ರಾಮನಗರ: ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ರಾಜ್ಯಕ್ಕೆ ಬರುತ್ತಿರುವ ಅನುದಾನವನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ತಿರುಗೇಟು ನೀಡಿದರು.
ಕಳೆದ 10 ವರ್ಷದಲ್ಲಿ ರಾಜ್ಯಕ್ಕೆ 5ಲಕ್ಷ ಕೋಟಿ ಅನುದಾನ ಬಂದಿದೆ. ಅದನ್ನು ರಾಜ್ಯ ಸಮರ್ಪಕವಾಗಿ ಬಳಸಬೇಕು ಅಷ್ಟೇ. ರೈಲ್ವೆ ಯೋಜನೆಗಳಿಗೆ ಸುಮಾರು ಏಳೂವರೆ ಸಾವಿರ ಕೋಟಿ ಅನುದಾನ ಬಂದಿದೆ. ರಾಜ್ಯದಲ್ಲೂ ಆಂತರಿಕ ಸಂಪನ್ಮೂಲ ಚೆನ್ನಾಗಿದೆ. ಅದನ್ನು ಶಾಶ್ವತ ಯೋಜನೆಗಳಿಗೆ ಹೆಚ್ಚು ಕರ್ಚು ಮಾಡಬೇಕು ಎಂದು ಹೇಳಿದರು.
ಕಬ್ಬು ಬೆಳೆಗಾರರು ಬೆಂಬಲ ಬೆಲೆಗಾಗಿ ಹೋರಾಟ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಇದರಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಕ್ಕರೆ ಮಾಲೀಕರ ಜವಾಬ್ದಾರಿ ಕೂಡಾ ಇದೆ. ಈಗಾಗಲೇ ಇದನ್ನು ಕೇಂದ್ರದ ಗಮನಕ್ಕೆ ತಂದಿದ್ದೇವೆ.ಚಳಿಗಾಲದ ಅಧಿವೇಶನದಲ್ಲಿ ಪ್ರಧಾನ ಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರ ಗಮನ ಸೆಳೆಯುತ್ತೇವೆ ಎಂದರು.ಮೇಕೆದಾಟು ಯೋಜನೆ ಡಿಪಿಆರ್ ವಿಚಾರವಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಇದಕ್ಕೆ ಕಾವೇರಿ ವಾಟರ್ ಮ್ಯಾನೇಜಿಂಗ್ ಅಥಾರಿಟಿ ಹಾಗೂ ಹಸಿರು ನ್ಯಾಯಾಲಯದ ಅನುಮತಿ ಬೇಕು. ಇದರ ಬಗ್ಗೆ ದೇವೇಗೌಡರ ನೇತೃತ್ವದಲ್ಲಿ ನಿರಂತರ ಹೋರಾಟ ಆಗುತ್ತಿದೆ.
18ಕೆಆರ್ ಎಂಎನ್ 3.ಜೆಪಿಜಿ