ಚಿಂಚೋಳಿ: ಪಟ್ಟಣದ ಹೊರವಲಯದಲ್ಲಿ ಇರುವ ತಾಲೂಕ ಕ್ರೀಡಾಂಗಣವು ಸಂಪೂರ್ಣವಾಗಿ ಸರಕಾರದ ನಿರ್ಲಕ್ಷತನಕ್ಕೆ ಒಳಗಾಗಿದೆ.ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಮೂಲಸೌಕರ್ಯಗಳಿಲ್ಲದಿರುವ ಕಾರಣ ಟೂರ್ನಮೆಂಟಗಳಲ್ಲಿ ಭಾಗವಹಿಸಲು ಬೇರೆಡೆಯಿಂದ ಬರುವ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ ಎಂದು ತಾಲೂಕ ಬಿಜೆಪಿ ವಕ್ತಾರ ನ್ಯಾಯವಾದಿ ಶ್ರೀಮಂತ ಕಟ್ಟಿಮನಿ ದೂರಿದ್ದಾರೆ.
ತಾಲೂಕ ಕ್ರೀಡಾಂಗಣವನ್ನು ೨ಕೋಟಿ ರೂ.ಗಳಲ್ಲಿ ಕಂಪೌಂಡ ಮತ್ತು ಟ್ರಯಾಕ್ ಮತ್ತು ಪೀಲ್ಡ ಮಾಡಲಾಗಿದೆ. ಆದರೆ, ಸಮತಟ್ಟಾಗಿಲ್ಲ. ರನ್ನಿಂಗ ಮಾಡುವುದು ಕಷ್ಟವಾಗಿದೆ. ಇಲ್ಲಿ ಯಾವುದೇ ಆಟದ ಮೈದಾನಗಳಿಲ್ಲ. ಕಬ್ಬಡ್ಡಿ, ಲಾಂಗಜಂಪ, ಹೈಜಂಪ,| ಖೋಖೋ, ಡಿಸ್ಕ್ ಥ್ರೋ, ಶಾಟ್‌ಪುಟ್ ಮೈದಾನಗಳಿಲ್ಲ. ಹೀಗಾಗಿ ಕ್ರೀಡಾಪಟುಗಳಿಗೆ ಇಲ್ಲಿ ಪ್ರಾಕ್ಟೀಸ್ ಮಾಡಲು ಆಗುತ್ತಿಲ್ಲ ಎಂದರು.
ರಾಜ್ಯ ಕ್ರೀಡೆ ಯುವಸೇವಾ ಮತ್ತು ಸಬಲೀಕರಣ ಇಲಾಖೆ ಅಧಿಕಾರಿಗಳು ಗಮನಹರಿಸಿ ಕೂಡಲೇ ಕ್ರೀಡಾಪಟುಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದುಎಂದು ಬಿಜೆಪಿ ವಕ್ತಾರ ನ್ಯಾಯವಾದಿ ಶ್ರೀಮಂತ ಕಟ್ಟಿಮನಿ ದೂರಿದ್ದಾರೆ.