ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಯ ಚಿಂತನೆ: ಶಾಸಕ ಸಿ.ಎನ್. ಬಾಲಕೃಷ್ಣ

KannadaprabhaNewsNetwork |  
Published : Apr 30, 2026, 01:30 AM IST
29ಎಚ್ಎಸ್ಎನ್8 :  | Kannada Prabha

ಸಾರಾಂಶ

ತಾಲೂಕಿನಲ್ಲಿ ಕೈಗಾರಿಕೋದ್ಯಮ ಸ್ಥಾಪನೆ ಮಾಡುವ ಸಲುವಾಗಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಸಂಬಂಧ ಮನವಿ ಮಾಡಲಾಗಿದೆ.

ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕ್ರಮ । ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ: ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಸಲುವಾಗಿ ತಾಲೂಕಿನ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಕೈಗಾರಿಕೋದ್ಯಮ ಸ್ಥಾಪನೆಯ ಕುರಿತು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿರಿಸಿದರು.ಹೋಬಳಿ ಕೇಂದ್ರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಧರಣಿ ಕುಮಾರ್ ಹಾಗೂ ಜೆಡಿಎಸ್ ಯುವ ಮುಖಂಡ ದರ್ಶನ್ ಮಾಲೀಕತ್ವದ ನೂತನ ಜೆಡಿ ಅಡ್ಡ ಮೇನ್ಸ್ ವೇರ್ ಕಲೆಕ್ಷನ್ ಉದ್ಘಾಟಿಸಿ ಮಾತನಾಡಿದರು.ತಾಲೂಕಿನಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಕೆಲಸ ಕೊಡಿಸುವ ಸಲುವಾಗಿ ತಾಲೂಕಿನಲ್ಲಿ ಕೈಗಾರಿಕೋದ್ಯಮ ಸ್ಥಾಪನೆ ಮಾಡುವ ಸಲುವಾಗಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಸಂಬಂಧ ಮನವಿ ಮಾಡಲಾಗಿದೆ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರ ಸೇರಿದಂತೆ ಅನೇಕ ಭಾಗಗಳಲ್ಲಿ ತಾಲೂಕಿನ ಜನರು ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ತಾಲೂಕಿನಲ್ಲಿ ಸೂಕ್ತವಾದ ಜಾಗವನ್ನು ಗುರುತಿಸುವ ಮೂಲಕ ಕೈಗಾರಿಕೋದ್ಯಮವನ್ನು ಪ್ರಾರಂಭ ಮಾಡಿದರೆ ತಾಲೂಕಿನ ಸಾವಿರಾರು ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಈ ಬಗ್ಗೆ ಚಿಂತನೆ ನಡೆಸಲಾಗಿದೆ ಹೋಬಳಿ ಕೇಂದ್ರ ದಿನೇ ದಿನೇ ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು, ತಮ್ಮ ಸ್ವಂತ ಹೋಬಳಿ ಕೇಂದ್ರದಲ್ಲೇ ಹೊಸ ಉದ್ಯಮ ಪ್ರಾರಂಭ ಮಾಡುವ ದೃಷ್ಟಿಯಿಂದ ಜಂಬೂರು ಗ್ರಾಮದ ಧರಣಿ ಕುಮಾರ್ ಹಾಗೂ ದರ್ಶನ್ ನೂತನ ಉದ್ಯಮವನ್ನು ಪ್ರಾರಂಭ ಮಾಡಿದ್ದಾರೆ. ಬ್ರಾಂಡೆಡ್ ಬಟ್ಟೆಗಳು ಕಂಪನಿಯ ದರದಲ್ಲೇ ಸಿಗುವುದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.ಉದ್ಯಮಿ ಅಣತಿ ಯೋಗೇಶ್ ಹಾಗೂ ಜೆಡಿಎಸ್ ಯುವ ಮುಖಂಡ ಜೈದೀಪ್ ಗೌಡ ಮಾತನಾಡಿ, ನೂತನ ಸಗಟು ಮಾರಾಟ ಕೇಂದ್ರ ಹೆಚ್ಚು ಅಭಿವೃದ್ಧಿ ಪ್ರಸಿದ್ಧಿ ಪಡೆಯುವ ಮೂಲಕ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.ಇದೇ ಸಂದರ್ಭದಲ್ಲಿ ಶಾಸಕಾ ಸಿಎನ್ ಬಾಲಕೃಷ್ಣ ಹಾಗೂ ಉದ್ಯಮಿ ಅಣತಿ ಯೋಗೇಶ್ ತಾಲೂಕು ಜೆಡಿಎಸ್ ಯುವ ಮುಖಂಡ ಜೈದೀಪ್ ಗೌಡ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಮಹಾದೇವಮ್ಮ ಶಂಕರ್,ಟಿ ಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟಸ್ವಾಮಿ, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಿವಕುಮಾರ್, ಹೊನ್ನೇಗೌಡ, ಮಹಮ್ಮದ್ ಜಾವೀದ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಹೊನ್ನಮ್ಮ ಧರಣಿ ಕುಮಾರ್, ಉಪನ್ಯಾಸಕ ಗುರುರಾಜ್ , ಮುಖಂಡರಾದ ಮುರಳಿ, ಜೆಡಿಎಸ್ ಯುವ ಮುಖಂಡ ಜಂಬೂರು ಮಹೇಶ್, ಛಾಯಾ ಗುರುರಾಜ್, ನಾರಾಯಣಸ್ವಾಮಿ, ದಿನೇಶ್ ಎಸ್ಆರ್, ರಮೇಶ್ ಎಸ್ ಆರ್, ಕೇಶವಮೂರ್ತಿ, ಬಸವರಾಜ್, ಮಂಜುನಾಥ್, ಅಬ್ರಾಜ್, ತಬ್ರಾಜ್, ಗುಂಡ, ಧ್ಯಾನ ಧರಣಿ ಕುಮಾರ್, ಆಟೋ ಶಿವರಾಜ್, ಪ್ರೀತಮ್, ನೂರುಲ್ಲಾ ಹಾಜರಿದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶ್ರೀಷಡಕ್ಷರ ಗವಿಮಠದಲ್ಲಿ ಧಾರ್ಮಿಕ ಸಭೆ
ಗೋಮಾಳ ಜಮೀನಿನಲ್ಲಿ ಅಕ್ರಮ ಜೆಎಂಸಿ ಸರ್ವೇಗೆ ಖಂಡನೆ