-ಹುಣಸಗಿ:ನಾರಾಯಣಪುರದ ಭೋರುಕಾ ಕಂಪನಿ ಕಾಲುವೆ ಬಳಿ ಕೊಲೆ ಶಂಕೆ
ಯುವಕನೋರ್ವನ ಕೈ-ಕಾಲುಗಳ ಕಟ್ಟಿ, ಕೃಷ್ಣಾ ನದಿಯ ಭೋರುಕಾ ಕಂಪನಿಯ ಕಾಲುವೆಯಲ್ಲಿ ಬಿಸಾಕಿ ಕೊಲೆ ಮಾಡಿರುವ ಘಟನೆ ನಾರಾಯಣಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕೆ ಪೋಲಿಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ಮದಲಿಂಗನಾಳ ಗ್ರಾಮದ ಭೀಮಣ್ಣ ಮಾದರ (19)ವರ್ಷ ಮೃತ ಯುವಕ ಎಂದು ಗುರುತಿಸಲಾಗಿದೆ. ಕೊಡೇಕಲ್ ಪಟ್ಟಣದಲ್ಲಿ ಕ್ಷೌರ ಮಾಡಿಸಿಕೊಂಡು ಬರುವುದಾಗಿ ಹೇಳಿ, ಅ.29ರಂದು ಮನೆಯಿಂದ ಹೊರಟ ಭೀಮಣ್ಣ, ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಆತಂಕದಿಂದ ನಾರಾಯಣಪುರ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ, ಕೊಲೆಗಾರರು ತಮ್ಮ ಮಗನ ಎರಡೂ ಕಾಲುಗಳಿಗೆ ಹಾಗೂ ಅವನ ಬಲಗೈಗೆ ಬಿಳಿ ನೂಲಿನ ಹಗ್ಗದಿಂದ ಕಟ್ಟಿ, ಕೊಲೆ ಮಾಡಿದ್ದಲ್ಲದೆ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಕೃಷ್ಣಾ ನದಿಗೆಸೆದು ಹೋಗಿದ್ದಾರೆ ಎಂದು ಮೃತ ಯುವಕನ ತಾಯಿ ದುರಗಮ್ಮ ಮಾದರ ಹೇಳಿಕೆಯಂತೆ, ನಾರಾಯಣಪುರ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
-ಕೋಟ್ -1 : ಯುವಕ ಕೊಲೆಯಾಗಿರುವ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತದೆ. ಆದಷ್ಟು ಬೇಗ ಪ್ರಕರಣವನ್ನು ಭೇದಿಸಿ ಆರೋಪಗಳನ್ನು ಬಂಧಿಸಲಾಗುತ್ತದೆ.
-ರಾಜಶೇಖರ, ಪಿಎಸ್ಐ, ನಾರಾಯಣಪುರ.----
ಕೋಟ್-2 : ಯುವಕ ಹತ್ಯೆ ಪ್ರಕರಣವನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ಬೇಧಿಸಿ, ಆರೋಪಿಗಳ ಬಂಧಿಸಬೇಕು. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ದಲಿತಪರ ಸಂಘಟನೆಗಳಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆ. - ಬಸವರಾಜ ಹಗರಟಗಿ, ದಲಿತ ಮುಖಂಡ.-
10ವೈಡಿಆರ್8 : ಕೊಲೆಯಾದ ಭೀಮಣ್ಣ.