ಅಭಿವೃದ್ಧಿ ವಿಷಯದಲ್ಲಿ ಪಕ್ಷಭೇದ ಮಾಡುತ್ತಿಲ್ಲ

KannadaprabhaNewsNetwork |  
Published : Oct 17, 2024, 12:54 AM IST
ಬೆಳಗುಂದಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು | Kannada Prabha

ಸಾರಾಂಶ

ಪಕ್ಷಾತೀತವಾಗಿ ಗ್ರಾಮಗಳ ಅಭಿವೃದ್ಧಿ ಮಾಡುತ್ತಿದ್ದು, ಅಭಿವೃದ್ಧಿ ವಿಷಯದಲ್ಲಿ ಯಾವುದೇ ಪಕ್ಷಭೇದ ಮಾಡುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪಕ್ಷಾತೀತವಾಗಿ ಗ್ರಾಮಗಳ ಅಭಿವೃದ್ಧಿ ಮಾಡುತ್ತಿದ್ದು, ಅಭಿವೃದ್ಧಿ ವಿಷಯದಲ್ಲಿ ಯಾವುದೇ ಪಕ್ಷಭೇದ ಮಾಡುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜ ಯುವಕ ಮಂಡಳದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ‌ ಅವರು, ಬೆಳಗುಂದಿಯಲ್ಲಿ ವಾಲ್ಮೀಕಿ ಮಹಾರಾಜರ ಮಂದಿರಕ್ಕೆ ₹15 ಲಕ್ಷ ಮಂಜೂರು ಮಾಡಿಸಿದ್ದೇನೆ. ಮಳೆ ಮುಗಿದ ತಕ್ಷಣ ಮಂದಿರದ ಕೆಲಸ ಶುರುವಾಗಲಿದೆ ಎಂದರು.ಯಾವುದೇ ಪಕ್ಷಭೇದ ಮಾಡದೆ, ಗ್ರಾಮಸ್ಥರು ಕೇಳಿದ ಕೆಲಸಗಳನ್ನು ಚಾಚೂ ತಪ್ಪದೇ ಮಾಡಿಕೊಡುತ್ತಿದ್ದೇನೆ. ಮಳೆ ಕಾರಣದಿಂದಾಗಿ ರಸ್ತೆ ಕಾಮಗಾರಿ ವಿಳಂಬವಾಗಿರಬಹುದು. ಗ್ರಾಮದಲ್ಲಿರುವ ರವಳನಾಥ ಮಂದಿರಕ್ಕೂ ನೆರವು ನೀಡಲಾಗಿದೆ ಎಂದ ಅವರು, ಕ್ಷೇತ್ರದ ಜನರ ಆಶೀರ್ವಾದದಿಂದ ಸಚಿವೆಯಾಗಿರುವೆ. ಜೊತೆಗೆ ಉಡುಪಿ ಜಿಲ್ಲಾ ಉಸ್ತುವಾರಿಯನ್ನು ನನಗೆ ವಹಿಸಲಾಗಿದೆ. ಸಚಿವೆಯಾಗಿರುವುದರಿಂದ ಬೆಳಗಾವಿ, ಉಡುಪಿ, ಬೆಂಗಳೂರು ನಡುವೆ ಓಡಾಟದ ನಡುವೆಯೂ ಕ್ಷೇತ್ರದ ಅಭಿವೃದ್ಧಿ ಮರೆತಿಲ್ಲ ಎಂದು ತಿಳಿಸಿದರು. ನಿಮ್ಮೆಲ್ಲರ ಸಹಕಾರ ನನಗೆ ಮುಂದಿನ ದಿನಗಳಲ್ಲೂ ಇರಲಿ. ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗೋಣ ಎಂದರು. ಈ ವೇಳೆ ಯುವರಾಜ್ ಕದಂ, ಶಿವಾಜಿ ಬೋಕಡೆ, ದಯಾನಂದ ಗೌಡ, ಪರಶುರಾಮ ನಾಯ್ಕ್, ಮಾರುತಿ ನಾಯ್ಕ್, ಲಕ್ಷ್ಮಣ ನಾಯ್ಕ್, ಕೆಮಾನಿ ತಳವಾರ, ನಾರಾಯಣ ತಳವಾರ, ಅಜಿತ್ ತಳವಾರ, ಸವಿತಾ ತಳವಾರ, ರಂಜನ ಗೌಡ, ಮನೋಹರ್ ಬೆಳಗಾಂವ್ಕರ್, ರೆಹಮಾನ್ ತಹಶಿಲ್ದಾರ್, ಅಡಿವೇಶ್ ಇಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮಂದಿರ ಕಾಮಗಾರಿ ಪರಿಶೀಲನೆ:

ಬೆಳಗುಂದಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ರವಳನಾಥ ದೇವಸ್ಥಾನದ ಕಟ್ಟಡ ಕಾಮಗಾರಿಗಳನ್ನು ಸಚಿವರು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ದಯಾನಂದ ಗಾವಡಾ, ಶಿವಾಜಿ ಬೋಕಡೆ, ರಾಮಚಂದ್ರ ಪಾಟೀಲ, ಯಲ್ಲಪ್ಪ ಶಹಾಪೂರಕರ್, ಅಶೋಕ ಪಾಟೀಲ, ಕೃಷ್ಣ ಗಾವಡಾ, ಪರಶು ಶಹಾಪೂರಕರ್, ಅಪ್ಪಾಜಿ ಶಿಂಧೆ, ಯಲ್ಲಪ್ಪ ಬೆಟಗೇರಿಕರ್, ಸುರೇಶ್ ಪಾವುಸಕರ್, ಕಿರಣ ಮೋಟನಕರ್, ಮಹಾದೇವ್ ಬೋಕಮುರ್ಕರ್, ರವಿ ನಾಯ್ಕ್, ವಿಠ್ಠಲ ಬಾಂಡಗೆ ಉಪಸ್ಥಿತರಿದ್ದರು.ಯಾವುದೇ ಪಕ್ಷಭೇದ ಮಾಡದೆ, ಗ್ರಾಮಸ್ಥರು ಕೇಳಿದ ಕೆಲಸಗಳನ್ನು ಚಾಚೂ ತಪ್ಪದೇ ಮಾಡಿಕೊಡುತ್ತಿದ್ದೇನೆ. ಮಳೆ ಕಾರಣದಿಂದಾಗಿ ರಸ್ತೆ ಕಾಮಗಾರಿ ವಿಳಂಬವಾಗಿರಬಹುದು. ಗ್ರಾಮದಲ್ಲಿರುವ ರವಳನಾಥ ಮಂದಿರಕ್ಕೂ ನೆರವು ನೀಡಲಾಗಿದೆ ಎಂದ ಅವರು, ಕ್ಷೇತ್ರದ ಜನರ ಆಶೀರ್ವಾದದಿಂದ ಸಚಿವೆಯಾಗಿರುವೆ. ಜೊತೆಗೆ ಉಡುಪಿ ಜಿಲ್ಲಾ ಉಸ್ತುವಾರಿಯನ್ನು ನನಗೆ ವಹಿಸಲಾಗಿದೆ. ಸಚಿವೆಯಾಗಿರುವುದರಿಂದ ಬೆಳಗಾವಿ, ಉಡುಪಿ, ಬೆಂಗಳೂರು ನಡುವೆ ಓಡಾಟದ ನಡುವೆಯೂ ಕ್ಷೇತ್ರದ ಅಭಿವೃದ್ಧಿ ಮರೆತಿಲ್ಲ.

-ಲಕ್ಷ್ಮೀ ಹೆಬ್ಬಾಳಕರ್,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ಕೋರ್ಟ್‌ಗೆ: ಮುತಾಲಿಕ್‌
ಗುರುರಾಜ್ ಹೆಬ್ಬಾರ್ ಸ್ಮರಣಾರ್ಥ ರಕ್ತದಾನ ಶಿಬಿರ