ಯಾವುದೇ ಸಾಮಾಜಿಕ ಬಹಿಷ್ಕಾರವಿಲ್ಲ. ಹೇಳಿರುವುದೆಲ್ಲ ಕಟ್ಟುಕತೆ-ಕಟ್ಟುಕತೆ---
ನಾವು ಯಾವುದೇ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ. ಪ್ರಭುಸ್ವಾಮಿ ಮತ್ತು ನಾಗರಾಜಮ್ಮ ಹೇಳಿರುವುದೆಲ್ಲ ಕಟ್ಟು ಕತೆ ಎಂದು ಕೊಳ್ಳೇಗಾಲ ಪಟ್ಟಣದ ಉಪ್ಪಾರ ಬಡಾವಣೆಯ ಮುಖಂಡರು ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಾಯಾದಿಗಳು ಜಮೀನಿನ ವಿಷಯವಾಗಿ ಮಾಡಿದ ಮೋಸದ ವಿಚಾರವಾಗಿ ಯಜಮಾನರು ಅವರ ಪರ ನಿಂತು ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿ ತೊಂದರೆ ಕೊಡುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.ಇವರ ತಂದೆಯ ಕಾಲದಲ್ಲೇ ಮಾರಿದ ಜಮೀನು ನನಗೆ ಸೇರಿದ್ದು ಎಂದು ಅಕ್ರಮ ಖಾತೆ ಮಾಡಿಸಿಕೊಂಡು ದಾಯಾದಿಗಳಿಗೆ ತೊಂದರೆ ಕೊಡುತ್ತಿರುವುದೇ ಪ್ರಭುಸ್ವಾಮಿ ದಂಪತಿಗಳು, ನಾವು ಯಾವುದೇ ನ್ಯಾಯ ಪಂಚಾಯಿತಿ ಮಾಡುವುದಿಲ್ಲ, ಹಬ್ಬ ಹರಿದಿನ, ಉತ್ಸವಗಳನ್ನು ಮಾಡುವಾಗ ಯಾವುದೆ ಮನೆಗೆ ಹೋಗಿ ವಸೂಲಿ ಮಾಡುವುದಿಲ್ಲ, ಇಷ್ಟವಿದ್ದವರು ತಾವೇ ದೇವರ ಉತ್ಸವದ ವೆಚ್ಚಕ್ಕೆ ಕೊಡುತ್ತಾರೆ, ಪ್ರಭುಸ್ವಾಮಿ ಬಂದು ಕೊಟ್ಟರು ತೆಗೆದುಕೊಳ್ಳುತ್ತೇವೆ ಎಂದರು.
ಮುಖಂಡರಾದ ಪರಮೇಶ್ ಅವರನ್ನು ಬಾಯಿಗೆ ಬಂದಂತೆ ನಿಂದಿಸಿ ಅವರ ಮೇಲೆ ಹಲ್ಲೆಗೆ ಪ್ರಯತ್ನಪಟ್ಟ ಹಿನ್ನಲೆಯಲ್ಲಿ ನಾವು ಎರಡು ಬಾರಿ ಕೊಳ್ಳೇಗಾಲ ಪಟ್ಟಣ ಠಾಣೆಗೆ ದೂರು ನೀಡಿದ್ದೇವೆ, ಪ್ರಭುಸ್ವಾಮಿ ತಮ್ಮ ಮನೆ ಮುಂದೆ ಚರಂಡಿ ಕೆಲಸ ಮಾಡಲು ಬಿಡದೆ ಈ ಜಾಗ ನನಗೆ ಸೇರಿದ್ದು ಎಂದು ಕೋರ್ಟಿಗೆ ಹೋಗಿದ್ದಾರೆ, ಕೋರ್ಟು ತೀರ್ಪು ಬರುವವರಿಗೆ ಅಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದರು.ಬಡಾವಣೆಯ ಯಾರೊಂದಿಗೂ ಸರಿಯಾಗಿ ಮಾತನಾಡುವುದಿಲ್ಲ, ಸಾಮಾಜಿಕ ಬಹಿಷ್ಕಾರ ಎನ್ನುವುದೇ ಸುಳ್ಳು, ಠಾಣೆಯವರು ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ. ವ್ಯವಸಾಯದಲ್ಲಿ ನಷ್ಟವಾಗಿ ಬೆಂಗಳೂರಿಗೆ ಹೋಗಿದ್ದರೆ ಹೊರತು ಯಾವುದೇ ಬಹಿಷ್ಕಾರದಿಂದಲ್ಲ, ಪ್ರಭುಸ್ವಾಮಿ ದಂಪತಿ ಹೇಳುವುದೆಲ್ಲ ಸುಳ್ಳು ಮತ್ತು ಕಟ್ಟುಕತೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪರಮೇಶ್ವರ, ನಟರಾಜು, ನಂಜುಂಡ, ಕೃಷ್ಣ, ಧರಣೇಶ್, ಚಂದ್ರ, ಪ್ರಭುಸ್ವಾಮಿ, ಬಸವರಾಜು ಇದ್ದರು.------೧೯ಸಿಎಚ್‌ಎನ್೧ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೊಳ್ಳೇಗಾಲ ಪಟ್ಟಣದ ಉಪ್ಪಾರ ಬಡಾವಣೆಯ ಮುಖಂಡರು ಮಾತನಾಡಿದರು.--------------