ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪಟ್ಟಣದ ಹೊರವಲಯದ ಅಂಬೇಡ್ಕರ್ ವೃತ್ತದ ಬಳಿ ಗುಡಿಬಂಡೆ ಸಾರ್ವಜನಿಕರ ವತಿಯಿಂದ ಏರ್ಪಡಿಸಿದ್ದ ಸಾಲು ಮರದ ತಿಮ್ಮಕ್ಕಗೆ ಶ್ರದ್ಧಾಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಾಲು ಮರದ ತಿಮ್ಮಕ್ಕ ಯಾವುದೇ ಆಸೆಯಿಲ್ಲದೇ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಕೋಟ್ಯಂತರ ಪ್ರಾಣಿ ಸಂಕುಲಕ್ಕೆ ನೆರವಾಗಿದ್ದಾರೆ ಎಂದರು.
ತಿಮ್ಮಕ್ಕನ ಜಯಂತಿ ಆಚರಿಸಲಿತಿಮ್ಮಕ್ಕನ ಮಾದರಿಯಲ್ಲೆ ಎಲ್ಲರೂ ಪರಿಸರವನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ. ವಿಶ್ವ ಪರಿಸರ ದಿನವನ್ನು ಆಚರಣೆ ಮಾಡುವಂತೆ ಸಾಲು ಮರದ ತಿಮ್ಮಕ್ಕನವರ ಜಯಂತಿಯನ್ನು ಸಹ ಆಚರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.
ಊರಿಗೊಬ್ಬರು ತಿಮ್ಮಕ್ಕ ಹುಟ್ಟಲಿಬಳಿಕ ನಿವೃತ್ತ ಶಿಕ್ಷಕ ಎನ್.ನಾರಾಯಣಸ್ವಾಮಿ ಮಾತನಾಡಿ, ಈಗಾಗಲೇ ಪರಿಸರದ ಅಸಮತೋಲನದ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿವೆ. ಇದಕ್ಕೆಲ್ಲಾ ಇರುವುದು ಒಂದೇ ಪರಿಹಾರ ಅದು ಸಾಲು ಮರದ ತಿಮ್ಮಕ್ಕನಂತವರು ಊರಿಗೆ ಒಬ್ಬರು ಹುಟ್ಟಬೇಕು ಎಂದರು.
ದಲಿತ ಮುಖಂಡ ಇಸ್ಕೂಲಪ್ಪ ಸಾಲು ಮರದ ತಿಮ್ಮಕ್ಕನವರ ಕುರಿತು ಪರಿಸರ ಗೀತೆಯನ್ನು ಹಾಡುವ ಮೂಲಕ ತಿಮ್ಮಕ್ಕನವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದರು.