ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ನಿಲಯದ ಹೆಚ್ಚುವರಿ ನೂತನ ಕಟ್ಟಡದ ಶಂಕುಸ್ಥಾಪನೆ
ಈ ಕಟ್ಟಡದಲ್ಲಿ ಓದುವ ಮಕ್ಕಳು ಬಡವರ ಮಕ್ಕಳು. ಅವರಿಗೆ ಎಲ್ಲಾ ಮೂಲ ಸೌಕರ್ಯ ನೀಡಬೇಕಿದೆ. ಹಾಗಾಗಿ, ಈ ಕಟ್ಟಡ ನಿರ್ಮಾಣದಲ್ಲಿ ಹೆಚ್ಚು ಲಾಭ ನಿರೀಕ್ಷಿಸದೇ ಗುಣಮಟ್ಟದ ಕಾಮಗಾರಿ ನಡೆಸುವಂತೆ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಸುಮುಖನಗರದಲ್ಲಿ ಗುರುವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ನಿಲಯದ ಹೆಚ್ಚುವರಿ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಗುಣಮಟ್ಟದ ವಸ್ತು ಬಳಸಿ ಕಟ್ಟಡ ನಿರ್ಮಿಸಿ, ಆಗ ಕಾಮಗಾರಿ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಅಧಿಕಾರಿಗಳು ಆಗಾಗ ಪರಿಶೀಲಿಸಬೇಕು. ಲೋಪ ದೋಷ ಕಂಡು ಬಂದರೆ ತಕ್ಷಣ ಗಮನಕ್ಕೆ ತನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.ಚರಂಡಿ-ರಸ್ತೆ ಮಾಡಿ ಹಾಳಾದರೆ ಮತ್ತೆ ದುರಸ್ತಿ ಮಾಡಬಹುದು. ಆದರಿದು ಸರ್ಕಾರಿ ಕಟ್ಟಡ. ಇವೆಲ್ಲಾ ಶಾಶ್ವತವಾದ ಕೆಲಸ ಗಳಾಗಿವೆ. ಹೆಚ್ಚು ಲಾಭವನ್ನು ಬಯಸದೆ ಗುಣಮಟ್ಟದ ಕಟ್ಟಡ ನಿರ್ಮಿಸಿ, ಹತ್ತಾರು ವರ್ಷಗಳ ಬಾಳಿಕೆ ಬರುವಂತೆ ಮಾಡಿ. ಏಕೆಂದರೆ, ಈ ಕಟ್ಟಡದಲ್ಲಿ ಓದುವ ಮಕ್ಕಳು, ಬಡವರ ಮನೆಯ ಮಕ್ಕಳಾಗಿದ್ದಾರೆ ಎಂದರು.
ಶಾಸಕರಾದ ಸಂದರ್ಭದಲ್ಲಿ ಹೊಸ ಕಟ್ಟಡ ಉದ್ಘಾಟನೆ ಆಗಿತ್ತು. ಆದರೆ, ಈ ಕಟ್ಟಡ ಸಾಕಾಗುವುದಿಲ್ಲ ಎಂಬ ಒತ್ತಡದ ಮೇರೆಗೆ ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತರ ಇಲಾಖೆ ನಿಕಟ ಪೂರ್ವ ಸಚಿವ ಜಮೀರ್ ಅಹಮದ್ ಅವರಿಗೆ ಮನವಿ ಮಾಡಿದ ಮೇರೆಗೆ ₹3.50 ಕೋಟಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ನಿಲಯದ ಹೆಚ್ಚುವರಿ ನೂತನ ಕಟ್ಟಡದ ಕಾಮಗಾರಿಗೆ ಮಂಜೂರು ಮಾಡಿದ್ದಾರೆ ಎಂದರು.
ಜಗಜ್ಯೋತಿ ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್, ರಾಷ್ಟ್ರಪತಿ ಅಬ್ದುಲ್ ಕಲಾಂ ಅವರುಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಡವರ, ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣ ಪಡೆದು ಸಮಾಜದ ಸತ್ಪ್ರಜೆಯಾಗಿ ಬದುಕಬೇಕು ಎಂಬ ಮಾತನ್ನು ಹೇಳಿದ್ದರು.
ಫೋಟೊ: