ಬೇಸಿಗೆಯಲ್ಲಿ ವಿದ್ಯುತ್‌ ಸಮಸ್ಯೆ ಆಗಬಾರದು

KannadaprabhaNewsNetwork |  
Published : Mar 15, 2025, 01:01 AM IST

ಸಾರಾಂಶ

ಟಿಸಿ ಕೊಡುವ ವಿಚಾರದಲ್ಲಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ಬೇಸಿಗೆ ಮುಗಿಯುವವರೆಗೂ ಅತೀ ತುರ್ತಾಗಿ ೨೪ ಗಂಟೆಯಲ್ಲಿ ಟಿಸಿ ಕೊಡಬೇಕು. ಮಳೆ ಶುರುವಾಗುವವರೆಗೂ ಇಂಧನ ಇಲಾಖೆಯಿಂದ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡಲು ಸೂಚಿಸಕಲಾಗಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು. ಬೇಸಿಗೆ ಮುಗಿಯುವವರೆಗೂ ಅತೀ ತುರ್ತಾಗಿ ೨೪ ಗಂಟೆಯಲ್ಲಿ ಸರಕಾರದ ಸುತ್ತೋಲೆಯಲ್ಲಿ ಏನಿದೆ ಅದೆ ರೀತಿ ವಿದ್ಯುತ್‌ ಅನ್ನು ಕೊಡಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮಬದ್ಧವಾಗಿ ಮಾಡುವುದಾಗಿ ಹೇಳಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಟಿಸಿ ಕೊಡುವ ವಿಚಾರದಲ್ಲಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ಬೇಸಿಗೆ ಮುಗಿಯುವವರೆಗೂ ಅತೀ ತುರ್ತಾಗಿ ೨೪ ಗಂಟೆಯಲ್ಲಿ ಟಿಸಿ ಕೊಡಬೇಕು. ಮಳೆ ಶುರುವಾಗುವವರೆಗೂ ಇಂಧನ ಇಲಾಖೆಯಿಂದ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡಲು ಸೂಚಿಸಕಲಾಗಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.

ಮೊದಲು ಚೆಸ್ಕಾಂ ಇಲಾಖೆ ಅಧಿಕಾರಿಗಳ ಜೊತೆ ಸಂಸದರ ಕಚೇರಿಯಲ್ಲಿ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಸೆಸ್ಕ್‌ ಜೊತೆ ಜಂಟಿಯಾಗಿ ಸಭೆ ನಡೆಸಲಾಗಿದ್ದು, ಈಗ ಬೇಸಿಗೆ ಇರುವುದರಿಂದ ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಸಪ್ಲೆಯಲ್ಲಿ, ಸಿಂಗಲ್ ಫೇಸ್ ಆಗಿರಬಹುದು ಸಮಸ್ಯೆ ಆಗುತ್ತದೆ. ಕಡ್ಡಾಯವಾಗಿ ಏಳು ಗಂಟೆಗಳ ಕಾಲ ತ್ರೀ ಫೇಸ್ ಕೊಡಲೇಬೇಕು ಮತ್ತು ೨೪ ಗಂಟೆಗಳ ಕಾಲ ಸಿಂಗಲ್ ಫೇಸ್ ಕೊಡಲೇಬೇಕು ಎಂದು ಸೆಸ್ಕ್‌ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಅಧಿಕಾರಿಗಳು ಅಲ್ಲಿನ ನ್ಯೂನ್ಯತೆಗಳು ಹಾಗೂ ಏನು ಸಮಸ್ಯೆಗಳು ಇದೆ, ಏತಕ್ಕಾಗಿ ವಿದ್ಯುತ್ ನೀಡಲು ತಡವಾಗುತ್ತಿದೆ! ಇದನ್ನು ಸಂಬಂಧಪಟ್ಟವರ ಗಮನಕ್ಕೆ ತರುವ ಕೆಲಸ ಮಾಡಲಾಗುವುದು ಎಂದರು. ಜೊತೆಗೆ ರೈತರಿಗೆ ಟಿಸಿ ಸಮಸ್ಯೆ ಎದುರಾಗಿದ್ದು, ಬೇಸಿಗೆ ಎಂದು ಟಿಸಿಗಳು ಸುಟ್ಟು ಹೋಗುತ್ತಿದೆ. ತುರ್ತಾಗಿ ಟಿಸಿ ಕೊಡಬೇಕು. ಬೇಸಿಗೆಯಲ್ಲಿ ನೀರಿಲ್ಲದೇ ಬೆಳೆ ನಷ್ಟವಾಗಬಾರದು. ಟಿಸಿ ಕೊಡುವ ವಿಚಾರದಲ್ಲಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ಬೇಸಿಗೆ ಮುಗಿಯುವವರೆಗೂ ಅತೀ ತುರ್ತಾಗಿ ೨೪ ಗಂಟೆಯಲ್ಲಿ ಸರಕಾರದ ಸುತ್ತೋಲೆಯಲ್ಲಿ ಏನಿದೆ ಅದೆ ರೀತಿ ವಿದ್ಯುತ್‌ ಅನ್ನು ಕೊಡಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮಬದ್ಧವಾಗಿ ಮಾಡುವುದಾಗಿ ಹೇಳಿದ್ದಾರೆ ಎಂದರು.

ಸೆಷನ್ ಈಗಾಗಲೇ ಪ್ರಾರಂಭವಾಗಿದ್ದು, ಸೋಮವಾರದಿಂದ ನಾನು ಕೂಡ ಅದರಲ್ಲಿ ಪಾಲ್ಗೊಂಡು ಅಲ್ಲಿನ ಸಂಬಂಧಪಟ್ಟ ಕಾರ್ಯದರ್ಶಿಗಳು, ಸಚಿವರಾಗಿರಬಹುದು ಮನವಿ ಮಾಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಲಾಗುತ್ತಿದೆ. ನಮ್ಮ ಕೇಂದ್ರದಲ್ಲಿ ಯಾವ ಯಾವ ಕೆಲಸಗಳು ಆಗಬೇಕು, ಯಾವ ಸಚಿವರಿಗೆ ಮನವಿ ಮಾಡಬೇಕು ಎಂಬ ಬಗ್ಗೆ ಸಭೆ ಮಾಡಲಾಗುತ್ತಿದೆ. ಟಿಸಿ ಸುಟ್ಟು ಹೋದ ಮೇಲೆ ತಡವಾಗುತ್ತಿದೆ ಎನ್ನುವ ಬಗ್ಗೆ ಆರೋಪಗಳಿವೆ. ತುರ್ತಾಗಿ ೨೪ ಗಂಟೆಗಳ ಒಳಗೆ ಟಿಸಿ ಕೊಡುವಂತೆ ಹೇಳಲಾಗಿದೆ. ಟಿಸಿ ವಿಷಯದಲ್ಲಿ ನಮ್ಮ ಜಿಲ್ಲೆ ಒಳಗೆ ಯಾವ ಸಮಸ್ಯೆ ಇರುವುದಿಲ್ಲ. ಹೆಚ್ಚುವರಿ ಟಿಸಿ ನಮ್ಮಲ್ಲಿದ್ದು, ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಹೇಳಲಾಗಿದೆ ಎಂದರು. ಮಳೆ ಶುರುವಾಗುವವರೆಗೂ ಇಂಧನ ಇಲಾಖೆಯಿಂದ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡಲು ಸೂಚಿಸಿದಂತೆ ಮಾಡಲಾಗುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ