಅರಸೀಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಹಿರೇಮೇಗಳಗೇರಿ ಗ್ರಾಮದ ಭದ್ರಾ ಚಾನಲ್‌ ಬಳಿ ಈಚೆಗೆ ನಡೆದ ಪಂಪ್‌, ಮೋಟಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ತಾಲೂಕಿನ ಅರಸೀಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಹಿರೇಮೇಗಳಗೇರಿ ಗ್ರಾಮದ ಭದ್ರಾ ಚಾನಲ್‌ ಬಳಿ ಈಚೆಗೆ ನಡೆದ ಪಂಪ್‌, ಮೋಟಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಹಿರೇಮೇಗಳಗೇರಿ ಗ್ರಾಮದ ಗಾಯಪ್ಪರ ಹನುಮಂತ, ಕರೇಳರ ಅಣ್ಣಪ್ಪ, ಪೂಜಾರ ಪರುಶುರಾಮ ಹಾಗೂ ನಾಗಪ್ಲರ ಅರುಣ ಬಂಧಿತರು.

ಕಳ್ಳತನವಾಗಿದ್ದ ಅಂದಾಜು ₹70 ಸಾವಿರ ಬೆಲೆಬಾಳುವ 10 ಎಚ್.ಪಿ. ಹಾಗೂ 7.5 ಎಚ್.ಪಿ. ಸಾಮರ್ಥ್ಯವಿರುವ ಎರಡು ಪಂಪ್ ಸೆಟ್ ಮೋಟಾರ್ ಹಾಗೂ ಆರೋಪಿತರ ಬಳಿ ಇದ್ದ ಅಂದಾಜು ₹1.10 ಲಕ್ಷ ಬೆಲೆ ಬಾಳುವ ಎರಡು ಮೋಟಾರ್ ಸೈಕಲ್ ಸೇರಿ ಒಟ್ಟು ಬೆಲೆ ₹1.80 ಲಕ್ಷ ವಸ್ತು ವಶಪಡಿಸಿಕೊಳ್ಳಲಾಗಿದೆ.

ಎಸ್ಪಿ ಹರಿಬಾಬು ನಿರ್ದೆಶನದಂತೆ ಡಿವೈಎಸ್ಪಿ ವೆಂಕಟಪ್ಪ ನಾಯಕ್, ವೃತ್ತನಿರೀಕ್ಷಕ ಮಹಾಂತೇಶ್ ಸಜ್ಜನ್, ಪಿಎಸ್ಐ ಕೆ.ರಂಗಯ್ಯ, ಅರಸೀಕೆರೆ ಠಾಣೆಯ ಸಿಬ್ಬಂದಿ ಗುರುರಾಜ್ ಕೆ., ಹರೀಶ್ ದೇವರಟ್ಟಿ, ದಾದಾಪೀರ್, ವಸಂತ್ ಕುಮಾರ್, ಎಚ್.ಡಿ. ಬಣಕಾರ್, ಅವರ ವಿಶೇಷ ತಂಡ ಕಳ್ಳತನ ಪ್ರಕರಣ ಪತ್ತೆ ಹಚ್ಚಿದೆ.

ಸ್ಲೀಪರ್ ಬಸ್‌ನ ಮೇಲಿನ ಸೀಟ್ ಬಿದ್ದು, ಪ್ರಯಾಣಿಕನಿಗೆ ಗಾಯ!:

ಕಲಬುರಗಿಯಿಂದ ಹೊಸಪೇಟೆ ನಗರಕ್ಕೆ ಬರುತ್ತಿದ್ದ ಸರ್ಕಾರಿ ಸ್ಲೀಪರ್ ಬಸ್‌ನ ಮೇಲಿನ ಸೀಟ್ ತುಂಡಾಗಿ ಬಿದ್ದು, ಪ್ರಯಾಣಿರೊಬ್ಬರಿಗೆ ತರಚಿದ ಗಾಯವಾಗಿದೆ.ಈ ಬಸ್‌ (KA- 35 F- 138) ಹರಪನಹಳ್ಳಿ ಡಿಪೋಗೆ ಸೇರಿದೆ. ನಿತ್ಯ ಹರಪನಹಳ್ಳಿಯಿಂದ ಕಲಬುರಗಿ ಹಾಗೂ ಕಲಬುರಗಿಯಿಂದ ಹರಪನಹಳ್ಳಿಗೆ ಓಡಾಡುವ ಈ ನಾನ್‌ ಏಸಿ ಸ್ಲೀಪರ್‌ ಬಸ್‌ನಲ್ಲಿ ಈ ಅವಘಡ ಸಂಭವಿಸಿದೆ. ಬಸ್‌ನ ಸೀಟ್‌ ತುಂಡಾಗಿ ಕೆಳಗಡೆ ಮಲಗಿದ್ದ ಪ್ರಯಾಣಿಕ ಓರ್ವರ ಮೇಲೆ ಬಿದ್ದಿದೆ. ಈಗ ಸಾರಿಗೆ ಇಲಾಖೆ ಈ ಬಸ್‌ಅನ್ನು ರಿಪೇರಿಗೆ ಬಿಟ್ಟಿದೆ. ಇಂತಹ ಬಸ್‌ಗಳನ್ನು ಸಾರಿಗೆ ಇಲಾಖೆ ಓಡಿಸದೇ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಿ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

PREV

Recommended Stories

ತನಿಖೆ ಮಾಡಿದ್ದೇನೆ, ಬೆಂಗ್ಳೂರು ಗ್ರಾ.ದಲ್ಲಿ ಅಕ್ರಮ ಆಗಿದೆ : ಡಿಕೆಶಿ
ಬಾಲ್ಯ ವಿವಾಹ ತಡೆಗೆ ಸರ್ಕಾರ ಕಠಿಣ ಕ್ರಮ : ಅಪ್ರಾಪ್ತರ ವಿವಾಹ ನಿಶ್ಚಿತಾರ್ಥ ಮಾಡಿದರೆ ಇನ್ನು ಜೈಲು ಶಿಕ್ಷೆ!