ಆಭಿವೃದ್ಧಿಗೆ ಕೊರತೆಯಿಲ್ಲ, ಜನರ ಪ್ರೀತಿ ವಿಶ್ವಾಸಕ್ಕೆ ಬರವಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು

KannadaprabhaNewsNetwork |  
Published : May 06, 2026, 03:45 AM IST
ದಿ.5-ಅರ್.ಪಿ.ಟಿ.1ಪಿ ಸಣ್ಣ ನೀರಾವರಿ ಇಲಾಖೆಯ ಯೋಜನೆಯಡಿ ಕ್ಷೇತ್ರದ ಚಿಕ್ಕಜೇನಿ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಮುತ್ತಲ ಗ್ರಾಮದ ಬಳಿ ಬ್ಯಾರೇಜ್ ಹತ್ತಿರ 35 ಲಕ್ಷ ರು. ಅಂದಾಜು ವೆಚ್ಚದ  ಪ್ರವಾಹ ಸಂರಕ್ಷಣಾ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಟೂರು ತಾವರೆಕರೆಯ 40 ಲಕ್ಷ ರು. ಅಂದಾಜು ವೆಚ್ಚದ  ಕೆರೆಹೂಳುತ್ತುವ ಕಾಮಗಾರಿಗೆ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಗುದ್ದಲಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅಭಿವೃದ್ದಿಯೇ ಮೂಲ ಮಂತ್ರವಲ್ಲ. ಬಡ ಜನರ ಕಣ್ಣೀರು ಒರೆಸುವುದರೊಂದಿಗೆ ಪ್ರೀತಿವಿಶ್ವಾಸ ಗಳಿಸುವುದು ಮುಖ್ಯ ಎಂದಿದ್ದರು. ಅವರ ಅದರ್ಶಗಳಲ್ಲಿ ಬೆಳೆದು ಬಂದ ನಾನು ಕೂಡಾ ಜನರ ಪ್ರೀತಿ ವಿಶ್ವಾಸಗಳಿಸುವುದರೊಂದಿಗೆ ಆಭಿವೃದ್ದಿಗೆ ಕೊರತೆಯಾಗದಂತೆ ನಡೆದುಕೊಂಡು ಬರುತ್ತಿರುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅಭಿವೃದ್ದಿಯೇ ಮೂಲ ಮಂತ್ರವಲ್ಲ. ಬಡ ಜನರ ಕಣ್ಣೀರು ಒರೆಸುವುದರೊಂದಿಗೆ ಪ್ರೀತಿವಿಶ್ವಾಸ ಗಳಿಸುವುದು ಮುಖ್ಯ ಎಂದಿದ್ದರು. ಅವರ ಅದರ್ಶಗಳಲ್ಲಿ ಬೆಳೆದು ಬಂದ ನಾನು ಕೂಡಾ ಜನರ ಪ್ರೀತಿ ವಿಶ್ವಾಸಗಳಿಸುವುದರೊಂದಿಗೆ ಆಭಿವೃದ್ದಿಗೆ ಕೊರತೆಯಾಗದಂತೆ ನಡೆದುಕೊಂಡು ಬರುತ್ತಿರುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಣ್ಣ ನೀರಾವರಿ ಇಲಾಖೆಯ ಯೋಜನೆಯಡಿ ಕ್ಷೇತ್ರದ ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮುತ್ತಲ ಗ್ರಾಮದ ಬಳಿ ಬ್ಯಾರೇಜ್ ಹತ್ತಿರ 35 ಲಕ್ಷ ರು. ಅಂದಾಜು ವೆಚ್ಚದ ಪ್ರವಾಹ ಸಂರಕ್ಷಣಾ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಟೂರು ತಾವರೆಕರೆಯ 40 ಲಕ್ಷ ರು. ಅಂದಾಜು ವೆಚ್ಚದ ಕೆರೆ ಹೂಳೆತ್ತುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಕೆರೆಗಳನ್ನು ಅಭಿವೃದ್ದಿ ಮಾಡುವುದರಿಂದಕೆರೆಯಲ್ಲಿ ಅಂತರ್ಜಲ ಹೆಚ್ಚಾಗುವುದು. ಸುತ್ತಮುತ್ತಲಿನ ಬಾವಿ ಬೋರ್‍ವೆಲ್‍ಗಳಲ್ಲಿ ಬೇಸಿಗೆಯಲ್ಲಿ ನೀರು ಬತ್ತಿಹೋಗದಂತೆ ಇರುವುದು ಹಾಗೂ ಪ್ರಾಣಿ ಪಕ್ಷಿಗಳಿಗೆ ಜಾನುವಾರಿಗೆ ಕುಡಿಯಲು ಸಹ ಬೇಸಿಗೆಯಲ್ಲಿ ನೀರು ದೊರೆಯುವಲು ಸಹಕಾರಿಯಾಗುತ್ತದೆ ಎಂದರು.

ರಿಪ್ಪನ್‍ಪೇಟೆಯ ಅಭಿವೃದ್ದಿಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ ಆದೇ ರೀತಿಯಲ್ಲಿ ಮಾರುತಿಪುರಕ್ಕೂ ಅಭಿವೃದ್ದಿಗೆ ಆದ್ಯತೆ ನೀಡಲಾಗಿ ಮಾರುತಿಪುರ ಬಳಿ ಗ್ರೀಡ್ ನಿರ್ಮಾಣ ಕಾರ್ಯ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.

ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆರಿಸುವ ಬಹುವರ್ಷದ ಕನಸು ನನ್ನದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗುವುದು. ಈಗಾಗಲೇ ಯಡೆಹಳ್ಳಿಯಿಂದ ರಿಪ್ಪನ್‍ಪೇಟೆಯ ಸುಮಾರು 10 ಕಿ.ಮೀ.ದೂರದ ರಾಜ್ಯ ಹೆದ್ದಾರಿಯ ಸಂಪರ್ಕ ರಸ್ತೆ ಸೇರಿದಂತೆ ವಿನಾಯಕ ವೃತ್ತದಿಂದ ನಾಲ್ಕು ಸಂಪರ್ಕ ರಸ್ತೆಯ ಅಗಲೀಕರಣ ಮತ್ತು ಒಳಚರಂಡಿ ಡಿವೈಡರ್ ಪಾದಚಾರಿಗಳಿಗೆ ಸೈಡ್ ಮೇಟ್ಲಿಂಗ್ ನಿರ್ಮಾಣ ವಿದ್ಯುತ್ ಸಂಪರ್ಕದ ಕಾಮಗಾರಿಗಾಗಿ 27 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದರು.

ಯಾರೋ ಮಾಡಿದ ಕಾಮಗಾರಿಯನ್ನು ನಾನು ಮಾಡಿಸಿದ್ದು ಎಂದು ಹೇಳಿಕೊಳ್ಳುವ ವ್ಯಕ್ತಿತ್ವದ ವ್ಯಕ್ತಿ ಈ ಬೇಳೂರು ಅಲ್ಲ. ಗ್ಯಾರಂಟಿ ಯೋಜನೆಯ ಜೊತೆಯಲ್ಲಿಯೂ ನನ್ನ ಕ್ಷೇತ್ರದ ಅಭಿವೃದ್ದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಹೆಚ್ಚಿನ ಅನುದಾನ ನೀಡಿದ್ದಾರೆ. ಆಭಿವೃದ್ದಿ ಕಾರ್ಯಕ್ಕೆ ಕೊರೆತೆಯಿಲ್ಲದೆ ನಾನು ಕ್ಷೇತ್ರದ ಜನರ ಪ್ರೀತಿ ವಿಶ್ವಾಸವನ್ನುಗಳಿಸುವುದರೊಂದಿಗೆ ಜನಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ಚಂದ್ರಮೌಳಿಗೌಡ. ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಚಿದಂಬರ್, ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿ ಮತ್ತು ಚಕ್ಕಜೇನಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಕಾಂಗ್ರೆಸ್ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಮತ ಗೊಂದಲ: ಆಯೋಗಕ್ಕೆ ವೀಕ್ಷಕರ ವರದಿ
ಜನಿವಾರ ಕೇಸ್‌: ವಿವಿಧ ಬ್ರಾಹ್ಮಣ ಸಂಘಟನೆ ಕಿಡಿ