ರಾಜ್ಯದಲ್ಲಿ ಡಿಸಿಎಂ ಸ್ಥಾನ ಖಾಲಿ ಇಲ್ಲ : ಚಲುವರಾಯಸ್ವಾಮಿ

KannadaprabhaNewsNetwork |  
Published : Jun 27, 2024, 01:07 AM ISTUpdated : Jun 27, 2024, 01:21 PM IST
N. Chaluvarayaswamy

ಸಾರಾಂಶ

ರಾಜ್ಯದಲ್ಲಿ ಡಿಸಿಎಂ‌ ಹುದ್ದೆ ಖಾಲಿ ಇಲ್ಲ, ನಾನು ಯಾರು ಪರ ಹಾಗೂ ಯಾರ ವಿರೋಧ ಇಲ್ಲ. ಸದ್ಯ ಡಿಸಿಎಂ ಸ್ಥಾನ ಖಾಲಿ ಇಲ್ಲ, ಖಾಲಿ ಇದ್ದಾಗ ಹೈಕಮಾಂಡ್ ನೋಡುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

 ಬೆಳಗಾವಿ ;  ರಾಜ್ಯದಲ್ಲಿ ಡಿಸಿಎಂ‌ ಹುದ್ದೆ ಖಾಲಿ ಇಲ್ಲ, ನಾನು ಯಾರು ಪರ ಹಾಗೂ ಯಾರ ವಿರೋಧ ಇಲ್ಲ. ಸದ್ಯ ಡಿಸಿಎಂ ಸ್ಥಾನ ಖಾಲಿ ಇಲ್ಲ, ಖಾಲಿ ಇದ್ದಾಗ ಹೈಕಮಾಂಡ್ ನೋಡುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ನಿಲುವು ಇರುವ ಪಕ್ಷ. ವೈಯಕ್ತಿಕವಾಗಿ ಕೆಲವರು ಮಾತಾಡಿದ್ದಾರೆ, ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಜವಾಬ್ದಾರಿ ಅಧ್ಯಕ್ಷರು, ಮುಖ್ಯಮಂತ್ರಿ ಇದ್ದಾರೆ, ನೋಡಿಕೊಳ್ಳುತ್ತಾರೆ. ಡಿಸಿಎಂ ಚರ್ಚೆ ವಿಚಾರದ ಕುರಿತು ನಾನು ಮಾತಾಡಲ್ಲ ಎಂದರು.ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ ವಾಸ್ತವ್ಯ ವಿಚಾರಕ್ಕೆ ಉತ್ತರಿಸಿದ ಅವರು, ಅಧ್ಯಕ್ಷರು ನೋಡಿಕೊಳ್ಳುತ್ತಿದ್ದಾರೆ.

 ಚನ್ನಪಟ್ಟಣಕ್ಕೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಡಿಕೆಶಿ ಅಥವಾ ಡಿ.ಕೆ.ಸುರೇಶ್ ಯಾರು ಎಂಬುವುದು ತೀರ್ಮಾನ ಆಗಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಕುಳಿತು ಚರ್ಚೆ ಮಾಡುತ್ತಾರೆ ಎಂದರು.

ಮಂಡ್ಯದಲ್ಲಿ ನನ್ನ ಸೋಲಿಸಲು ಯತ್ನಿಸಿದರೂ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ನಮ್ಮನ್ನು ಸೋಲಿಸಲು ನೋಡಿದರೂ ಆಗ ನಾವು ಗೆದ್ದೇವು. ನಾನು ಜೆಡಿಎಸ್‌ನಲ್ಲಿ ಇಲ್ಲ, ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಬೇಕು. ನಮ್ಮ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡಿದ್ದೇವೆ. ಕುಮಾರಸ್ವಾಮಿ ಅವರು ಕೆಲಸ ಮಾಡಲಿ, ಒಂದು ವರ್ಷ ಏನೂ ಮಾತಾಡಲ್ಲ. ಕುಮಾರಸ್ವಾಮಿ ಹೊಸದಾಗಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ತಂದೆ ಮಾಡಲು ಆಗದ್ದನ್ನು ಕೆಲಸ ಮಾಡುತ್ತೇನೆಂದು ಭರವಸೆ ಕೊಟ್ಟಿದ್ದಾರೆ. ಅವರು ಕೆಲಸ ಮಾಡಿದರೇ ನಾನು ಹೆಚ್ಚು ಖುಷಿ ಪಡುತ್ತೇನೆ. 

ಈಗ ಕುಮಾರಸ್ವಾಮಿ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲ ಎಂದು ತಿಳಿಸಿದರು.ದೇವೆಗೌಡರ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ಮಾತಾಡಿಲ್ಲ. ಕೋರ್ಟ್ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ಕುಮಾರಸ್ವಾಮಿ ಅವರು ಡಿವೈಡ್ ಆಗಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಹೀಗಾಗಬಾರದಿತ್ತು. ಅದನ್ನು ಕಾನೂನು ನೋಡುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!