ಸೋಮರಡ್ಡಿ ಅಳವಂಡಿ ಕೊಪ್ಪಳ
ಹೀಗಾಗಿ ಕಡಿಮೆ ಅಂಕ ಬಂದಿದೆ ಎಂದು ಕೊರಗುತ್ತಾ ಕುಳಿತುಕೊಳ್ಳುವ ಬದಲು ಅತ್ಯುತ್ತಮ ಅವಕಾಶ ಸದ್ಬಳಕೆ ಮಾಡಿಕೊಂಡು ಬದುಕಿನಲ್ಲಿ ಯಶಸ್ವಿಯಾಗಲು ಸಾವಿರಾರು ಮಾರ್ಗಗಳಿವೆ.
ರಾಜ್ಯಾದ್ಯಂತ 1500 ಐಟಿಐ ಕಾಲೇಜು ಇದ್ದು, ಇದರಲ್ಲಿ 270 ಸರ್ಕಾರಿ, 190 ಅನುದಾನಿತ ಹಾಗೂ ಉಳಿದವು ಖಾಸಗಿಯಾಗಿವೆ. ಇಲ್ಲಿ ಜಸ್ಟ್ ಪಾಸ್ ಮತ್ತು ಫೇಲಾದವರಿಗೂ ಕೋರ್ಸ್ ಇವೆ. ಅಷ್ಟೇ ಅಲ್ಲ ಬೆಂಗಳೂರಿನ ಟೋಯೋಟಾ ಸಂಸ್ಥೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.50 ರಷ್ಟು ಅಂಕ ಪಡೆದವರಿಗೆ ಉಚಿತ ವಸತಿ, ಊಟದೊಂದಿಗೆ ತರಬೇತಿ ಶಿಕ್ಷಣ ನೀಡುತ್ತದೆ. ನಂತರ ಉದ್ಯೋಗಾವಕಾಶ ನೀಡುತ್ತದೆ. ಇಂತಹ ನೂರಾರು ಸಂಸ್ಥೆಗಳು ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದಿದ್ದರೂ ಅವಕಾಶ ನೀಡಲು ತರಬೇತಿ ನಡೆಸುತ್ತಿವೆ. ಐಟಿಐ ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರತಿ ಕಾಲೇಜಿನಲ್ಲಿಯೂ ಜೆಸ್ಟ್ ಪಾಸ್ ಆದವರಿಗೆ ವಿವಿಧ 13 ತರಬೇತಿ ಕೋರ್ಸ್ ಇರುತ್ತವೆ. ಫೇಲಾದವರಿಗೆ ಎರಡು ಕೋರ್ಸ್‌ಗಳಿವೆ. ಐಟಿಐ ಸಂಸ್ಥೆಯಲ್ಲಿ ತರಬೇತಿ ಪಡೆದ ಬಳಿಕ ತಾಂತ್ರಿಕ ಶಿಕ್ಷಣಾಧಾರಿತ ಉದ್ಯೋಗವಕಾಶ ಸಹ ಪಡೆಯಬಹುದಾಗಿದೆ. ರೇಲ್ವೆ, ರಕ್ಷಣಾ, ಬಿಎಚ್ ಇಎಲ್, ಎಸ್ಎಐಎಲ್, ಎಚ್ಎಎಲ್ ಮತ್ತು ರಾಜ್ಯದ ವಿದ್ಯುತ್ ಮಂಡಳಿಗಳಲ್ಲಿ ತಾಂತ್ರಿಕ ಸಹಾಯಕ ಮತ್ತು ಟೆಕ್ನಿಶಿಯನ್ ಆಗಿ ಕೆಲಸ ಪಡೆಯಬಹುದು. ಇದಲ್ಲದೆ ಖಾಸಗಿ ವಲಯದಲ್ಲಿಯೂ ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಮ್ಯಾನುಪ್ಯಾಕ್ಟರಿಂಗ್, ಕೈಗಾರಿಕೆಗಳಲ್ಲಿ ಪಿಟ್ಟರ್, ಆಟೋ ಮೆಕ್ಯಾನಿಕ್ ಸೇರಿದಂತೆ ಅನೇಕ ಅವಕಾಶಗಳು ಇವೆ.ಐಟಿಐ ಮುಗಿಸಿದ ಮೇಲೆ ಅಪ್ರೆಂಟಿಸ್ ನಂತರ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ 5 ವರ್ಷ ಸೇವೆ ಮಾಡಿದವರನ್ನೇ ಐಟಿಐ ಕಾಲೇಜುಗಳಿಗೆ ಜೂನಿಯರ್ ಟ್ರೇನಿಂಗ್ ಆಫೀಸರ್ ಎಂದು ರಾಜ್ಯ ಸರ್ಕಾರವೇ ನೇಮಕ ಮಾಡಿಕೊಳ್ಳುತ್ತದೆ.
ಹೀಗಾಗಿ, ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಬಂದಿದೆ ಮತ್ತು ಫೇಲಾಗಿದ್ದೇವೆ ಎಂದು ಧೃತಿಗೆಡದೆ ಇಂತಹ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ.