ಉನ್ನತ ಗುರಿ ಇರಬೇಕು-ಶಂಕರ ಪಾಟೀಲ-ಶಂಕರ ಪಾಟೀಲ

KannadaprabhaNewsNetwork |  
Published : Dec 29, 2025, 03:00 AM IST
     ಶಿಗ್ಗಾವಿ ಪಟ್ಟಣದ ತಾಲೂಕ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ಮಾಮಲೇದೇಸಾಯಿ ಮಹಾವಿದ್ಯಾಲಯದಲ್ಲಿ ನಡೆದ ೭೮ ನೇ ವರ‍್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ | Kannada Prabha

ಸಾರಾಂಶ

ಐತಿಹಾಸಿಕ ಮಾಮಲೇ ದೇಸಾಯಿ ಶಿಕ್ಷಣ ಸಂಸ್ಥೆಯ ಸಾಧಕರ ಪ್ರೇರಣೆಯೇ ನನಗೆ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಆಯುಕ್ತ ಶಂಕರ ಪಾಟೀಲ ಹೇಳಿದರು.

ಶಿಗ್ಗಾಂವಿ: ಐತಿಹಾಸಿಕ ಮಾಮಲೇ ದೇಸಾಯಿ ಶಿಕ್ಷಣ ಸಂಸ್ಥೆಯ ಸಾಧಕರ ಪ್ರೇರಣೆಯೇ ನನಗೆ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಆಯುಕ್ತ ಶಂಕರ ಪಾಟೀಲ ಹೇಳಿದರು.

ಶಿಗ್ಗಾಂವಿ ಪಟ್ಟಣದ ತಾಲೂಕು ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ಮಾಮಲೇದೇಸಾಯಿ ಮಹಾವಿದ್ಯಾಲಯದಲ್ಲಿ ನಡೆದ ೭೮ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಾಧಕರಿರುವ ಈ ಸಂಸ್ಥೆಯ ಆದರ್ಶ ಗುಣಗಳು ನನಗೆ ಮಾದರಿಯಾಗಿದೆ. ಅಲ್ಲದೇ ಬರೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದರೇ ಮಾತ್ರ ಉನ್ನತ ವ್ಯಾಸಂಗ ಪಡೆಯಬಹುದು ಎಂಬುದು ತಪ್ಪು ಕಲ್ಪನೆ ಇದೆ. ಅದರಿಂದ ಹೊರಬರಬೇಕು ಮತ್ತು ಯಾವ ವ್ಯಕ್ತಿ ಏನನ್ನಾದರೂ ಸಾಧನೆ ಮಾಡಬಹುದು. ಅದಕ್ಕೆ ನಮ್ಮ ಆಯ್ಕೆ ಉತ್ತಮವಾಗಿರಬೇಕು, ಉನ್ನತ ಗುರಿ ಇರಬೇಕು ಎಂದರು.ಉಪಾಧ್ಯಕ್ಷ ದತ್ತಣ್ಣಾ ವರ್ಣೇಕರ ಸಮಿತಿ ವರದಿ ವಾಚಿಸಿದರು. ಪ್ರಾಚಾರ‍್ಯ ಆರ್.ಎಸ್. ಭಟ್ ವಿದ್ಯಾಲಯದ ವರದಿ ವಾಚನ ಮಂಡಿಸಿದರು. ರಟ್ಟಿಹಳ್ಳಿ ಎಎಸ್‌ಐ ಮತ್ತು ಜಾನಪದ ಕಲಾವಿದ ಅಶೋಕ ಕೊಂಡ್ಲಿ ಮಾತನಾಡಿ, ಸಾಧಿಸುವ ಛಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ. ಆ ನಿಟ್ಟಿನಲ್ಲಿ ಮಾಮಲೇ ದೇಸಾಯಿ ಸಮೂಹ ಸಂಸ್ಥೆ ವಿವಿಧ ಸಮುದಾಯದ ವಿದ್ಯಾರ್ಥಿಗಳ ಪಾಲಿಗೆ ಮಾದರಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಅಲ್ಲದೇ ಸರಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರು ವಂಚನೆಗೊಳಗಾಗುತ್ತಿದ್ದಾರೆ. ಆದ್ದರಿಂದ ಜಾಗೃತರಾಗಬೇಕು ಎಂದು ಹಾಸ್ಯ ಚಟಾಕಿಗಳ ಮೂಲಕ ರಂಜಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ನಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜಣ್ಣಾ ಮಾಮಲೇದೇಸಾಯಿ, ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ಡಾ.ಪಿ.ಆರ್. ಪಾಟೀಲ, ಎಸ್.ಎಂ. ಚಿನ್ನಪ್ಪನವರ, ವಿ.ಬಿ. ಮೇಟಿ, ಎಂ.ಎಲ್. ದೇಶಪಾಂಡೆ, ಸಿ.ಎಸ್. ಪಾಲನಕರ, ಎಸ್. ಎಸ್. ರಾಮಗೇರಿ, ಎಸ್.ಎಂ.ಬುಳ್ಳಕ್ಕನವರ, ವಿ.ಎಂ. ಅಂಕಲಕೋಟಿ, ಜಯಣ್ಣ ಹೆಸರೂರ, ಜಿ.ಎನ್. ಯಲಿಗಾರ, ಕೆ.ಡಿ. ಪಾಟೀಲ, ಟಿ.ವಿ. ಸುರಗಿಮಠ, ಹಿರೇಮಠ, ಬಿ.ಎಂ. ಹಿರೂಲಾಲ, ರಾಘವೇಂದ್ರ ದೇಶಪಾಂಡೆ, ಸಚಿನ ಜೋಶಿ, ಶಿವಾನಂದ ಕುನ್ನೂರ, ಬಸವರಾಜ ರಾಗಿ, ಗಂಗಾಧರ ಬುಳ್ಳಕ್ಕನವರ, ರಾಘವೇಂದ್ರ ಉಡುಪಿ ಸೇರಿದಂತೆ ಶಿಕ್ಷಕ ವೃಂದ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಉಪಪ್ರಾಚಾರ‍್ಯ ಕೆ.ಬಿ. ಚನ್ನಪ್ಪ ಸ್ವಾಗತಿಸಿದರು. ಶಿಕ್ಷಕ ಕೆ.ಎಚ್. ಬಂಡಿವಡ್ಡರ, ಎಸ್.ಟಿ.ಪೂಜಾರ ಕಾರ‍್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!