ಧಾರವಾಡ:
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಹಾವೇರಿಯ ಆರ್.ಎಂ. ಕುಬೇರಪ್ಪ, ಹುಬ್ಬಳ್ಳಿಯ ಇಮ್ರಾನ ಕೂಡಲ, ಹಾವೇರಿಯ ಸಲೀಂ ಹನೀಫ ಜವಳಿ ಹಾಗೂ ಹಾವೇರಿಯ ಸುರೇಶ ಬಿಷ್ಟನಗೌಡರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಣದಲ್ಲಿ 14 ಜನ ಅಭ್ಯರ್ಥಿಗಳು ಉಳಿದಿದ್ದಾರೆ ಎಂದರು.
ಯಾರ್‍ಯಾರು ಸ್ಪರ್ಧೆ:ಚುನಾವಣಾ ಕಣದಲ್ಲಿ ಬಿಜೆಪಿಯಿಂದ ಎಸ್.ವಿ. ಸಂಕನೂರ, ಕಾಂಗ್ರೆಸ್ಸಿನಿಂದ ಮೋಹನ ಲಿಂಬಿಕಾಯಿ, ಕೆಆರ್‌ಎಸ್. ಪಕ್ಷದಿಂದ ನಿಶಾಂತ ಬಂಕಾಪುರ, ಕಿತ್ತೂರು ಕಲ್ಯಾಣ ಸೇನಾದಿಂದ ಮಲ್ಲಿಕಾರ್ಜುನ ಗಂಗಾಧರ, ಜನತಾ ಚಳವಳಿ ಭಾರತದಿಂದ ಶಿವಕುಮಾರ ತಳವಾರ, ಪಕ್ಷೇತರರಾಗಿ ಅಬ್ದುಲ್ ಮನ್ನಾರ, ಡಾ. ಜಿ.ಎಚ್. ಇಮ್ರಾಪುರ, ಉಮೇಶ ದೈವಜ್ಞ, ಕೃಷ್ಣ ಬಳೆಗಾರ, ಕಾಂತಕುಮಾರ ಆರ್., ಜಿಶಾನ್ ಸಿರಸಂಗಿ, ಬಸವರಾಜ ಕೊಟಗಿ ಹಾಗೂ ಸಂತೋಷ ವರ್ಣೇಕರ ಇದ್ದಾರೆ. ಮತದಾನವು ಅ. 23ರ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.
ನಾಲ್ಕು ಜಿಲ್ಲೆಗಳು ಸೇರಿದಂತೆ ಕ್ಷೇತ್ರದಲ್ಲಿ 57,345 ಪುರುಷ, 40,053 ಮಹಿಳೆ ಸೇರಿದಂತೆ ಒಟ್ಟು 97,398 ಮತದಾರರು ಅರ್ಹರಿದ್ದಾರೆ. ಒಟ್ಟು 137 ಮತಗಟ್ಟೆ ಸ್ಥಾಪಿಸಿದ್ದು, ಅಗತ್ಯ ಸಿಬ್ಬಂದಿಯನ್ನು ಈ ಮತಗಟ್ಟೆಗಳಿಗೆ ನೇಮಿಸಲಾಗಿದೆ. ಈ ಸಿಬ್ಬಂದಿಗೆ ತರಬೇತಿ ಸಹ ಸದ್ಯದಲ್ಲಿಯೇ ನೀಡಲಾಗುವುದು. ಇನ್ನು, ಮಾದರಿ ನೀತಿ ಜಾರಿ ಕುರಿತು ಮಾಹಿತಿ ನೀಡಿದ ಕೆ.ಎಂ. ಜಾನಕಿ, 42 ಸೆಕ್ಟರ್ ಅಧಿಕಾರಿಗಳು, 54 ಫ್ಲೈಯಿಂಗ್ ಸ್ಕ್ವಾಡ್, 37 ವಿಎಸ್‌ಟಿ, 34 ವಿವಿಟಿ, 22 ಎಂಎಂಸಿ ಅಧಿಕಾರಿಗಳನ್ನು ನೇಮಿಸಿದ್ದು, ಸದ್ಯ ಎರಡು ಪ್ರಕರಣಗಳು ಮಾತ್ರ ನೀತಿ ಸಂಹಿತೆ ಉಲ್ಲಂಘನೆ ಅಡಿ ದಾಖಲಾಗಿವೆ ಎಂದರು.
ಸಾಮಾನ್ಯ ಚುನಾವಣೆಗಿಂತ ವಿಧಾನ ಪರಿಷತ್ ಚುನಾವಣೆಯು ತುಸು ಭಿನ್ನವಾಗಿದೆ. ಮತದಾರರು ತಮ್ಮ ಮತಗಳನ್ನು ಪ್ರಾಶಸ್ತ್ಯದ ರೂಪದಲ್ಲಿ ಅಂಕಿಗಳನ್ನು ಬರೆಯುವ ಮೂಲಕವೇ ಹಾಕಬೇಕು. ಈ ಚುನಾವಣೆಯಲ್ಲಿ ಯಾವುದೇ ನೋಟಾ ರೀತಿಯ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅ. 27ರಂದು ಮತ ಎಣಿಕೆ ಪ್ರಕ್ರಿಯೆಯು ಧಾರವಾಡದ ಕೃಷಿ ವಿವಿ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಕುಬೇರಪ್ಪ ವಾಪಸ್